8 ಕೋಟಿ ಸಿಕ್ತು ಅರೆಸ್ಟ್ ಮಾಡಿಲ್ಲ.! ಮುಂದಿನ ವರ್ಷ ಪದ್ಮಭೂಷಣ ಕೊಡ್ತಾರೆ.! ಅರವಿಂದ್ ಕೇಜ್ರಿವಾಲ್
ದಾವಣಗೆರೆ : ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ, ಕಾಂಗ್ರೆಸ್, ಮತ್ತು ಜೆಡಿಎಸ್ ಪಕ್ಷಗಳು ಕಾಲಿಗೆ ಚಕ್ರಕಟ್ಟಿಕೊಂಡು ಓಡಾಡುತ್ತಿದ್ದಾರೆ. ಅದರೆ ಈಗ ರಾಜ್ಯದಲ್ಲಿ ಎಎಪಿ ಕೂಡಾ ರಾಜ್ಯದಲ್ಲಿ ಸಮಾವೇಶ ಮಾಡುವ ಮೂಲಕ ರಾಜ್ಯದಲ್ಲಿ ಕಹಳೆ ಊದಿದೆ. ಎಎಪಿ ಮುಖ್ಯಮಂತ್ರಿ ಅರವಿಂದ ಕೆಜ್ರೀವಾಲ್ ಕಮೀಷನ್ ಹಾಗೂ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ದಾವಣಗೆರೆ ಎಎಪಿ ಪಕ್ಷದ ಅಬ್ಬರ ಹೇಗಿತ್ತು ಅಂತೀರಾ ಈ ಸ್ಟೋರಿ ನೋಡಿ…
ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲಾ ರಾಜಕೀಯ ಪಕ್ಷಗಳು ಸಮಾವೇಶ ಹಾಗೂ ಯಾತ್ರೆಯನ್ನ ಭರ್ಜರಿ ನಡೆಸಿದ್ದಾರೆ. ಇವತ್ತು ಬೆಣ್ಣೆ ನಗರಿ ದಾವಣಗೆರೆಯಲ್ಲಿ ಎಎಪಿ ಬೃಹತ್ ಸಮಾವೇಶ ಮಾಡುವ ಮೂಲಕ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕರ್ನಾಟಕ ಚುನಾವಣೆಯ ಎಂಟ್ರೀಯಾಗಿದ್ದಾರೆ. ದಾವಣಗೆರೆ ಹೈಸ್ಕೂಲ್ ಮೈದಾನದಲ್ಲಿ ನಡೆದ ಬೃಹತ್ ಸಮಾವೇಶಕ್ಕೆ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಪಂಜಾಬ್ ಸಿ.ಎಂ ಭಗವಂತ್ ಮಾನ್ ಕಾರ್ಯಕ್ರಮ ಚಾಲನೆ ನೀಡಿದರು. ನಂತರ ಬಿಜೆಪಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ನೋಟು ಎಣಿಸುವ ಮಷೀನ್ ಸಾಮಾನ್ಯ ವ್ಯಕ್ತಿಗಳ ಮನೆಯಲ್ಲಿ ಸಿಗಲ್ಲ, ಲೂಟಿ ಮಾಡೋರ ಮನೆಯಲ್ಲಿ ಸಿಗುತ್ತೆ. ಇಲ್ಲಿ ಕರ್ನಾಟಕದಲ್ಲಿ ಶಾಸಕನ ಮಗನ ಮನೆಯಲ್ಲಿ 8 ಕೋಟಿ ಹಣ ಸಿಕ್ಕಿದೆ. ಅದು ಯಾರ ಹಣ? ಅದು ನಿಮ್ಮ ಹಣ, ತೆರಿಗೆ ಹಣ. ನೀವು ತೆರಿಗೆ ಕಟ್ಟುತ್ತೀರಿ ಅಲ್ವಾ? ಬೆಳಿಗ್ಗೆ ಎದ್ದು ಟೀ ಮಾಡಬೇಕಾದರೆ ಟ್ಯಾಕ್ಸ್. ಹಾಲು ಹಾಕಿದರೆ ಟ್ಯಾಕ್ಸ್, ತರಕಾರಿ ತಂದರೆ ಟ್ಯಾಕ್ಸ್.ರಾತ್ರಿ ನಿದ್ದೆ ಮಾಡೋಕೂ ಟ್ಯಾಕ್ಸ್ ಕಟ್ಟುತ್ತಿದ್ದೇವೆ.ಪಂಜಾಬ್ ಸಿಎಂ ಭಗವಂತ್ ಮಾನ್ ವಾಗ್ದಾಳಿ ನಡೆಸಿದರು.
