ಕುಂಭ ಮೇಳದೊಂದಿಗೆ ಶ್ರೀದೇವಿ ಯನ್ನ ಬಡಿಗೇರ ಮನೆಯಿಂದ ದೇವಸ್ಥಾನಕ್ಕೆ ಬರಮಾಡಿಕೊಂಡ ಗ್ರಾಮಸ್ಥರು
ಹಾವೇರಿ : ಜಿಲ್ಲೆಯ ಸವಣೂರ ತಾಲ್ಲೂಕಿನ ಹಿರೇಮುಗದೂರ ಗ್ರಾಮದ ಶ್ರೀ ಸಾಲಿದುರಗಮ್ಮದೇವಿ ಹಾಗೂ ಮಾತಂಗೆಮ್ಮ ದೇವತೆಗಳ ಜಾತ್ರಾ ಮಹೋತ್ಸವ ನಿಮಿತ್ತ ಮೊದಲ ದಿನ ಶ್ರೀದೇವಿಯನ್ನು ಬಡಿಗೇರ ಮನೆಯಿಂದ ದೇವಸ್ಥಾನಕ್ಕೆ ಬರಮಾಡಿಕೊಳ್ಳುವ ಕಾರ್ಯಕ್ರಮ ಜರುಗಿತು.
ಮೆರವಣಿಗೆಯ ಕುಂಭ ಮೇಳದೊಂದಿಗೆ ಭರ್ಜರಿ ಹಳ್ಳಿ ಸೊಬುಗಿನ ಡೊಳ್ಳು ಕುಣಿತ ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನೋಡುಗರ ಮನಸ್ಸನ್ನು ನಿಬ್ಬೆರುಗಾಗುವಂತೆ ಕಂಡು ಬಂದಿತು.
ಸುಮಾರು ನೂರಾರು ಮಹಿಳೆಯರು ಭಕ್ತಿ ಭಾವದಿಂದ ಕುಂಭ ಮೇಳದಲ್ಲಿ ಪಾಲ್ಗೊಂಡಿದ್ದರು.
ಮಹಿಳೆಯರೇ ಡೊಳ್ಳು ಕುಣಿತದ ನೇತೃತ್ವವಹಿಸಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.ಊರಿನ ಗುರು ಹಿರಿಯರು, ಯುವಕರು, ಮಹಿಳೆಯರು ಸೇರಿದಂತೆ ನಾಗರಿಕರು ಈ ಕುಂಭ ಮೇಳದಲ್ಲಿ ಭಾಗಿಯಾಗಿ ಮತ್ತು ಶ್ರೀದೇವಿಯ ಮೆರವಣಿಗೆಯಲ್ಲಿ ಪಾಲ್ಗೊಂಡು ಪುನಿತರಾದರು.
ನಂತರ ಸಾಹಿಂಕಾಲ 5 ಗಂಟೆಯಿಂದ ದುರ್ಗಾಹೋಮ ಹಾಗೂ ನವಗ್ರಹಶಾಂತಿ ಪೂಜೆ ಜರುಗಿತು.
ಮೊದಲ ದಿನ ಶ್ರೀ ಸಾಲಿದುರಗಮ್ಮದೇವಿ ಹಾಗೂ ಮಾತಂಗೆಮ್ಮ ದೇವತೆಗಳ ಮಾತ್ರಾ ಮಹೋತ್ಸವ ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ಜರುಗಿತು.