ಚಿತ್ರದುರ್ಗದ ಬಳಿ ಅಪಘಾತ- ‌3 ತಿಂಗಳ ಶಿಶು ಸೇರಿ ಮೂವರ ಸಾವು

ಚಿತ್ರದುರ್ಗದ ಬಳಿ ಅಪಘಾತ- ‌3 ತಿಂಗಳ ಶಿಶು ಸೇರಿ ಮೂವರ ಸಾವು

ಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂರು ತಿಂಗಳ ಶಿಶು ಸೇರಿ ಮೂವರು ಮೃತಪಟ್ಟ ಘಟನೆ ತಾಲ್ಲೂಕಿನ ವಿಜಯಪುರ ಗ್ರಾಮದ ಸಮೀಪ ನಡೆದಿದೆ.

ಬೆಂಗಳೂರಿನ ಎಚ್.ಎಸ್.ಆರ್ ಬಡಾವಣೆ ನಿವಾಸಿಗಳಾದ ಜಾಕೀರ್ ಅಹಮ್ಮದ್ (60), ತಬಸೂಮ್ (28) ಹಾಗೂ ಮೂರು ತಿಂಗಳ ಹಯಾತ್ ಫಾತಿಮಾ ಮೃತಪಟ್ಟವರು. ನಯಾಜ್ (22), ಇಮ್ರಾನ್ ಖಾನ್ (32), ತಬ್ರೀಜ್ ಅಹಮ್ಮದ್ (27), ಸಬಾ (26) ಗಾಯಗೊಂಡಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗೋವಾದಿಂದ ಬೆಂಗಳೂರಿಗೆ ಹೊರಟಿದ್ದ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಮುಂದೆ ಸಾಗುತ್ತಿದ್ದ ಲಾರಿಗೆ ಅಪ್ಪಳಿಸಿದೆ. ಸ್ಥಳದಲ್ಲಿಯೇ ಮೂವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!