women; ಮಹಿಳೆ ಎಲ್ಲಾ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದಾಳೆ: ಗೀತಾ ಬಿ.

auto

ದಾವಣಗೆರೆ, ಆ.18: ಹೆಣ್ಣು ಎಂಬ ಭೇದ ಭಾವವಿಲ್ಲದೆ ಮಹಿಳೆ (women) ಎಲ್ಲಾ ಕ್ಷೇತ್ರದಲ್ಲೂ ತನ್ನನ್ನು ತಾನು ಗುರುತಿಸಿಕೊಂಡಿದ್ದಾಳೆ ಹಾಗೆ ಎಲ್ಲಾ ಕುಂದು ಕೊರತೆಗಳಿದ್ದರೂ ಹೊರಗೆ ಬಂದು ಸಮಾಜವನ್ನು ಆ ಒಂದು ಒಳ್ಳೆಯ ಸ್ಥಾನದಲ್ಲಿ ಕೊಂಡೊಯ್ಯುವಲ್ಲಿ ಮಹಿಳೆಯರು ಮುಖ್ಯ ಪಾತ್ರ ವಹಿಸಿದ್ದಾರೆ ಎಂದು ಚಿತ್ರದುರ್ಗ (Chitradurga) ಪ್ರಾದೇಶಿಕ ನಿರ್ದೇಶಕಿ ಗೀತಾ ಬಿ. ಹೇಳಿದರು.

ದಾವಣಗೆರೆ ಜಿಲ್ಲೆಯ ದಾವಣಗೆರೆ ತಾಲೂಕು ಹಾಗೂ ದೇವನಗರಿ ತಾಲೂಕಿನ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಸ್ವಉದ್ಯೋಗ ಪ್ರೇರಣಾ ಶಿಬಿರ ಹಾಗೂ ವಾಹನ ಚಾಲನಾ ಪರವಾನಿಗೆ ಪತ್ರ ವಿತರಣೆ ಸಮಾರಂಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಲವಾರು ರೀತಿಯ ಉದ್ಯೋಗವನ್ನು (job) ಮಾಡಿ ತನ್ನ ಬದುಕನ್ನ ತಾನು ಕಟ್ಟಿಕೊಂಡಿದ್ದಾಳೆ, ನೀವೆಲ್ಲರೂ ಇದರ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಬದಲಾವಣೆ ಆಗುವುದರ ಜೊತೆಗೆ ಸ್ವಾವಲಂಬನೆಗಳಾಗಿ ಜೀವನ ನಡೆಸಿ ಎಂದು ಕರೆ ನೀಡಿದರು, ಕಷ್ಟ ಬಂದಾಗ ಕುಗ್ಗದೆ ಸುಖ ಬಂದಾಗ ಹಿಗ್ಗದೆ ಒಂದೇ ರೀತಿಯಲ್ಲಿ ಇರಬೇಕು ನಿಂತ ನೀರಾಗದೆ ಹರಿಯುವ ನೀರಾಗಿ ಬದುಕಿ ಎಂದು ಹೇಳಿದರು.

gold; ಸಿಕೆಸಿ ಗ್ರೂಪ್ ಆಫ್ ಜ್ಯುವೆಲರ್ಸ್ ನಿಂದ ಆಭರಣ ಪ್ರದರ್ಶನ, ಮಾರಾಟ

ಈ ಕಾರ್ಯಕ್ರಮದಲ್ಲಿ ಸೀನಿಯರ್ ಇನ್ಸ್ ಪೆಕ್ಟರ್ ಮೋಟಾರ್ ವೆಹಿಕಲ್ ಮಹಮ್ಮದ್ ಖಾಲಿದ್ ರವರು ಮಾತನಾಡಿ, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತಿನಂತೆ ಹೆಣ್ಣು, ಎಲ್ಲ ರಂಗದಲ್ಲೂ ಗುರುತಿಸಿಕೊಳ್ಳುತ್ತಿದ್ದಾಳೆ ಒಂದು ಆಟೋ ಖರೀದಿ ಮಾಡಿದ್ದಲ್ಲಿ ಅದು 100 ಆಟೋ ಆಗಬೇಕು ಅನ್ನುವ ಗುರಿಯನ್ನು ಹೊಂದಿಕೊಂಡು ನಾಲ್ಕು ಜನಕ್ಕೆ ಉದ್ಯೋಗವನ್ನು ಕೊಡುವ ರೀತಿಯಲ್ಲಿ ಪ್ರೇರಣೆಯಾಗಿ ಎಂದು ಮಾಹಿತಿ ನೀಡಿ ನಂತರ ವಾಹನ ಚಾಲನಾ ಪರವಾಗಿ ಪತ್ರ ವಿತರಣೆ ಮಾಡಿ ,ಎಲ್ಲ ಸದಸ್ಯರಿಗೂ ಶುಭ ಹಾರೈಸಿದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಹಿರಿಯ ನಿರ್ದೇಶಕರು ವಿ. ವಿಜಯ ಕುಮಾರ ನಾಗನಾಳರವರು ಕ್ಷೇತ್ರದ ಮಹತ್ವದ, ಪೂಜ್ಯರ ಕಾರ್ಯಕ್ರಮದ ಬಗ್ಗೆ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

