ಲೋಕಲ್ ಸುದ್ದಿ

“ಎಸ್ ಎಸ್. ಮಲ್ಲಿಕಾರ್ಜುನ್ ರವರಿಗೆ, ಜಿಲ್ಲಾ ಕ ಸಾ ಪ ವತಿಯಿಂದ ಹೃದಯಸ್ಪರ್ಶಿ ಸನ್ಮಾನ

"ಎಸ್ ಎಸ್. ಮಲ್ಲಿಕಾರ್ಜುನ್ ರವರಿಗೆ, ಜಿಲ್ಲಾ ಕ ಸಾ ಪ ವತಿಯಿಂದ ಹೃದಯಸ್ಪರ್ಶಿ ಸನ್ಮಾನ

ದಾವಣಗೆರೆ: ಕರ್ನಾಟಕ ರಾಜ್ಯದ ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕೆ ಸಚಿವರು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಶ್ರೀಯುತ ಎಸ್. ಎಸ್. ಮಲ್ಲಿಕಾರ್ಜುನ್ ರವರನ್ನು ಇಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಬಿ. ವಾಮದೇವಪ್ಪ ಅವರ ನೇತೃತ್ವದಲ್ಲಿ ಅವರ ನಿವಾಸಕ್ಕೆ ತೆರಳಿ ಮಾನ್ಯ ಸಚಿವರನ್ನು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪರವಾಗಿ ಹಾಗೂ ಎಲ್ಲಾ ಕನ್ನಡದ ಮನಸುಗಳ ಪರವಾಗಿ ಅಭಿನಂದಿಸಿ ಹೃದಯಸ್ಪರ್ಶಿ ಸನ್ಮಾನವನ್ನು ಮಾಡಲಾಯಿತು.

ಇದೇ ಸಂದರ್ಭದಲ್ಲಿ ಜಿಲ್ಲಾ ಕ ಸಾ ಪ ದ ಅಧ್ಯಕ್ಷರು ಮಾನ್ಯ ಸಚಿವರಲ್ಲಿ ಈ ಹಿಂದೆ ನಿಗದಿಯಾಗಿದ್ದ ಮೂರನೇ ವಿಶ್ವ ಕನ್ನಡ ಸಮ್ಮೇಳನವನ್ನು ದಾವಣಗೆರೆ ನಗರದಲ್ಲಿ ಯೇ ನಡೆಸುವಂತಾಗಬೇಕೆಂದು ಸರ್ವ ಕನ್ನಡಿಗರ ಕೋರಿಕೆಯನ್ನು ಮಂಡಿಸಿದಾಗ ಮಾನ್ಯ ಸಚಿವರು ನಗುತ್ತಲೇ ಸಹಮತವನ್ನು ಸೂಚಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರು ,ಎಸ್ ಎಸ್ ವಿ ಸಂಘದ ಅಧ್ಯಕ್ಷರು ಆಗಿರುವ ,ಎಚ್ .ಆರ್.ಬಸವರಾಜಪ್ಪ ,ದಾವಣಗೆರೆ ಜಿಲ್ಲಾ ಕ ಸಾ ಪ ದ ಗೌರವ ಕಾರ್ಯದರ್ಶಿ ಬಿ. ದಿಳ್ಯಪ್ಪ, ಜಿಲ್ಲಾ ಕ ಸಾ ಪ ದ ನಿಕಟ ಪೂರ್ವ ಅಧ್ಯಕ್ಷರಾದ ಡಾ .ಎಚ್ಎಸ್ ಮಂಜುನಾಥ್ ಕುರ್ಕಿ ಸಾಹಿತ್ಯ ಪರಿಷತ್ತಿನ ಹಿರಿಯ ಸದಸ್ಯರುಗಳಾದ ವೈ. ವಸಂತಪ್ಪ, ಎಸ್.ಆರ್ ಶಿರಗಂಬಿ ,ಜನತಾ ಬಜಾರ್ ಅಧ್ಯಕ್ಷರಾದ ಜಿ.ಡಿ.ಗುರುಸ್ವಾಮಿ, ಕೆ .ಸಿ. ಲಿಂಗರಾಜ್ ಆನೆಕೊಂಡ ಮುಂತಾದವರು ಉಪಸ್ಥಿತರಿದ್ದು ಸಚಿವರಿಗೆ ಶುಭ ಕೋರಿದರು.

Click to comment

Leave a Reply

Your email address will not be published. Required fields are marked *

Most Popular

To Top