ಉಡುಪಿ ಜಿಲ್ಲಾ ಉಸ್ತುವಾರಿಯಿಂದ ಮುಕ್ತಗೊಳಿಸಿ ಅಂತಾ ಮಾಜಿ ಸಿಎಂ ಕೇಳಿದ್ದರಂತೆ ಹಾಲಿ ಸಿಎಂ ಯಾಕೆ ಗೊತ್ತಾ.?
ಉಡುಪಿ: ಉಡುಪಿಯ ಅಜ್ಜರಕಾಡಿನಲ್ಲಿ ನಿರ್ಮಾಣವಾಗುತ್ತಿರುವ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸಿಎಂ ಬಸವರಾಜ ಬೊಮ್ಮಾಯಿ ಭೂಮಿಪೂಜೆ ನೆರವೇರಿಸಿದರು.
ಅಜ್ಜರಕಾಡು ನಲ್ಲಿ ಸುಮಾರು 110 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 250 ಬೆಡ್ ಸಾಮರ್ಥ್ಯದ ಆಸ್ಪತ್ರೆ ಇದಾಗಿದೆ.
ಈ ಸಂದರ್ಭದಲ್ಲಿ ಸಚಿವ ಡಾ. ಸುಧಾಕರ್, ಸುನೀಲ್ ಕುಮಾರ್, ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಜಿಲ್ಲೆಯ ಶಾಸಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಇದೇ ವೇಳೆ ಮಾತನಾಡಿದ ಸಿಎಂ ಬೊಮ್ಮಾಯಿ, ಉಡುಪಿ ಕೃಷ್ಣನನ್ನು ಹೊರತುಪಡಿಸಿದರೆ ಈ ಭಾಗದ ಜೊತೆ ನನಗೆ ಯಾವುದೇ ಸಂಬಂಧವಿರಲಿಲ್ಲ. ಆದರೆ, ಯಡಿಯೂರಪ್ಪ ಅವರು ಉಡುಪಿಗೆ ನನ್ನನ್ನು ಉಸ್ತುವಾರಿ ಮಾಡಿದ್ದರು ಎಂದು ನೆನೆದರು.
ಉಡುಪಿಗೆ ಯಾಕೆ ನನ್ನನ್ನು ಉಸ್ತುವಾರಿ ಮಾಡಿದ್ದರೋ ಗೊತ್ತಿಲ್ಲ. ಆದರೆ, ಉಡುಪಿಯ ಉಸ್ತುವಾರಿಯಿಂದ ಮುಕ್ತಗೊಳಿಸಿ ಎಂದು ಕೇಳುತ್ತಿದ್ದೆ. ಸಿಎಂ ಆಗುವ ಮೂಲಕ ಉಸ್ತುವಾರಿಯಿಂದ ಮುಕ್ತನಾಗುತ್ತೇನೆ ಎಂದು ಭಾವಿಸಿರಲಿಲ್ಲ ಎಂದರು
ಉಡುಪಿಯ ಜೈನ ಜನರು ಹೃದಯವೈಶಾಲ್ಯ ಉಳ್ಳವರು. ತಮ್ಮ ಕಷ್ಟಕ್ಕೆ ಪರಿಹಾರ ಕೇಳುತ್ತಾರೆ ವಿನಹ ವೈಯಕ್ತಿಕ ಏನೂ ಕೇಳುವುದಿಲ್ಲ. ಉಡುಪಿಯ ಜನತೆ ಸದಾ ನನ್ನ ಹೃದಯದಲ್ಲಿ ಇರುತ್ತಾರೆ ಎಂದು ಹೇಳಿದರು.