ಶಕ್ತಿ ಯೋಜನೆ ಉದ್ಘಾಟನೆಯಲ್ಲಿ ಗೈರಾದ ಡಿಸಿ, ಎಸ್ ಪಿ, ಸಿಇಒ,.! ಬೇಸರ ವ್ಯಕ್ತಪಡಿಸಿದ ಸಚಿವರು
ದಾವಣಗೆರೆ: ಕಾಂಗ್ರೆಸ್ ಪಕ್ಷದ ಪ್ರಥಮ ಗ್ಯಾರಂಟಿ ಅನುಷ್ಠಾನದ `ಶಕ್ತಿ’ ಯೋಜನೆಯ ಉದ್ಘಾಟನಾ ಕಾರ್ಯಕ್ರಮಕ್ಕೆ ಅಧಿಕಾರಿಗಳು ಗೈರು ಹಾಜರಾಗಿದ್ದನ್ನು ಕಂಡ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ತೋಟಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯ್ತಿ ಸಿಇಒ, ಎಸ್ಪಿ ಸೇರಿದಂತೆ ಪ್ರಮುಖ ಅಧಿಕಾರಿಗಳು ಗೈರು ಹಾಜರಾಗಿದ್ದರು.
ಇದನ್ನು ಕಂಡ ಮಲ್ಲಿಕಾರ್ಜುನ್, ಇಂದು ಬಹಳ ಜನ ಅಧಿಕಾರಿಗಳು ಬಂದಿಲ್ಲ. ಏಕೆ ಬಂದಿಲ್ಲ ಎಂಬುದು ಗೊತ್ತಿಲ್ಲ. ಎಲ್ಲಿಯಾದರೂ ಹೆಂಡ್ತಿಯರನ್ನ ಕರಕೊಂಡು ಪ್ರವಾಸ ಹೋಗಿದ್ದಾರಾ..? ಎಂದು ಪ್ರಶ್ನಿಸಿದರು.
ಅಧಿಕಾರಿಗಳು ಕಾರ್ಯಕ್ರಮಗಳಿಗೆ ಹಾಜರಾಗಬೇಕು. ಜನಪ್ರತಿನಿಧಿಗಳ ಜೊತೆಗಿದ್ದು, ದೂರು ಬಾರದಂತೆ ಕೆಲಸ ಮಾಡಬೇಕು ಹೇಳಿದರು.