ಪಾಲಿಕೆ ವ್ಯಾಪ್ತಿಯಲ್ಲಿ ಖಾಲಿ ನಿವೇಶನಗಳ ಸ್ವಚ್ಛತೆಗೆ ಒಂದು ವಾರ ಗಡುವು: ಇಲ್ಲದಿದ್ದರೆ ಚ.ಅಡಿಗೆ ರೂ.10/- ರಂತೆ ಶುಲ್ಕ

ದಾವಣಗೆರೆ: ದಾವಣಗೆರೆ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿನ ಖಾಲಿ ನಿವೇಶನಗಳಲ್ಲಿ ಗಿಡಗಂಟಿಗಳು ಬೆಳೆದಿದ್ದು, ಕ್ರಿಮಿಕೀಟಗಳು, ಹಾವು ಮುಂತಾದವು ಹೆಚ್ಚಾಗಿ ಸುತ್ತಮುತ್ತಲಿನ ಜನರಿಗೆ ತೊಂದರೆಯಾಗುತ್ತಿದೆ.
ಹೀಗಾಗಿ ಖಾಲಿ ನಿವೇಶನಗಳ ಮಾಲೀಕರೆಲ್ಲರೂ ತಮ್ಮ ತಮ್ಮ ನಿವೇಶನಗಳಲ್ಲಿ ಒಂದು ವಾರದೊಳಗಾಗಿ ಗಿಡಗಂಟಿಗಳನ್ನು ತೆಗೆಸಿ ಸ್ವಚ್ಚ ಮಾಡಿಕೊಳ್ಳಬೇಕು. ಒಂದು ವೇಳೆ ತೆಗೆಸದೇ ಇದ್ದಲ್ಲಿ ಮಹಾನಗರಪಾಲಿಕೆ ವತಿಯಿಂದ ಸ್ವಚ್ಚಗೊಳಿಸಿ, ಪ್ರತಿ ಚ.ಅಡಿಗೆ ರೂ.10/- ರಂತೆ ಶುಲ್ಕ ವಿಧಿಸಿ ನಿವೇಶನದ ಕಂದಾಯದೊಂದಿಗೆ ಸೇರಿಸಿ ವಸೂಲಿ ಮಾಡಲಾಗುವುದೆಂದು ಮಹಾನಗರಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
                         
                       
                       
                       
                       
                       
                       
                      