accident; ಮಾನವೀಯತೆ ಮೆರೆದ ಮಾಜಿ ಶಾಸಕ ರೇಣುಕಾಚಾರ್ಯ

ಈ ಕಾರ್ಯಕ್ರಮದಲ್ಲಿ ಗುರು ಮೋಟರ್ಸ್ ಮಾಲೀಕರಾದ ಸಿದ್ದೇಶ್ ಹಾಗೂ ಕವಿತಾ ಕೆನರಾ ಬ್ಯಾಂಕ್ ಗ್ರಾಮೀಣ ತರಬೇತಿ ಸಂಸ್ಥೆ ತೋಳಹುಣಸೆ, ಇವರು ಸ್ವ ಉದ್ಯೋಗದಿಂದ ಆಗುವ ಉಪಯೋಗಗಳ ಬಗ್ಗೆ ಮಾಹಿತಿ ನೀಡಿದರು.

ನಂತರದ ತರಬೇತಿಯಲ್ಲಿ ನಿರಂಜನ್ ಪಾಟೀಲ್ ಕುಕ್ನೂರು ಸಾವಯವ ಮಾದರಿ ಕೃಷಿಕರು, ಇವರು ಸೌದ್ಯೋಗವನ್ನು ಲಾಭದಾಯಕವಾಗಿ ಮಾಡುವ ವಿಧಾನದ ಬಗ್ಗೆ ತರಬೇತಿ ನೀಡಿದರು, ಉಜ್ಜಪ್ಪ ಮೇಗಳ ಮನಿ ಎಸ್‌ಬಿ.ಐ .ಸಾಕ್ಷರತಾ ಸಮಾಲೋಚಕರು ಇವರು, ವಿವಿಧ ಬ್ಯಾಂಕು ಸಂಘ ಸಂಸ್ಥೆಗಳಿಂದ ಸಿಗುವ ಸಾಲ ಸಬ್ಸಿಡಿ ಸಾಲದ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ದಾವಣಗೆರೆ ತಾಲೂಕಿನ ಮಾನ್ಯ ಯೋಜನಾಧಿಕಾರಿಗಳು ಶ್ರೀನಿವಾಸ ಬಿ. ಕಾರ್ಯಕ್ರಮ ನಿರೂಪಣೆ ಮಾಡಿದರು. ದೇವನಗರಿ ತಾಲೂಕಿನ ಯೋಜನಾಧಿಕಾರಿ ಬಾಲಕೃಷ್ಣ ಎಲ್ಲಾ ಗಣ್ಯರನ್ನು ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಶ್ರೀರಾಮ್ ನಗರ ಕಾರ್ಯಕ್ಷೇತ್ರದ ಗುಂಪಿನ ಸದಸ್ಯರಾದ ಗೀತಾ ಇವರಿಗೆ ಆಟೋ ವಿತರಣೆ ಮಾಡಿ ಶುಭ ಹಾರೈಸಿದರು.

ಈ ಕಾರ್ಯಕ್ರಮದಲ್ಲಿ ಜ್ಞಾನವಿಕಾಸ ಸಮನ್ವಯ ಅಧಿಕಾರಿ ಗಾಯತ್ರಿ ದಾವಣಗೆರೆ, ರೂಪ ದೇವನಗರಿ ಎರಡು ತಾಲೂಕಿನ ಜ್ಞಾನವಿಕಾಸ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!