ರಾಷ್ಟ್ರೀಯ ಸುದ್ದಿ

ಕಾಶ್ಮೀರದಲ್ಲಿ ಪುನಃ ಪ್ರತಿಷ್ಠಾಪನೆಗೊಂಡ , ಶೃಂಗೇರಿ ಶಾರದಾಂಬೆ!

ಕಾಶ್ಮೀರದಲ್ಲಿ ಪುನರ್ಪತಿಷ್ಠಾಪನೆಗೊಂಡ , ಶೃಂಗೇರಿ ಶಾರದಾಂಬೆ!

ಕಾಶ್ಮೀರ : ಪುರಾತನ ಶಾರದಾಂಭ ದೇವಾಲಯವು ನೀಲಂ ನದಿ ತೀರದಲ್ಲಿ ಮತ್ತೆ ಪ್ರತಿಷ್ಟಾಪನೆಗೊಂಡಿದೆ. ಈ ಹಿಂದೆ ಇ ಶೈಕ್ಷಣಿಕ ಕೇಂದ್ರವಾಗಿದ್ದ ತೀತ್ವಾಲ್​ನ ದೇವಸ್ಥಾನ, ವಿಭಜನೆಯ ಸಂದರ್ಭದಲ್ಲಿ ನಾಶಗೊಂಡಿತ್ತು. ಇದೀಗ ಅಲ್ಲಿ ಹೊಸದಾಗಿ  ಶಾರದಾ ಮಂದಿರವನ್ನು ನಿರ್ಮಿಸಲಾಗಿದ್ದು,  ಶಾರದಾಂಬೆ ವಿಗ್ರಹದ ಪ್ರಾಣ ಪ್ರತಿಷ್ಠಾಪನಾ ಕಾರ್ಯವನ್ನುಶೃಂಗೇರಿ ಶಾರದಾ ಪೀಠದ ಜಗದ್ಗುರು ವಿಧುಶೇಖರ ಭಾರತಿ ಸ್ವಾಮೀಜಿ  ನೆರೆವೇರಿಸಿದ್ಧಾರೆ.

ವೈವಿಧ್ಯ ಪೂಜೆಗಳು!

ಶಾರದಾಂಬೆ ಪ್ರತಿಷ್ಠೆ, ಕುಂಭಾಭಿಷೇಕದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡದ್ದಲ್ಲದೆ,  ಸ್ಥಳೀಯರು ಅದ್ದೂರಿ ಸ್ವಾಗತದೊಂದಿಗೆ ಶ್ರೀಗಳನ್ನ ಬರಮಾಡಿಕೊಂಡರು,  ಪಂಚಲೋಹದ ಶಾರದೆಯ ವಿಗ್ರಹಕ್ಕೆ ಕಲೋಕ್ತ ಪೂಜೆ, ಪಂಚಾಮೃತಾಭಿಷೇಕ, ಪುರುಷ ಸೂಕ್ತ ಹಾಗೂ ಶ್ರೀ ಸೂಕ್ತ ರುದ್ರಾಭಿಷೇಕ ನಡೆಯಿತು. ನಂತರ ಅಷ್ಟಾವಧಾನ ಸೇವೆ, ಮಹಾಮಂಗಳಾರತಿ ಮೊಳಗಿತು.

ಜಗದ್ಗುರು ವಿಧುಶೇಖರ ಭಾರತಿ ಸ್ವಾಮೀಜಿಯವರು   ವಿಶೇಷ ಪೂಜೆಯನ್ನು ಸಲ್ಲಿಸಿ ಕಲಶ ಪೂಜೆ ಯೊಂದಿಗೆ ಕುಂಭಾಭಿಷೇಕ ನೆರವೇರಿಸಿದರು. ವಾಸ್ತುಹೋಮ, ಕಲಾಹೋಮ, ರಾಕೋಘ್ನ ಹೋಮಾದಿಗಳು ನಡೆದವು ಶ್ರೀಮಠದ ಪುರೋಹಿತರಾದ ಡಾ.ಶಿವಕುಮಾರ ಶರ್ಮ, ತಂತ್ರಿ ಸೀತಾರಾಮಶರ್ಮ ನೇತೃತ್ವದ ತಂಡ ಧಾರ್ಮಿಕ ಕಾರ್ಯ ಸುಗಮವಾಗುವಂತೆ ನೋಡಿಕೊಡಿತು. ಜಮ್ಮು ಕಾಶ್ಮೀರದ ಗವರ್ನರ್ ಮನೋಜ್ ಸಿನ್ಹಾ ಭಾನುವಾರ ಜಗದ್ಗುರುಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

 

Click to comment

Leave a Reply

Your email address will not be published. Required fields are marked *

Most Popular

To Top