ತಂಬಾಕು ನಿಯಂತ್ರಣ ಕಾಯ್ದೆ ಉಲ್ಲಂಘನೆ : 26 ಪ್ರಕರಣ ದಾಖಲು
ದಾವಣಗೆರೆ: ನಗರದ ಗುಂಡಿ ಸರ್ಕಲ್ ವ್ಯಾಪ್ತಿಯಲ್ಲಿ ತಂಬಾಕು ನಿಯಂತ್ರಣ ಕೋಶ ವತಿಯಿಂದ ತಂಬಾಕು ಉತ್ಪನ್ನ ಮಾರಾಟ ಮಳಿಗೆಗಳ ಮೇಲೆ ದಾಳಿ ನಡೆಸಿ ಕಾಯ್ದೆ ಉಲ್ಲಂಘನೆಯ 26 ಪ್ರಕರಣಗಳನ್ನು ದಾಖಲಿಸಿ, 5200 ರೂ. ದಂಡ ವಿಧಿಸಲಾಗಿದೆ.
ಜಿಲ್ಲೆಯಾದ್ಯಂತ ಶೈಕ್ಷಣಿಕ ಸಂಸ್ಥೆಯ 100 ಗಜದ ಒಳಗೆ ಇರುವ ತಂಬಾಕು ಉತ್ಪನ್ನಗಳ ಅಂಗಡಿ ಮಾಲೀಕರು ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಿಸಲಾಗಿದೆ. ಕಾಯ್ದೆ 4 ರನ್ವಯ 10 ಪ್ರಕರಣ ವರದಿಯಾಗಿದ್ದು, 5200 ರೂ ದಂಡ ವಸೂಲಿಯಾಗಿದೆ.
ದಾಳಿಯಲ್ಲಿ ಆಹಾರ ಸುರಕ್ಷತಾ ಅಧಿಕಾರಿ ಕೊಟ್ರೇಶಪ್ಪ, ಸಮಾಜ ಕಾರ್ಯಕರ್ತ ದೇವರಾಜ.ಕೆ.ಪಿ., ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ನಿಖಿಲ್, ಆರೋಗ್ಯ ನಿರೀಕ್ಷಕ ಶ್ರೀಶೈಲಪ್ಪ, ಮಹಾನಗರಪಾಲಿಕೆಯ ಪೊಲೀಸ್ ಸಿಬ್ಬಂದಿಗಳಾದ ರಾಜಪ್ಪ & ಕರಿಯಪ್ಪ ಹಾಜರಿದ್ದರು