ಶಾಸಕ ರಾಮಪ್ಪ ನೇತೃತ್ವದಲ್ಲಿ ವಿಶ್ವ ಪರಿಸರ ದಿನಾಚರಣೆ
ದಾವಣಗೆರೆ: ಹರಿಹರ ನಗರದ ಡಿ.ಆರ್.ಎಂ ಪದವಿ ಕಾಲೇಜಿನಲ್ಲಿ ಅರಣ್ಯ ಇಲಾಖೆ ಸಹಯೋಗದಲ್ಲಿ ಶಾಸಕ ಎಸ್. ರಾಮಪ್ಪರವರ ನೇತೃತ್ವದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಉಪಅರಣ್ಯ ಸಂರಕ್ಷಣಾಧಿಕಾರಿಗಳಾದ ಜಗನಾಥ್, ಪರಿಸರ ಪ್ರೇಮಿಗಳಾದ ಪ್ರಸನ್ನ ಬೆಳಕೇರಿ, ವಲಯ ಅರಣ್ಯಧಿಕಾರಿಗಳು, ಪದವಿ ಕಾಲೇಜಿನ ಮಕ್ಕಳು, ಕಾಲೇಜಿನ ಸಿಬ್ಬಂದಿಗಳು ಭಾಗವಹಿಸಿದ್ದರು.