ಕ್ರೈಂ ಸುದ್ದಿ

ವಿದ್ಯುತ್‌ ಕಳವು ಆರೋಪ: ಬೆಸ್ಕಾಂ ಗೆ ದಂಡ ಪಾವತಿಸಿದ ಕುಮಾರಸ್ವಾಮಿ

'Power Theft’: BESCOM Slaps Rs 68,526 Fine On HD Kumaraswamy
'Power Theft’: BESCOM Slaps Rs 68,526 Fine On HD Kumaraswamy

ದೀಪಾವಳಿಯ ದೀಪಾಲಂಕಾರಕ್ಕೆ ಬೀದಿದೀಪದ ಕಂಬದಿಂದ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ ಪ್ರಕರಣ ಸಂಬಂಧ ಬೆಸ್ಕಾಂ ವಿಧಿಸಿದ 68,526 ರೂ. ದಂಡದ ಮೊತ್ತವನ್ನು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಅವರು ಪಾವತಿಸಿದ್ದಾರೆ.

ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಕುಮಾರಸ್ವಾಮಿ, ಬೆಸ್ಕಾಂ 2.5 ಕಿಲೋ ವ್ಯಾಟ್ಗೆ ಲೆಕ್ಕ ತೆಗೆದುಕೊಂಡಿದೆ.

7 ದಿನಕ್ಕೆ 71 ಯೂನಿಟ್ ಆಗಲಿದೆ ಅಂತ ಕೊಟ್ಟಿದ್ದಾರೆ. ಬೆಸ್ಕಾಂ ಪ್ರಕಾರ, 2,526 ರೂ. ಬಿಲ್ ಬರಬೇಕಿತ್ತು. ಆದರೆ, 68,526 ರೂ. ಕರೆಂಟ್ ಬಿಲ್ ನೀಡಿದೆ.

ಹೀಗಾಗಿ ಕರೆಂಟ್ ಬಿಲ್ ಬಗ್ಗೆ ಪುನರ್ ಪರಿಶೀಲನೆ ಮಾಡಲು ಹೇಳಿದ್ದಾಗಿ ತಿಳಿಸಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗುತ್ತಲೇ ಕಾಂಗ್ರೆಸ್ ನ ಮುಖಂಡರು ‌ಕುಮಾರಸ್ವಾಮಿ ಮೇಲೆ ಮುಗಿಬಿದ್ದಿದ್ದರು.

Click to comment

Leave a Reply

Your email address will not be published. Required fields are marked *

Most Popular

To Top
error: Content is protected !!