ಕುಂಬಾರ ನಾಗಣ್ಣ ನೇತೃತ್ವದಲ್ಲಿ 41 ನೇ ವಾರ್ಡಿನ ಯುವಕರು ಬಿಜೆಪಿಗೆ ಸೇರ್ಪಡೆ

ದಾವಣಗೆರೆ : ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ 41 ನೇ ವಾರ್ಡಿನ ರಾಮನಗರ ದಲ್ಲಿ ಉತ್ತರ ಯುವ ಮೋರ್ಚಾ ವತಿಯಿಂದ ಬಿಜೆಪಿ ಮುಖಂಡರಾದ ಕುಂಬಾರ ನಾಗಣ್ಣ ಅವರ ನೇತೃತ್ವದಲ್ಲಿ ಅಪಾರ ಸಂಖ್ಯೆಯಲ್ಲಿ ಯುವಕರಾದ ಮಂಜುನಾಥ್ ಎಸ್, ಜಗದೀಶ್, ಯೋಗೀಶ್, ಮತ್ತಿತರರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡು ಯುವ ಮೋರ್ಚಾ ವಾರ್ಡ್ ಕಮಿಟಿ ರಚಿಸಿ ಜವಾಬ್ದಾರಿ ನೀಡಲಾಯಿತು.
ಈ ಸಂಧರ್ಭದಲ್ಲಿ 41 ವಾರ್ಡಿನ ಶಕ್ತಿ ಕೇಂದ್ರ ಪ್ರಮುಖರಾದ ಹನುಮಂತಪ್ಪ, ಯುವ ಮೋರ್ಚಾ ಅಧ್ಯಕ್ಷರಾದ ಸಚಿನ್ ವರ್ಣೆಕರ್ ಪದಾಧಿಕಾರಿಗಳಾದ ಶಶಿ ಒಡೆಯರ್, ಪಣಿ ಹೊಸಳ್ಳಿಮಟ್, ಅಭಿಷೇಕ್ ನಾಗರಾಜ್ ಲೋಕಿಕೆರೆ, ಮಹಾಂತೇಶ್ ಮತ್ತಿತರರು ಉಪಸ್ಥಿತರಿದ್ದರು.