ವಿಶ್ವದ ಅತೀವೇಗದ ಇಂಟರ್ನೆಟ್ ಸೇವೆ ಆರಂಭ!
ಇಂಟರ್ನೆಟ್ ಇಲ್ಲದೆ ಜಗತ್ತನ್ನು ಕಲ್ಪಿಸಿಕೊಳ್ಳಲು ಅಸಾಧ್ಯ. ಕಾರಣ ಇಂಟರ್ನೆಟ್ ಇಲ್ಲದೆ ಒಂದು ದಿನವೂ ಇರಲು ಸಾಧ್ಯವಾಗದೆ ಪರಿಸ್ಥಿತಿಗೆ ನಾವು ಬಂದು ತಲುಪಿದ್ದೇವೆ. ಇಡೀ ಜಗತ್ತೆ ಇಂಟರ್ನೆಟ್ ಮೂಲಕ ಸಂಪರ್ಕಿತಗೊಂಡಿದೆ. ಭಾರತದಲ್ಲಿ ಇಂಟರ್ನೆಟ್, ಡೇಟಾ ಸೇವೆಗಳು ಕೈಗೆಟುಕುವ ದರದಲ್ಲಿ ಲಭ್ಯವಿದೆ. ದೇಶದ ಮೂಲೆ ಮೂಲೆಯಲ್ಲಿ 4ಜಿ ಹಾಗೂ 5ಜಿ ಸೇವೆ ಸಿಗುತ್ತಿದೆ. ಇದೀಗ ಚೀನಾದಲ್ಲಿ ವಿಶ್ವದ ಅತ್ಯಂತ ವೇಗದ ಇಂಟರ್ನೆಟ್ ಸೇವೆ ಆರಂಭಿಸಿದೆ. ಒಂದು ಸೆಕೆಂಡ್‌ನಲ್ಲಿ ಬರೋಬ್ಬರಿ 150 ಮೂವಿಗಳನ್ನು ಒಟ್ಟಿಗೆ ಡೌನ್ಲೋಡ್ ಮಾಡುವ ಸಾಮರ್ಥ್ಯ ಈ ಇಂಟರ್ನೆಟ್‌ಗಿದೆ.
ಚೀನಾದ ಫಾಸೆಸ್ಟ್ ಇಂಟರ್ನೆಟ್ ಸೇವೆ ಪ್ರತಿ ಸೆಕೆಂಡ್‌ಗೆ 1.3 ಟೆರಾಬಿಟ್ ಡೇಟಾ ರವಾನಿಸಲು ಸಾಧ್ಯ. ಸಿಂಗ್ವಾ ವಿಶ್ವವಿದ್ಯಾಲಯ, ಹುವೈ ಚೀನಾ ಮೊಬೈಲ್ ಟೆಕ್ನಾಲಜಿ ಸಹಯೋಗದಲ್ಲಿ ಈ ಫಾಸ್ಟೆಸ್ಟ್ ಇಂಟರ್ನೆಟ್ ಸೇವೆ ಆರಂಭಿಸಲಾಗಿದೆ. ಬೀಜಿಂಗ್, ವುಹಾನ್, ಗೌಂಝೋ ಸೇರಿದಂತೆ ಪ್ರಮುಖ ನಗರಗಳಲ್ಲಿ ಮೊದಲ ಹಂತವಾಗಿ ಈ ಸೇವೆ ಲಭ್ಯವಿದೆ. ಶೀಘ್ರದಲ್ಲೇ ಚೀನಾದ ಎಲ್ಲಾ ನಗರ ಹಾಗೂ ಇತರ ಪ್ರದೇಶಗಳಿಗೆ ವಿಸ್ತರಣೆಗೊಳ್ಳಲಿದೆ.
