ಪತ್ರಕರ್ತನ ಬೈಕಿನಲ್ಲಿದ್ದ ಪೆಟ್ರೋಲ್ ಕದ್ದ ಕಳ್ಳರು

ಪತ್ರಕರ್ತನ ಬೈಕಿನಲ್ಲಿದ್ದ ಪೆಟ್ರೋಲ್ ಕದ್ದ ಕಳ್ಳರು

ದಾವಣಗೆರೆ: ದಾವಣಗೆರೆಯ ದೇವರಾಜ್ ಅರಸು ಬಡಾವಣೆಯಲ್ಲಿ ಪೆಟ್ರೋಲ್ ಕಳ್ಳರ ಹಾವಳಿ ಹೆಚ್ಚಾಗಿದೆ. ಇಲ್ಲಿನ ಸಿ ಬ್ಲಾಕಿನ ಮಸೀದಿ ರಸ್ತೆಯಲ್ಲಿ ಮನೆಯ ಮುಂದೆ ನಿಲ್ಲಿಸಿದ್ದ ಪತ್ರಕರ್ತ ರಾಮ್ ಪ್ರಸಾದ್ ಅವರ ಬೈಕಿನಲ್ಲಿದ್ದ ಪೆಟ್ರೋಲ್ ಕದಿಯಲಾಗಿದೆ.

ಎಂದಿನಂತೆ ಜೂ.16 ರ ರಾತ್ರಿ ಮನೆಯ ಮುಂದೆ ಬೈಕನ್ನು ನಿಲ್ಲಿಸಿದ್ದರು ಜೂ 17 ಬೆಳಗ್ಗೆ ನೋಡಿದಾಗ ಕೃತ್ಯ ಬೆಳಕಿಗೆ ಬಂದಿದೆ. ಇಲ್ಲಿನ ಬಡಾವಣೆಯಲ್ಲಿ ಪೆಟ್ರೋಲ್ ಕಳ್ಳರ ಹಾವಳಿ ಹೆಚ್ಚಾಗಿದೆ.

ಈ ಬಗ್ಗೆ ಕ್ರಮ ಕೈ ಗೊಳ್ಳಬೇಕು ಎಂದು ಸ್ಥಳಿಯರು ತಿಳಿಸಿದ್ದು ಬಸವನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!