ಕಳುವು ಪ್ರಕರಣ ದಾಖಲಾಗಿ ಕೆಲವೇ ಗಂಟೆಗಳಲ್ಲಿ ಆರೋಪಿ ಪತ್ತೆ, ಸ್ವತ್ತು ವಶ
ದಿನಾಂಕ:-೩೧/೦೫/೨೦೨೪ ರಂದು ರಾತ್ರಿ ೦೮-೦೦ ಗಂಟೆಯಿAದ ದಿನಾಂಕ:-೦೧/೦೬/೨೦೨೪ ರ ಬೆಳಿಗ್ಗೆ ೦೬-೦೦ ಗಂಟೆಯ ಅವಧಿಯಲ್ಲಿ ಕಡರನಾಯಕನಹಳ್ಳಿ ಗ್ರಾಮದ ಇಟ್ಟಿಗೆ ಬಟ್ಟಿಯಲ್ಲಿ ನಿಲ್ಲಿಸಿದ್ದ ೧೦ ಲಕ್ಷ ರೂ ಬೆಲೆ ಬಾಳುವ ಕೆಎ-೫೦/ಎ-೬೯೬೯ ನೇ ನಂಬರ್‌ನ ಭರತ್ ಬೆಂಜ್ ಕಂಪನಿಯ ಲಾರಿಯನ್ನು ಕಳ್ಳತನವಾದ ಬಗ್ಗೆ ದಿನಾಂಕ:- ೦೧/೦೬/೨೦೨೪ ರಂದು ಪರ‍್ಯಾದಿ ನೀಡಿದ ದೂರನ್ನು ಪಡೆದು ಮಲೇಬೆನ್ನೂರು ಪೊಲೀಸ್ ಠಾಣಾ ಗುನ್ನೆ ನಂ: ೧೧೨/೨೦೨೪ ಕಲಂ: ೩೭೯ ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.
ಈ ಬಗ್ಗೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರುಗಳಾದÀ ಶ್ರೀ ವಿಜಯಕುಮಾರ್ ಎಂ ಸಂತೋಷ ಮತ್ತು ಶ್ರೀ ಜಿ. ಮಂಜುನಾಥ ಜಿಲ್ಲೆ ಹಾಗೂ ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಪ್ರಶಾಂತ ಸಿದ್ದನಗೌಡ ರವರುಗಳÀ ಮಾರ್ಗದರ್ಶನದಲ್ಲಿ ಹಾಗೂ ಹರಿಹರ ವೃತ್ತ ನಿರೀಕ್ಷಕರಾದ ಶ್ರೀ ಸುರೇಶ ಸಗರಿ ಮತ್ತು ಪಿ.ಎಸ್.ಐ ಮಲೇಬೆನ್ನೂರು ರವರ ನೇತೃತ್ವದಲ್ಲಿ ಆರೋಪಿಯ ಪತ್ತೆಗಾಗಿ ತಂಡವನ್ನು ರಚಿಸಲಾಗಿರುತ್ತದೆ.
ದಿನಾಂಕ:-೦೧/೦೬/೨೦೨೪ ರಂದು ಮಲೇಬೆನ್ನೂರು ಪೊಲೀಸ್ ಠಾಣೆಯ ಪಿ.ಎಸ್.ಐ ಪ್ರಭು ಡಿ ಕೆಳಗಿನ ಮನಿ ಮತ್ತು ಸಿಬ್ಬಂದಿಯವರು ಮೇಲ್ಕಂಡ ಪ್ರಕರಣದಲ್ಲಿನ ಆರೋಪಿತನಾದ ಕೃಷ್ಣಪ್ಪ @ ಕೃಷ್ಣಪ್ಪ ಮಲ್ಲೂರು, ೩೪ ವರ್ಷ, ಡ್ರೆöÊವರ್ ಕೆಲಸ, ವಾಸ: ಗುಡ್ಡದ ಕಮಲಾಪುರ ಗ್ರಾಮ, ರಟ್ಟಿಹಳ್ಳಿ ತಾಲ್ಲೂಕ್, ಹಾವೇರಿ ಜಿಲ್ಲೆ ಈತನನ್ನು ಬಂಧಿಸಿದ್ದು, ಆರೋಪಿತನಿಂದ ಕಳುವು ಮಾಡಿದ್ದ ೧೦ ಲಕ್ಷ ರೂ ಬೆಲೆಯ ಲಾರಿಯನ್ನು ಮತ್ತು ಹಾವೇರಿ ಜಿಲ್ಲೆ ರಾಣೆಬೆನ್ನೂರು ಶಹರ ಪೊಲೀಸ್ ಠಾಣೆಯ ೦೧ ಬೈಕ್ ಕಳವು ಪ್ರಕರಣವನ್ನು ಭೇದಿಸಿ ೨೦,೦೦೦/- ರೂ ಬೆಲೆಯ ಕೆಎ-೨೬/ಕ್ಯೂ-೬೩೫೮ ನೇ ಬೈಕ್‌ನ್ನು ವಶಕ್ಕೆ ಪಡೆದಿದ್ದು, ಹಾಲಿ ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.
ಮೇಲ್ಕಂಡ ಪ್ರಕರಣದಲ್ಲಿ ಪ್ರಕರಣ ದಾಖಲಾಗಿ ಕೆಲವೇ ಗಂಟೆಗಳಲ್ಲಿ ಆರೋಪಿತನನ್ನು ಪತ್ತೆ ಹಚ್ಚಿ ಕಳುವಾಗಿದ್ದ ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಹರಿಹರ ವೃತ್ತ ನಿರೀಕ್ಷಕರಾದ ಶ್ರೀ ಸುರೇಶ ಸಗರಿ ಮತ್ತು ಮಲೇಬೆನ್ನೂರು ಪೊಲೀಸ್ ಠಾಣೆಯ ಪಿ.ಎಸ್.ಐ (ಕಾ.ಸು) ಶ್ರೀ ಪ್ರಭು ಡಿ ಕೆಳಗಿನ ಮನಿ, ಸಿಬ್ಬಂದಿಯವರಾದ ಲಕ್ಷö್ಮಣ, ರಾಜಶೇಖರ್, ಸಂತೋಷಕುಮಾರ್, ಮಲ್ಲಿಕಾರ್ಜುನ, ಜೀಪ್ ಚಾಲಕರಾದ ರಾಜಪ್ಪ, ಮುರುಳಿದರ ರವರುಗಳನ್ನು ಪೊಲೀಸ್ ಅಧೀಕ್ಷಕಕರು ದಾವಣಗೆರೆ ಜಿಲ್ಲೆ ರವರು ಮೆಚ್ಚುಗೆ ವ್ಯಕ್ತ ಪಡಿಸಿ ಶ್ಲಾಘಿಸಿರುತ್ತಾರೆ.