ಕಲೆ ಹಾಗೂ ಪ್ರತಿಭೆಗೆ ತುಂಬಾ ಮಹತ್ವವಿದೆ, ಅದನ್ನ ಉಳಿಸಿ ಬೆಳಿಸಿ ಪ್ರೋತ್ಸಾಹಿಸಬೇಕು – ಪತ್ರಕರ್ತ ವೀರೇಶ ಬಾರ್ಕಿ

ಹಾವೇರಿ : ಕಲೆ ಹಾಗೂ ಪ್ರತಿಭೆಗೆ ಬಹಳ ಮಹತ್ವ ಇದ್ದು,ಉಳಿಸಿ ಬೆಳಿಸಿ ಪ್ರೋತ್ಸಾಹಿಸಬೇಕಾಗಿದೆ ಎಂದು ಪತ್ರಕರ್ತರಾದ ವೀರೇಶ ಬಾರ್ಕಿ ಹೇಳಿದರು.
ನಗರದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಸ್ವರ ರಾಗ ಸಂಘಂ,ಎಸ್ ಆರ್ ಎಸ್ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ದಿ.30 ರಂದು ಜರುಗಿದ ಕುಂಟಕೋಣ ಮುಖಜಾಣ ಮತ್ತು ರತ್ನ ಮಾಂಗಲ್ಯ ನಾಟಕ ಪ್ರದರ್ಶನ ನಾಟಕಗಳನ್ನು ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬರ ಹತ್ತಿರವು ಪ್ರತಿಭೆ ಇರುತ್ತದೆ. ಹಾಗಾಗಿ ಪ್ರತಿಯೊಬ್ಬನೂ ಅದ್ವಿತೀಯನಾಗಿರುತ್ತಾರೆ. ಈ ಕುಂಟಕೋಣ ಮುಖಜಾಣ ನಾಟಕ ಉತ್ತರ ಕರ್ನಾಟಕ ಭಾಗದ ಜನ ಮನ್ನಣೆ ಪಡದಿದ್ದು, ಅದ್ಬುತ ಸಮಾಜಿಕ ಸಂದೇಶ ಒಳಗೊಂಡಿದೆ. ರತ್ನ ಮಾಂಗಲ್ಯ ನಾಟಕ ಕೌಟುಂಬಿಕ ಜೀವನದ ಸಾರವನ್ನು ತಿಳಿಸುವ ಮೂಲಕ ಕುಟುಂಬದ ಸದಸ್ಯರ ಭಾವನೆಗಳ ಅನಾವರಣದ ಅಂಶಗಳನ್ನು ಒಳಗೊಂಡಿದೆ. ಇಂದಿನ ದಿನಮಾನದಲ್ಲಿ ಪ್ರತಿಭೆ ಹಾಗೂ ಕಲೆಗೆ ಹೆಚ್ಚಿನ ಪ್ರೋತ್ಸಾಹ ಹಾಗೂ ಮನ್ನಣೆ ದೊರೆಯಬೇಕಾಗಿದೆ ಎಂದು ವೀರೇಶ ಬಾರ್ಕಿ ಹೇಳಿದರು.


ಕಾರ್ಯಕ್ರಮದಲ್ಲಿ ಗಾಯಕ ಆನಂದ, ಐರಣಿ, ಕಲಾವಿದ ಪ್ರಶಾಂತ್ ಜಮಖಂಡಿ, ಚಂದ್ರು ಮೈಲಾರ ಸೇರಿದಂತೆ ಕಲಾವಿದರು ಹಾಗೂ ಕಲಾಪ್ರೇಮಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!