ಮಾ.27 ಕ್ಕೆ ವಿಶ್ವ ರಂಗಭೂಮಿ ದಿನಾಚರಣೆ

ದಾವಣಗೆರೆ : ಶ್ರೀ ಕುಮಾರ ವಿಜಯ ನಾಟಕ ಸಂಘ ಚಿತ್ತರಗಿ, ರಾಜ್ಯ ವೃತ್ತಿ ರಂಗಭೂಮಿ ಕಲಾವಿದರ ಸಂಘ ದಾವಣಗೆರೆ, ಕರ್ನಾಟಕ ರಾಜ್ಯ ರಂಗಭೂಮಿ ಒಕ್ಕೂಟ ದಾವಣಗೆರೆ, ಬಸವ ಕಲಾಲೋಕ ಬಸಾಪುರ ದಾವಣಗೆರೆ ಹಾಗೂ ವಿವಿಧ ಕಲಾ ಸಂಘಗಳ ಕಲಾವಿದರ ಸಹಯೋಗದಲ್ಲಿ ಇದೇ 27ರಂದು ವಿಶ್ವ ರಂಗಭೂಮಿ ದಿನಾಚರಣೆ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರಂಗಭೂಮಿ ಒಕ್ಕೂಟದ ಅಧ್ಯಕ್ಷ ಕೆ.ವೀರಯ್ಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಗರದ ಟಿಎಂಎಸ್ ಕಾಂಪೌAಡ್‌ನಲ್ಲಿರುವ ಶ್ರೀ ಕುಮಾರ ವಿಜಯ ನಾಟಕ ಸಂಘ ಚಿತ್ತರಗಿ ಇವರ ಥಿಯೇಟರ್‌ನಲ್ಲಿ ಅಂದು ಬೆಳಿಗ್ಗೆ 10.45ಕ್ಕೆ ನಡೆಯುವ ಕಾರ್ಯಕ್ರಮದ ಉದ್ಘಾಟನೆಯನ್ನು ಕಾಂಗ್ರೆಸ್ ಯುವ ಮುಖಂಡ ದಿನೇಶ್ ಕೆ.ಶೆಟ್ಟಿ ನೆರವೇರಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಕೆ. ಏಕಾಂತಪ್ಪ, ಕನ್ನಡ ಮತ್ತು ಸಂಸ್ಕ0ತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ರಾಜ್ಯ ವೃತ್ತಿ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಎ, ಭದ್ರಪ್ಪ, ಕರ್ನಾಟಕ ರಾಜ್ಯ ರಂಗಭೂಮಿ ಒಕ್ಕೂಟದ ಅಧ್ಯಕ್ಷ ಕೆ. ವೀರಯ್ಯ, ಚಿಂದೋಡಿ ಶಂಭುಲಿ0ಗಪ್ಪ, ಮಾಜಿ ಮೇಯರ್‌ಗಳಾದ ಅನಿತಾ ಮಾಲತೇಶ್, ರೇಖಾ ನಾಗರಾಜ, ತಿಪ್ಪೇಶ್ ರಾವ್ ಚೌವ್ಹಾಣ್, ಬಸವ ಕಲಾಲೋಕದ ಶಶಿಧರ್ ಆಗಮಿಸುವರು ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ರಂಗಭೂಮಿ ಕಲಾವಿದರೂ ಅತಂತ್ರ ಸ್ಥಿತಿಯಲ್ಲಿದ್ದು ರಂಗಭೂಮಿಯನ್ನು ಉಳಿಸಬೇಕಾದರೆ ರಂಗ ತರಬೇತಿ ಹೊಂದಲು ತರಬೇತಿ ಶಾಲೆಗಳನ್ನು ತೆರೆಯಬೇಕು ಅಲ್ಲದೆ ಜೊತೆಗೆ ಪಠ್ಯಕ್ರಮದಲ್ಲಿ ಅಳವಡಿಸಬೇಕು ಅಲ್ಲದೆ ರಂಗ ಕಲಾವಿದರಿಗೆ ಜೀವನ ಮಾರ್ಗಗಳನ್ನು ಅವರಿಗೆ ಆಶ್ರಯ ಮನೆಗಳನ್ನು ನೀಡುವ ಮೂಲಕ ಕನಿಷ್ಠ 5 ಸಾವಿರ ಮಾಸಾಶನ ನೀಡಬೇಕು ಎಂದು ಆಗ್ರಹಿಸಿದರು.

ಕನ್ನಡ ಮತ್ತು ಸಂಸ್ಕöತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಕನ್ನಡ ಕುವೆಂಪು ಭವನವನ್ನು ಕೇವಲ ಒಂದು ಸಾವಿರ ನಿಗದಿತ ಮಾಡಿ, ನಿರ್ವಹಣೆ ವೆಚ್ಚ ಪಡೆದು ನಮಗೆ ನೀಡಬೇಕು. ಆದರೆ ಅವರು ವಿಧಿಸುವ ವೆಚ್ಚ ಹೆಚ್ಚಾಗಿದ್ದು ಸರ್ಕಾರದಿಂದ ಕೊಡುವ ಸಹಾಯಧನ ಕಾರ್ಯಕ್ರಮದ ವೆಚ್ಚಕ್ಕೆ ಸಾಕಾಗುತ್ತದೆ. ಕಲಾವಿದರಿಗೆ ಏನೂ ಸಿಗುವುದಿಲ್ಲ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಡಾ ಮಹೇಶ್ವರಪ್ಪ ಶಶಿಧರ ಬಸಾಪುರ ಅಹ್ಮದ್ ಶರೀಫ್ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!