ಎಪಿಸಿ ಸಮಾವೇಶದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೆಜ್ರೀವಾಲ್ ಬಿಜೆಪಿ ಮತ್ತು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ. ಕರ್ನಾಟಕ ಅತ್ಯಂತ ಒಳ್ಳೆ ರಾಜ್ಯ .ಅದರೆ ಕರ್ನಾಟಕ ರಾಜ್ಯ ಬರ್ಬಾಬ್ ಮಾಡ್ತಾ ಇದಾರೆ
ಅಮಿತ್ ಕೆಲ ದಿನಗಳ ಹಿಂದೆ ಬಂದು ದೊಡ್ಡ ದೊಡ್ಡ ಮಾತುಗಳನ್ನಾಡಿದರು.ಅಮಿತ್ ಶಾ ವಿಮಾನ ಹತ್ತಿ ಹೋದರು.8 ಕೋಟಿ ರೂಪಾಯಿಯೊಂದಿಗೆ ಇದೇ ಜಿಲ್ಲೆಯ ಒಬ್ಬ ನಾಯಕನ ಮಗ ಸಿಕ್ಕಾಕೊಂಡ.ಇದುವರೆಗೂ ಅವರನ್ನು ಅರಸ್ಟ್ ಮಾಡಿಲ್ಲ. ಮುಂದಿನ ವರ್ಷ ಇವರಿಗೆ ಪದ್ಮ ಭೂಷಣ ಅವಾರ್ಡ್ ಕೂಡಾ ಕೊಡ್ತಾರೆ.ರೇಡ್ ನಲ್ಲಿ 8 ಕೋಟಿ ಸಿಕ್ಕರೂ ಇಲ್ಲಿ ಅರೆಸ್ಟ್ ಮಾಡಲಿಲ್ಲ. ಆದರೆ ನಮ್ಮ ಮನೀಷ್ ಸಿಸೋಡಿಯಾ ಅರೆಸ್ಟ್ ಮಾಡಿದ್ದಾರೆ. ಸಿಸೋಡಿಯಾ ಸಾವಿರಾರು ಕೋಟಿ ಮಾಡಿದ್ದಾರೆ ಎಂದರು. ಆದರೆ ಸಿಸೋಡಿಯಾ ಮನೆಯಲ್ಲಿ ಕೇವಲ 10,000 ಹಣ ಸಿಕ್ಕಿದೆ. ಮೊದಲು ೨೦ ಕಮೀಷನ್ ಸರ್ಕಾರ ಅಂದರು. ಈಗ ಡಬಲ್ ಇಂಜಿನ್ ಸರ್ಕಾರ, ೨೦,೨೦ ಹೋಗಿ 40 % ಕಮಿಷನ್ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
ಒಟ್ನಲ್ಲಿ ದಾವಣಗೆರೆ ನಡೆದ ಎಎಪಿ ಬೃಹತ್ ಸಮಾವೇಶದಲ್ಲಿ ಮೋದಿ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಕಮೀಷನ್ ವಿರುದ್ಧ ವಾಗ್ದಾಳಿ ನಡೆಸಿ, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ಕಿಡಿಕಾರಿದ್ದಾರೆ.