ಓಪನ್ ಕರಾಟೆ ಚಾಂಪಿಯನ್‌ನಲ್ಲಿ ಪ್ರಶಸ್ತಿ
ದಾವಣಗೆರೆ: ಈಚೆಗೆ ಗಂಗಾವತಿಯಲ್ಲಿ ನಡೆದ ೬ನೇ ಆಲ್ ಇಂಡಿಯಾ ಓಪನ್ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ದಾವಣಗೆರೆಯ ಇಂಡಿಯನ್ ಮಾರ್ಷಲ್ ಆಟ್ಸ್ ಮತ್ತು ಸೆಲ್ಸ್ ಡಿಫೆನ್ಸ್ ಆರ್ಗನೈಷನ್ ಶಾಲೆಯ ಕರಾಟೆ ಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾರೆ.
ನಮ್ರತಾ, ಸಾನ್ವಿ, ರಾಘವಿ ಪ್ರಥಮ ಸ್ಥಾನ ಪಡೆದರೆ, ಟಿ. ದರ್ಶನ್, ಚಿನ್ಮಯ್, ರಾಕೇಶ್ ದ್ವಿತೀಯ ಸ್ಥಾನ ಹಾಗೂ ಮೈಲಾರಿ, ಆದಿತ್ಯ ತೃತೀಯ ಸ್ಥಾನವನ್ನು ಪಡೆದಿದ್ದಾರೆ ಎಂದು ತರಬೇತಿದಾರ ಮತ್ತು ಶಾಲೆಯ ಅಧ್ಯಕ್ಷ ಸನ್‌ಶೈಮ್ ನಜೀರ್ ತಿಳಿಸಿದ್ದಾರೆ.