ವಿಯೆಟ್ನಾಂ ಟ್ಯಾಲೆಂಟ್ ಶೋ ತೀರ್ಪುಗಾರರಾಗಿ ದಾವಣಗೆರೆ ನಮನ ಅಕಾಡೆಮಿ ಮಾದವಿ ಆಯ್ಕೆ

ದಾವಣಗೆರೆ: ಜೂನ್ 11ರಂದು ವಿಯೆಟ್ನಾಂ ದೇಶದ ಹೋಚಿಮೀನ್ ನಗರದ ವಿಯೋಗ ವರ್ಲ್ಡ್ ವತಿಯಿಂದ ನಡೆಯುತ್ತಿರುವ 5 ನೇ ಆವೃತ್ತಿಯ “ದಿ ವಿಯೋಗ ವರ್ಲ್ಡ್ ಸ್ಟಾರ್ ಆರ್ಟಿಸ್ಟಿಕ್ ಯೋಗ ಅಂಡ್ ಇಂಟರ್ನ್ಯಾಷನಲ್ ಕಲ್ಚರಲ್ ಎಕ್ಸ್ಚೇಂಜ್” ಕಾರ್ಯಕ್ರಮದ ಅಂತರರಾಷ್ಟ್ರೀಯ ತೀರ್ಪುಗಾರ ರಾಗಿ ದಾವಣಗೆರೆಯ ಪ್ರತಿಷ್ಠಿತ ನಮನ ಅಕಾಡೆಮಿಯ ಗುರುಗಳಾದ ವಿದುಷಿ ಶ್ರೀಮತಿ ಮಾಧವಿ ಡಿ. ಕೆ. ಆಯ್ಕೆಯಾಗಿದ್ದಾರೆ.
ಬೆಂಗಳೂರಿನಿಂದ ಜೂನ್ 9ಕ್ಕೆ ಕಲ್ಕತ್ತಾ ಮೂಲಕ ವಿಯೆಟ್ನಾಂ ಗೆ ತೆರಳಿ ಜೂನ್ 11ರಂದು ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ನಡೆಯುತ್ತಿರುವ ಸ್ಪರ್ಧೆಗೆ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸುವುದರೊಂದಿಗೆ ಏಕವ್ಯಕ್ತಿ ಶಾಸ್ತ್ರೀಯ ನೃತ್ಯ ಪ್ರದರ್ಶನ ಹಾಗೂ ನಮನ ಅಕಾಡೆಮಿಯ ಶಿಷ್ಯರೊಂದಿಗೆ ಅಂತರರಾಷ್ಟ್ರೀಯ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದಲ್ಲಿ ಜನಪದ ಹಾಗೂ ಲಘು ಶಾಸ್ತ್ರೀಯ ನೃತ್ಯಗಳನ್ನು ನೀಡಲಿದ್ದಾರೆ.
ಇವರ ಪ್ರಯಾಣ ತೀರ್ಪುಗಾರಿಕೆ ಹಾಗೂ ನೃತ್ಯ ಪ್ರದರ್ಶನ ಯಶಸ್ವಿಯಾಗಿ ನಡೆಯಲಿ ಎಂದು ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪನವರು, ನೂತನ ಸಚಿವರು ಆದಂತ ಶ್ರೀ ಎಸ್ ಎಸ್ ಮಲ್ಲಿಕಾರ್ಜುನ್ ರವರು, ಶ್ರೀ ದಿನೇಶ್ ಕೆ ಶೆಟ್ಟಿ ಯವರು, ಕುಟುಂಬ ಸದಸ್ಯರು, ನಮನ ಅಕಾಡೆಮಿಯ ಕಾರ್ಯಕಾರಿಣಿ ಸಮಿತಿಯವರು, ಪೋಷಕರು, ವಿದ್ಯಾರ್ಥಿಗಳು, ಸಂಬಂಧಿಕರು, ಪ್ರೋತ್ಸಾಹಕರು ಹಾಗೂ ಹಿತೈಷಿಗಳು ಹಾರೈಸಿದ್ದಾರೆ.