ಭಾರತದಲ್ಲಿ ಇದೀಗ 5ಜಿ ನೆಟವರ್ಕ್ ಲಭ್ಯವಿದೆ. ಅತೀವೇಗದ ಇಂಟರ್ನೆಟ್ ಸೇವೆ ದೇಶಾದ್ಯಂತ ಲಭ್ಯವಿದೆ. ಇನ್ನು ಕಡಿಮೆ ಬೆಲೆಗೆ ಭಾರತದಲ್ಲಿ ಡೇಟಾ ಸೇವೆಗಳು ಸಿಗುತ್ತಿದೆ. ಇದರ ಜೊತೆಗೆ ಪ್ರತಿ ದಿನ ಹೊಸ ಹೊಸ ತಂತ್ರಜ್ಞಾನಗಳ ಆವಿಷ್ಕಾರದಿಂದ ಭಾರತದಲ್ಲಿ ಇಂಟರ್ನೆಟ್ ಪ್ರತಿನಿತ್ಯದ ಬಳಕೆ ವಸ್ತುವಾಗಿದೆ. ಇದೀಗ ಚೀನಾದಲ್ಲಿ ಆರಂಭಿಸಲಾಗಿರುವ ಅತೀವೇಗದ ಇಂಟರ್ನೆಟ್ ಸೇವೆ ಭಾರತಕ್ಕೆ ಕಾಲಿಡಲು ಹೆಚ್ಚು ದಿನ ಬೇಕಿಲ್ಲ.
ಶೀಘ್ರದಲ್ಲೇ ಭಾರತದಲ್ಲೂ ವಿಶ್ವದ ಅತೀವೇಗದ ಇಂಟರ್ನೆಟ್ ಸೇವೆ ಲಭ್ಯವಾಗಲಿದೆ. ಇದೀಗ ಉದ್ಯಮಿ ಎಲಾನ್ ಮಸ್ಕ್‌ನ ಸ್ಟಾರ್ ಲಿಂಕ್ ಅಂತರ್ಜಾಲ ಸೇವೆ ಶೀಘ್ರದಲ್ಲಿ ಭಾರತಕ್ಕೆ ಲಗ್ಗೆ ಇಡಲಿದೆ ಎಂದು ವರದಿಗಳು ಹೇಳುತ್ತಿದೆ. ಸೇವೆ ಆರಂಭಿಸುವ ಸ್ಟಾರ್ ಲಿಂಕ್ ಸಲ್ಲಿಸಿದ್ದ ಅರ್ಜಿಗೆ ಪೂರಕವಾಗಿ ಕೇಂದ್ರ ಸರ್ಕಾರ ಕೆಲ ಪ್ರಶ್ನೆಗಳನ್ನು ಕೇಳಿತ್ತು. ಅದಕ್ಕೆ ನೀಡಿರುವ ಉತ್ತರ ತೃಪ್ತಿದಾಯಕವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಲೈಸೆನ್ಸ್ ನೀಡಲು ಮುಂದಾಗಿದೆ ಎಂದು ವರದಿಗಳು ತಿಳಿಸಿವೆ. ಹಾಲಿ ದೇಶದಲ್ಲಿ ಇರುವ ಸಂಪಕ ವ್ಯವಸ್ಥೆಗೆ ಸಂಪೂರ್ಣ ಭಿನ್ನವಾದ ವ್ಯವಸ್ಥೆ ಇದಾಗಿದ್ದು, ದೇಶದ ಅತ್ಯಂತ ಕುಗ್ರಾಮಗಳಿಗೂ ಅತ್ಯಂತ ವೇಗದ ಇಂಟರ್ನೆಟ್ ಸೇವೆ ಲಭ್ಯವಾಗಲಿದೆ. ಹೀಗಾಗಿ ಸ್ಟಾರ್ ಲಿಂಕ್ ಪ್ರವೇಶ ಜಿಯೋ, ಏರ್‌ಟಲ್, ಐಡಿಯಾ, ಬಿಎಸ್‌ಎನ್‌ಎಲ್‌ಗೆ ತೀವ್ರ ಸ್ಪರ್ಧೆ ನೀಡುವ ಸಾಧ್ಯತೆ ಇದೆ.