ಇಂದು ನೆಲ್ಸನ್ ಮಂಡೇಲಾ ಡೇ
ನೆಲ್ಸನ್ ಮಂಡೇಲಾ ದಿನವನ್ನು ಪ್ರತಿ ವರ್ಷ ಜುಲೈ 18ರಂದು ಆಚರಣೆ ಮಾಡಲಾಗುತ್ತದೆ. 2010 ಜುಲೈ18ರಂದು ಮೊದಲ ಬಾರಿಗೆ ಆಚರಣೆ ಮಾಡಲಾಯಿತು. ವಿಶ್ವ ಶಾಂತಿ, ಮಾನವ ಹಕ್ಕು, ಸಮನ್ವಯ ಮತ್ತು ಸ್ವಾತಂತ್ರ್ಯದ ಸಂಸ್ಕೃತಿಗೆ ನೆಲ್ಸನ್ ಮಂಡೇಲಾ ಅವರ ಕೊಡುಗೆಯನ್ನು ನೆನಪಿಸಲು ಜುಲೈ 18 ರಂದು ವಿಶ್ವದಾದ್ಯಂತ ನೆಲ್ಸನ್ ಮಂಡೇಲಾ ಅಂತರಾಷ್ಟ್ರೀಯ ದಿನವನ್ನಾಗಿ ಆಚರಿಸಲಾಗುತ್ತದೆ.
ಈ ದಿನವನ್ನು ‘46664’ ಎಂದೂ ಕರೆಯುತ್ತಾರೆ ಮತ್ತು ಇದನ್ನು ಮೂಲತಃ HIV/AIDS ಕುರಿತು ಜಾಗೃತಿ ಮೂಡಿಸಲು ಪ್ರಾರಂಭಿಸಲಾಯಿತು.
ನೆಲ್ಸನ್ ಮಂಡೇಲಾ ಪ್ರಶಸ್ತಿ: 2014 ರಲ್ಲಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು ನೆಲ್ಸನ್ ಮಂಡೇಲಾ ಪ್ರಶಸ್ತಿಯನ್ನು ಪರಿಚಯಿಸುವುದಾಗಿ ಘೋಷಿಸಿತು. ಈ ಪ್ರಶಸ್ತಿಯನ್ನು ಐದು ವರ್ಷಗಳಿಗೊಮ್ಮೆ ನೀಡಲಾಗುತ್ತದೆ.