ದಾವಣಗೆರೆ: ಸೇನೆ ಮತ್ತು ಅರೆಸೇನಾ ಪಡೆ ನಡುವಣ ಘರ್ಷಣೆ ಹಿನ್ನೆಲೆಯಲ್ಲಿ ಸುಡಾನ್ ರಾಜಧಾನಿ ಖಾರ್ಟೂಮ್ ನಲ್ಲಿ ಸಿಲುಕಿಕೊಂಡಿರುವ ದಾವಣಗೆರೆ ಜಿಲ್ಲೆಯ 43 ಜನರನ್ನು ಸುರಕ್ಷಿತವಾಗಿ ವಾಪಾಸ್ ಕರೆತರಲಾಗುತ್ತಿದೆ.
ಚನ್ನಗಿರಿ ತಾಲ್ಲೂಕು ಗೋಪನಾಳು ಗ್ರಾಮದ 30 ಜನ ಹಾಗೂ ಅಸ್ತಪನಹಳ್ಳಿ ಗ್ರಾಮದ 13 ಜನರು ಸುರಕ್ಷಿತವಾಗಿ ಸುಡಾನ್ ಬಂದರು ಕಡೆಗೆ ಬಸ್‌ನಲ್ಲಿ ತೆರಳುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಮಾಹಿತಿ ನೀಡಿದ್ದಾರೆ.
ಸೇನೆ ಮತ್ತು ಅರೆಸೇನಾ ಪಡೆ ನಡುವಣ ಘರ್ಷಣೆ ನಡೆಯುತ್ತಿದ್ದು, ಮದ್ದು ಗುಂಡುಗಳು ನಮ್ಮ ಮನೆಯ ಮೇಲೆ ಹಾದು ಹೋಗುತ್ತಿವೆ. ಈ ಶಬ್ಧಕ್ಕೆ ನಮ್ಮೆಲ್ಲರ ಎದೆ ನಡುಗುತ್ತಿದೆ. ಪ್ರತಿಯೊಬ್ಬರೂ ಇಲ್ಲಿ ಖಿನ್ನತೆಗೆ ಒಳಗಾಗಿದ್ದೇವೆ. ಶೀಘ್ರವೇ ನಮ್ಮನ್ನು ವಾಪಾಸ್ ಕರೆದುಕೊಳ್ಳಿಸುವಂತೆ ಮನವಿ ಮಾಡಿದ್ದರು.
