Viral Video News: ಧರ್ಮಸ್ಥಳದಲ್ಲಿ ಧರ್ಮ ಇಲ್ಲ.!? ಫೇಸ್‌ಬುಕ್ ಲೈವ್ ನಲ್ಲಿ ವಿಡಿಯೋ ವೈರಲ್.!
ದಾವಣಗೆರೆ: ವ್ಯಕ್ತಿಯೊಬ್ಬರು ಸಮಾಜದಲ್ಲಿ ನಡೆಯುತ್ತಿರುವ ಅಸಮಾನತೆ ಕುರಿತು ಫೇಸ್‌ಬುಕ್ ಲೈವ್ ವೀಡಿಯೋ ಮಾಡಿದ್ದು, ಧರ್ಮಸ್ಥಳದಲ್ಲಿ ಧರ್ಮ ಇಲ್ಲ ಎಂದು ಹೇಳಿದ್ದಾರೆ.
ಹೌದು, ದೊಡ್ಡೇಶ್ ಕೋಬ್ರಾ ಹೆಚ್.ಎಸ್ ಎಂಬುವರು ಈ ವೀಡಿಯೋ ಮಾಡಿದ್ದು ವೈರಲ್ ಆಗಿದೆ. ಈ ವೀಡಿಯೋದಲ್ಲಿ ಸಮಾಜದಲ್ಲಿನ ಅಸಮಾನತೆಯನ್ನು ಹೊರಹಾಕಿರುವ ಅವರು, ಶ್ರೀಮಂಜುನಾಥ ಸ್ವಾಮಿಯ ಸನ್ನಿಧಿ ಧರ್ಮಸ್ಥಳದಲ್ಲಿ ಧರ್ಮ ಇಲ್ಲ. ಧರ್ಮಸ್ಥಳದಲ್ಲಿ ದೇವರ ದರ್ಶನಕ್ಕೆಂದು ಹೋಗುವಾಗ ಒಂದು ಕಡೆ ವಿಐಪಿ ಗಳಿಗೆ ಮಾತ್ರ ಎಂದು ನಾಮಫಲಕ ಹಾಕಲಾಗಿತ್ತು. ಅಂದ್ರೆ ಅವರು ಬಂದ ತಕ್ಷಣ 5 ನಿಮಿಷಕ್ಕೆ ದೇವರ ಸನ್ನಿಧಿಗೆ ಹೋಗಿ ದೇವರ ದರುಶನ ಪಡೆದು ಬರಬೇಕು. ಇನ್ನೂ ನೂರಾರು ಕಿಲೋಮೀಟರ್ ಗಳಿಂದ ಬಸ್ಸಲ್ಲಿ ನಿಂತು ಬಂದ ಬಡವರ್ಗದ ಜನ ದೇವರ ದರ್ಶನಕ್ಕೆ ಗಂಟೆಗಟ್ಟಲೆ ನಿಂತಿರಬೇಕು. ಇಂತಹ ವ್ಯವಸ್ಥೆ ಈ ಸಮಾಜ ನಿರ್ಮಾಣ ಮಾಡುತ್ತಿದ್ದು, ಇವೆಲ್ಲವೂ ಬದಲಾಗಬೇಕಾಗಿದೆ ಎಂದು ಹೇಳಿದ್ದಾರೆ.
ರಾಜಕಾರಣಿಗಳು, ಧರ್ಮದರ್ಶಿಗಳು, ಮಠಾಧೀಶರು ನಾವೆಲ್ಲಾ ಒಂದೇ ಅಂತ ಬಾಯಿ ಮಾತಿಗೆ ಹೇಳುತ್ತಾರಷ್ಟೇ. ಎಷ್ಟೋ ಜನ ಚಿಕ್ಕ ಚಿಕ್ಕ ಮಕ್ಕಳನ್ನು ಕರೆದುಕೊಂಡು ಬಂದಿರುತ್ತಾರೆ. ಹೊಟ್ಟೆ ಊಟ, ಕೂರಲು ಜಾಗವಿಲ್ಲದೆ ತುಂಬಾ ಕಷ್ಟಪಟ್ಟು ದೇವರ ದರ್ಶನಕ್ಕೆಂದು ಬರುತ್ತಾರೆ. ಆದರೆ ಇಂತಹ ಧಾರ್ಮಿಕ ಸ್ಥಳಗಳಲ್ಲಿ ಕಷ್ಟಪಟ್ಟು ಬಂದಿರುವವರನ್ನು ಕಷ್ಟದಿಂದಲೇ ದೇವರ ದರ್ಶನಕ್ಕೆ ಮತ್ತು ಲಕ್ಷಾಂತರ ರೂಗಳ ಮೌಲ್ಯದ ಕಾರಿನಲ್ಲಿ ಎಸಿ ಹಾಕಿಕೊಂಡು ಬರುವ ವಿಐಪಿ ವ್ಯಕ್ತಿಗಳನ್ನು ಅವರ ಮಕ್ಕಳು, ಸಂಬAಧಿಕರನ್ನು ಸಲೀಸಾಗಿ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ.
ಧರ್ಮಸ್ಥಳದಲ್ಲಿ ಮಾತ್ರವಲ್ಲದೆ ರಾಜ್ಯದ ಹಲವು ಐತಿಹಾಸಿಕ ದೇವಸ್ಥಾನಗಳಲ್ಲಿ ಈ ರೀತಿಯ ಅಸಮಾನತೆ ಇದ್ದು, ರಾಜ್ಯ ಸರ್ಕಾರ, ಮಠಾಧೀಶರುಗಳು, ಧರ್ಮದರ್ಶಿಗಳು ಎಲ್ಲರಿಗೂ ಸಮಾನತೆ ನೀಡುವಲ್ಲಿ ಮುಂದಾಗಬೇಕಿದೆ ಎಂದು ಮನವಿ ಮಾಡಿಕೊಂಡಿದ್ದಾರೆ.
https://m.facebook.com/story.php?story_fbid=743448720178411&id=100007932931820
garudavoice21@gmail.com 9740365719