ವಿವಿಧ ಸವಲತ್ತು ವಿತರಣಾ ಕಾರ್ಯಕ್ರಮ

ವಿವಿಧ ಸವಲತ್ತು ವಿತರಣಾ ಕಾರ್ಯಕ್ರಮ

ದಾವಣಗೆರೆ: ಪರಿಶಿಷ್ಟ ಜಾತಿಯ ಚರ್ಮ ಕುಶಲಕರ್ಮಿಗಳಿಗೆ ಕೌಶಲ್ಯ ಮತ್ತು ಅಭಿವೃದ್ಧಿ ಆದಾಯ ಗಳಿಕೆಗಾಗಿ ಮಾರ್ಚ್ 13 ರಂದು ನೇರ್ಲಿಗಿ ಹಾಗೂ ಆನಗೋಡು ಗ್ರಾಮದಲ್ಲಿ 60 ದಿನ ತರಬೇತಿ ಪಡೆದಿರುವ 64 ಫಲಾನುಭವಿಗಳಿಗೆ ಹೊಲಿಗೆ ಯಂತ್ರ ಹಾಗೂ ಉಪಕರಣ ಪೆಟ್ಟಿಗೆ ಮತ್ತು ಪ್ರಮಾಣ ಪತ್ರವನ್ನು ಮಾಯಕೊಂಡ ಶಾಸಕ ಪ್ರೋ.ಎನ್. ಲಿಂಗಣ್ಣ ವಿತರಣೆ ಮಾಡಿದರು.
ತರಬೇತಿ ಕಾರ್ಯಕ್ರಮಕ್ಕೆ ಒಟ್ಟು ರೂ.22 ಲಕ್ಷ ವೆಚ್ಚವಾಗಿರುತ್ತದೆ ಹಾಗೂ ಫಲಾನುಭವಿಗಳು ಉತ್ಪಾದನಾ ಕಾರ್ಯದಲ್ಲಿ ತೊಡಗಿ ಸ್ವಾವಲಂಬಿಗಳಾಗಿ ಜೀವನ ನಡೆಸಬೇಕು ಎಂದರು.
ಲಿಡ್ಕರ್ ನಿಗಮದ ಜಿಲ್ಲಾ ಸಂಯೋಜಕ ಎ.ಎಸ್. ರುದ್ರೇಶಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಂಗನಾಥ್, ನೇರ್ಲಿಗಿ ಗ್ರಾಮದ ಅಧ್ಯಕ್ಷೆ ಸುಮಂಗಲ, ಸದಸ್ಯೆ ರಂಗಮ್ಮ, ಬೋದಕ ಗೋಪಾಲ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!