ದಾವಣಗೆರೆ: ಮನೆಯ ಮುಂದೆ ಶಿಥಿಲಗೊಂಡಿದ್ದ ಕೌಂಪೌಂಡ್‌ಗೆ ಅಳವಡಿಸಲಾಗಿದ್ದ ಕಬ್ಬಿಣದ ಗೇಟ್ ಆಟವಾಡುತ್ತಿದ್ದ ಬಾಲಕನ ಪಾಲಿಕೆ ಮೃತ್ಯುವಾಗಿ ಪರಿಣಮಿಸಿದೆ.
ಹೌದು, ಗೆಳೆಯರೊಂದಿಗೆ ಆಟವಾಡಿಕೊಂಡಿರಬೇಕಾದ ಬಾಲಕನ ಮೇಲೆ ಗೇಟ್ ಬಿದ್ದು ತೀವ್ರವಾಗಿ ರಸ್ತಸ್ರಾವಗೊಂಡ ಬಾಲಕ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆದಲ್ಲಿಯೇ ಅಸುನೀಗಿದ್ದಾನೆ. ಈ ಘಟನೆ ನಡೆದಿರುವುದು ಶುಕ್ರವಾರ ರಾತ್ರಿ ನಗರಕ್ಕೆ ಸಮೀಪದ ಬಸಾಪುರ ಗ್ರಾಮದಲ್ಲಿ.
ಬಸಾಪುರ ಗ್ರಾಮದ ಪುರೋಹಿತರ ಕೆಲಸ ಮಾಡುವ ಗುರುಶಾಂತಯ್ಯ ಎಂಬುವರ ಮಗ ನಾಗಾರ್ಜುನ್ ಮೃತ ಬಾಲಕ. 6ನೇ ತರಗತಿ ಓದುತ್ತಿದ್ದ ಈತ ಜೂ.2ರ ಶುಕ್ರವಾರ ರಾತ್ರಿ ಮನೆಯಲ್ಲಿ ಊಟ ಮಾಡಲು ಗೆಳೆಯರೊಂದಿಗೆ ಆಟವಾಡಲೂ ಹೊರ ಹೋಗಿದ್ದಾನೆ.
ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಹತ್ತಿರುವ ಇರುವ ಸಿದ್ದಪ್ಪ ಅವರ ಮನೆಯ ಕಾಂಪೌಂಡ್ ಗೇಟ್ ಶಿಥಿಲಗೊಂಡು ಬೀಳುವ ಸ್ಥಿತಿಯಲ್ಲಿದ್ದು, ಅಲ್ಲಿ ಆಟವಾಡಲೋ ಹೋಗಿದ್ದಾಗ ಗೇಟ್ ಬಿದ್ದು ಮುಖಕ್ಕೆ ಹಾಗೂ ತಲೆಗೆ ತೀವ್ರವಾಗಿ ಪೆಟ್ಟು ಬಿದ್ದು ಮೃತಪಟ್ಟಿದ್ದಾನೆ. ಈ ಕುರಿತು ಗುರುಶಾಂತಯ್ಯ ಅವರು ಆರ್.ಎಂ.ಸಿ. ಯಾರ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪುತ್ರನ ಸಾವಿಗೆ ಕಾರಣರಾದ ಮನೆಯ ಮಾಲೀಕರ ಮೇಲೆ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ.
