ಬೆಂಗಳೂರು: ಶಕ್ತಿ ಯೋಜನೆಗೆ ರಾಜ್ಯಾದ್ಯಂತ ಮಹಿಳೆಯರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಉಚಿತ ಪ್ರಯಾಣಕ್ಕೆ ಮಹಿಳೆಯರು ಫುಲ್ ಖುಷಿಯಾಗಿದ್ದಾರೆ.
ಯೋಜನೆ ಜಾರಿಯಾದ ಪ್ರಥಮ ದಿನವೇ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಒಟ್ಟು 5,71,023 ಮಹಿಳೆಯರು ಪ್ರಯಾಣ ಮಾಡಿದ್ದಾರೆ.
ಭಾನುವಾರ ಮಧ್ಯಾಹ್ನ 1ಕ್ಕೆ ಶಕ್ತಿ ಯೋಜನೆ ಉದ್ಘಾಟನೆಗೊಂಡಿತ್ತು. ಅಲ್ಲಿಂದ ರಾತ್ರಿ 12 ಗಂಟೆಯವರೆಗೆ ಪ್ರಯಾಣಿಸಿದ ಮಹಿಳೆಯರ ವಿವರನ್ನು ಸಾರಿಗೆ ನಿಗಮ ನೀಡಿದೆ. ಒಟ್ಟು 1,40,22,878 ರೂ. ಅದರ ಮೌಲ್ಯವಾಗಿದೆ.ಕೆಎಸ್‌ಆರ್‌ಟಿಯಲ್ಲಿ 1,93,831 ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದರು. ಅದರ ಮೌಲ್ಯ 58,16,178 ರೂ. ಆಗಿದೆ. ಬಿಎಂಟಿಸಿಯಲ್ಲಿ 2,01,215 ಮಹಿಳೆಯರು ಈ ಯೋಜನೆಯನ್ನು ಮೊದಲ ದಿನ ಬಳಸಿಕೊಂಡಿದ್ದರು. ಅದರ ಮೌಲ್ಯ 26,19,604 ರೂ.. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ 1,22,354 ಮಹಿಳೆಯರು ಪಯಣಿಸಿದ್ದರು. ಅದರ ಮೌಲ್ಯ 36,17,096 ರೂ.. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 53,623 ಮಹಿಳೆಯರು ಪ್ರಯಾಣ ಬೆಳೆಸಿದ್ದರು. ಅದರ ಮೌಲ್ಯ ರೂ. 19.70 ಲಕ್ಷವಾಗಿದೆ.
