ಉಪ್ಪು ತಿಂದವರು ನೀರು ಕುಡಿಯಲೇ ಬೇಕು, ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು || Video News
ದಾವಣಗೆರೆ : ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಲಂಚ ಪ್ರಕರಣ ಇಡೀ ರಾಜ್ಯಾದ್ಯಂತ ಸದ್ದು ಮಾಡುತ್ತಿದ್ದು, ಈ ಬಗ್ಗೆ ಸಂಸದ ಜಿ.ಎಂ.ಸಿದ್ದೇಶ್ವರ ಮೌನ ಮುರಿದಿದ್ದಾರೆ .
ತನ್ನ ಸ್ನೇಹಿತ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಗ್ಗೆ ಕಾರವಾಗಿ ನುಡಿದ ಸಂಸದ ಜಿಎಂ ಸಿದ್ದೇಶ್ವರ. ದಾವಣಗೆರೆ ಲೋಕಸಭಾ ಸದಸ್ಯ ಜಿ ಎಂ ಸಿದ್ದೇಶ್ವರ.
ನಮ್ಮ ಬಿಜೆಪಿಯ ಪಕ್ಷ ಲೋಕಾಯುಕ್ತ ಜಾರಿಗೆ ತಂದಿದೆ ಕಾಂಗ್ರೆಸ್ ಸರ್ಕಾರ ಲೋಕಾಯುಕ್ತ ತೆಗೆದು ಎಸಿಬಿ ರಚನೆ ಮಾಡಿದ್ದು ಆದರೆ ನಮ್ಮ ಸರಕಾರ ಬಂದ ಮೇಲೆ ಮುಖ್ಯಮಂತ್ರಿಗಳು ಲೋಕಾಯುಕ್ತವನ್ನು ಜಾರಿಗೆ ತಂದರು.
ಯಾರೇ ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗಲಿ ಬೇಕು ಅವರು ನೀರು ಕುಡಿಲೇಬೇಕು .ಏನು ಆಗಿದೆ ಅಂತಹ ನನಗೆ ಗೊತ್ತಿಲ್ಲ ವಿಚಾರಣೆ ಆಗುತ್ತೆ ವಿಚಾರಣೆಯಲ್ಲಿ ಏನು ವರದಿ ಬರುತ್ತೆ ನೋಡಿ ತಪ್ಪು ಮಾಡಿದ್ರೆ ಶಿಕ್ಷೆ ಆಗುತ್ತದೆ. ಚನ್ನಗಿರಿ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ನೀವೇ ಯಾರಾದರೂ ಅಭ್ಯರ್ಥಿ ಆಗಿ ಎಂದು ಸಂಸದರು ವ್ಯಂಗವಾಡಿದರು.
Please Subscribe👇
ಜಿಲ್ಲೆಯಲ್ಲಿ ಈಗಾಗಲೇ ಸಂಸದ ಜಿ.ಎಂ.ಸಿದ್ದೇಶ್ವರ ಹಾಗೂ ಮಾಡಾಳ್ ವಿರೂಪಾಕ್ಷಪ್ಪ ಗೆ ಆಗೋದಿಲ್ಲ ಎಂದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಹಿಂದೆ ಅಂದ್ರೆ ಕೊರೊನಾ ಸಮಯದಲ್ಲಿ ಸಭೆ ನಡೆಯುತ್ತಿದ್ದಾಗ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಸಂಸದ ಜಿಎಂ ಸಿದ್ದೇಶ್ವರಿಗೂ ಜೋರಾಗಿಯೇ ಜಟಾಪಟಿ ನಡೆದಿತ್ತು. ನೀನ್ಯಾರೋ ಕೇಳೋಕೆ, ಈ ಜಿಲ್ಲೆ ನಿಂದಾ ಎಂದು ಏಕವಚನದಲ್ಲಿ ದಾಳಿ ನಡೆಸಿಕೊಂಡಿದ್ದರು.
ಈ ಕುರಿತು ನಂತರ ಸುದ್ದಿಗಾರರ ಜತೆ ಮಾತನಾಡಿದ ಮಾಡಾಳು ವಿರೂಪಾಕ್ಷಪ್ಪ ನಾನು ಜನರ ಪರವಾಗಿ ಮಾತನಾಡಿದೆ. ಜನರು ಕಷ್ಟದಲ್ಲಿದ್ದಾರೆ, ಅವರಿಗೆ 2 ರೂ. ದರದಲ್ಲಿ ಶುದ್ಧ ನೀರು ಕೊಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಹೇಳಿದೆ. ಅದಕ್ಕೆ ಸಂಸದರು ಬಳಸಿದ ಶಬ್ದಗಳು ವಾಗ್ವಾದಕ್ಕೆ ಕಾರಣವಾಯಿತು ಎಂದಿದ್ದರು.
ನಂತರ ಜಿ.ಎಂ. ಸಿದ್ದೇಶ್ವರ ಪ್ರತಿಕ್ರಿಯಿಸಿ, ಕೋವಿಡ್ 19 ಕುರಿತು ಚರ್ಚಿಸಲು ಸಭೆ ಕರೆಯಲಾಗಿತ್ತು. ಮಾಡಾಳು ವಿರೂಪಾಕ್ಷಪ್ಪ ಕುಡಿವ ನೀರಿನ ವಿಚಾರ ಪ್ರಸ್ತಾಪಿಸಿದಾಗ, ಈ ಸಭೆಯಲ್ಲಿ ಕೊರೊನಾ ಬಗ್ಗೆ ಚರ್ಚಿಸಬೇಕು. ಕುಡಿಯುವ ನೀರಿನ ಬಗ್ಗೆ ಮಾತನಾಡುತ್ತಿದ್ದಾರೆ, ನೀವು ಅವರಿಗೆ ಹೇಳಬೇಕಿತ್ತು ಎಂದು ಜಿಲ್ಲಾಧಿಕಾರಿಗೆ ಮಂತ್ರಿಗಳು ತಿಳಿಸಿದರು. ಆಗ ನಾನು, ಕುಡಿಯುವ ನೀರಿಗೆ ಹಣ ಬೇಕು, ಸಿಎಂ ಬಳಿಗೆ ಹೋಗಿ ಕೇಳಿದರಾಯಿತು, ಆ ಪ್ರಶ್ನೆ ಈಗೇಕೆ ಎಂದು ಹೇಳಿದೆ. ಅದಕ್ಕೆ ಅವರು ಒರಟಾಗಿ ಮಾತನಾಡಿದರು, ನಾನೂ ಒರಟಾಗಿ ಮಾತಾಡಿದೆ ಎಂದಿದ್ದರು. ಅಂದಿನಿಂದ ಇವರಿಬ್ಬರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇತ್ತು..ಅಲ್ಲದೇ ಮಗನಿಗೆ ಸ್ಥಳೀಯ ರಾಜಕಾರಣ ಬಿಟ್ಟುಕೊಟ್ಟು ರಾಷ್ಟ್ರ ರಾಜಕಾರಣಕ್ಕೆ ಎಂಟ್ರಿ ಕೊಡಬೇಕಿದಿದ್ದರು.ಅಷ್ಟೊರೊಳಗೆ ಈ ಘಟನೆ ನಡೆದಿದ್ದು, ಮಾಡಾಳ್ ರಾಜಕಾರಣಕ್ಕೆ ಕಪ್ಪು ಚುಕ್ಕಿಯಾಗಿದೆ.