ಶಾಸಕ ರೇಣುಕಾಚಾರ್ಯರ ವೋಟಿಗಾಗಿ ನೋಟು ವೀಡಿಯೋ ಫುಲ್ ವೈರಲ್! ಏನಂದ್ರು ಹೊನ್ನಾಳಿ ಹುಲಿ?
ದಾವಣಗೆರೆ: ಸರ್ಕಾರ ನೀಡುವ ಕೋವಿಡ್ ಪರಿಹಾರದ ಜೊತೆಗೆ ಸೋಂಕಿತರಿಗೆ ವೈಯಕ್ತಿಕವಾಗಿ 10 ಸಾವಿರ ರು., ತಾವು ನೀಡುತ್ತಿದ್ದು, ಕ್ಷೇತ್ರದ ಜನತೆ ತಮಗೆ ಮುಂದಿನ ಚುನಾವಣೆಯಲ್ಲಿ ಮತ ನೀಡಬೇಕೆಂದು ಶಾಕ ರೇಣುಕಾಚಾರ್ಯ ಹೇಳಿಕೆ ನೀಡಿ ಹಣ ನೀಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದು, ರೇಣುಕಾಚಾರ್ಯರನ್ನು ವಿವಾದಕ್ಕೆ ಸಿಲುಕುವಂತೆ ಮಾಡಿದೆ.
ಕೋವಿಡ್ ಸಂದರ್ಭದಲ್ಲಿ ಸೋಂಕಿತರೊಂದಿಗಿದ್ದು, ಸ್ವತಃ ತಾವೆ ಊಟದ ವ್ಯವಸ್ಥೆಯನ್ನು ಮಾಡಿ, ಯೋಗ, ಧ್ಯಾನವನ್ನು ಕಲಿಸಿಕೊಡುವ ಜತೆಗೆ ಮಾನಸಿಕ ಧೈರ್ಯ ತುಂಬಿ ಎಲ್ಲರ ಮೆಚ್ಚುಗೆಗೆ ಕಾರಣವಾಗಿದ್ದ ರೇಣುಕಾಚಾರ್ಯ ಇದನ್ನು ಚುನಾವಣೆಗಾಗಿಯೇ ಮಾಡಿದ್ದ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಮೂಡುವಂತೆ ಮಾಡಿದೆ.
ಕೋವಿಡ್ ನಿಂದ ಮೃತರಾಗಿದ್ದ ಕುಟುಂಬಸ್ಥರಿಗೆ ಸರ್ಕಾರದಿಂದ ನೀಡಿದ್ದ 1 ಲಕ್ಷ ರೂ.,ವನ್ನು ಹೊನ್ನಾಳಿ, ನ್ಯಾಮತಿ ಅವಳಿ ಜಿಲ್ಲೆಗಳ ಫಲಾನುಭವಿಗಳಿಗೆ ಚೆಕ್ ನೀಡಿದ ನಂತರ ಮಾತನಾಡಿದ ರೇಣುಕಾಚಾರ್ಯ ತಾವು ಕೂಡ ವೈಯಕ್ತಿಕವಾಗಿ 10 ಸಾವಿರ ರು., ನೀಡುತ್ತಿದ್ದು, ತಮಗೆ ಮತ ನೀಡುವಂತೆ ಆಣೆ ಮಾಡಿಸಿಕೊಂಡು ವಿವಾದಕ್ಕೆ ಸಿಲುಕಿದ್ದಾರೆ.
ಒಟ್ಟಿನಲ್ಲಿ ಕೋವಿಡ್ ಸಂದರ್ಭದಲ್ಲಿ ಅವರು ಮಾಡಿದ್ದ ಸೇವೆಯಲ್ಲ ಈ ಮೂಲಕ ನೀರಿನಲ್ಲಿ ಹೋಮ ಮಾಡಿದಂತಾಗಿದೆ.
ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ರೇಣುಕಾಚಾರ್ಯ ನನ್ನ ವಿರುದ್ದ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಇದೆಲ್ಲ ಸುಳ್ಳು ಆರೋಪ ಎಂದು ತಳ್ಳಿಹಾಕಿದ್ದಾರೆ.