ಕಾರ್ಮಿಕರ ಮಕ್ಕಳಿಗೆ ಶಾಲಾ ಕಿಟ್ ನೀಡಲು ಅರ್ಜಿ
ದಾವಣಗೆರೆ: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಶಾಲಾ ಕಿಟ್ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಪ್ರಸಕ್ತ ಸಾಲಿನಲ್ಲಿ ನೋಂದಾಯಿತ ಕಾರ್ಮಿಕರ ಮಕ್ಕಳು 5ನೇತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರೆ ಅಂತಹ ಕಾರ್ಮಿಕರು ನೋಂದಾಯಿತ ಕಾರ್ಮಿಕರ ಗುರುತಿನ ಚೀಟಿಯ ದೃಢಿಕೃತ ಪ್ರತಿ, ಮಗುವಿನ ಆಧಾರ್ ಕಾರ್ಡ್ ಪ್ರತಿ, ವಿದ್ಯಾರ್ಥಿ 5ನೇತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬಗ್ಗೆ ವ್ಯಾಸಂಗ ಪ್ರಮಾಣಪತ್ರದ ಮೂಲ ಪ್ರತಿಗಳೊಂದಿಗೆ ಜನವರಿ 21 ರೊಳಗಾಗಿ ಕಾರ್ಮಿಕ ಕಚೇರಿಗೆ ಸಲ್ಲಿಸಬೇಕೆಂದು ಕಾರ್ಮಿಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.