ಹೊರಗುತ್ತಿಗೆ ಪೌರ ಕಾರ್ಮಿಕರನ್ನ ಖಾಯಂ ಗೊಳಿಸಿ: ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ ಶಿವಣ್ಣರಿಗೆ ಹಾವೇರಿ ಜಿಲ್ಲಾ ಡಿ ಎಸ್ ಎಸ್ ಘಟಕ ಮನವಿ
ಹಾವೇರಿ: ನಗರಸಭೆ ವ್ಯಾಪ್ತಿಯಲ್ಲಿ ೧)ಯಲ್ಲಪ್ಪ ದುರಗಪ್ಪ ಕೋಡಬಾಳ, ೨)ನಿಂಗಪ್ಪ ಶೇಖಪ್ಪ ಗಡ್ಡಿ, ೩)ಶಂಕ್ರಪ್ಪ ಮಾದೇವಪ್ಪ ಮರೆಣ್ಣನವರ ೪)ಅಜ್ಜಪ್ಪ ಮರೆಪ್ಪ ಬಂದಮ್ಮನವರ ೫)ರಾಜು ಫಕ್ಕೀರಪ್ಪ ವರ್ದಿ ೬)ಪೀರಪ್ಪ ಶಿರಬಡಗಿ ೭)ವಿಷ್ಣು ವಡಕಮ್ಮನವರ ೮)ಆಂಜನೇಯ ಮಲ್ಲೋಲ ಇವರುಗಳು ಸೇವೆ ಸಲ್ಲಿಸಿದ್ದು ಹಾಗೂ ೨೨ ಡ್ರೈವರ್ ಅವರು ೨೦೦೮ ರಿಂದ ಹೊರಗುತ್ತಿಗೆ ಆಧಾರದ ಮೇಲೆ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿದ್ದು ಕೂಡಲೇ ಅವರನ್ನು ಖಾಯಂಗೊಳಿಸಬೇಕೆಂದು ಒತ್ತಾಯಿಸಿ ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ವತಿಯಿಂದ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ಎಂ ಶಿವಣ್ಣ (ಕೋಟಿ) ಅವರಿಗೆ ಮನವಿ ಸಲ್ಲಿಸಲಾಯಿತು.
ಸರ್ಕಾರದ ಸುತ್ತೋಲೆಯ ಪ್ರಕಾರ ಹೊರಗುತ್ತಿಗೆ ನೇರಪಾವತಿ ವೇತನಕ್ಕೆ ಆಯ್ಕೆ ಮಾಡುವ ಸಂದರ್ಭದಲ್ಲಿ ನಗರಸಭೆ ಅಧಿಕಾರಿಗಳು ಬೇಜವಾಬ್ದಾರಿಯಿಂದ ಸದರಿಯವರನ್ನು ಲೋರ‍್ಸ ಅಂತಾ ದಾಖಲೆ ಮಾಡಿರುತ್ತಾರೆ ಆದರೆ ಹೊರಗುತ್ತಿಗೆದಾರರು ಸದರಿ ಪೌರಕಾರ್ಮಿಕರು ಅಂತಾ ದೃಡೀಕರಣ ಪತ್ರ ನೀಡಿರುತ್ತಾರೆ. ಈ ಎಂಟು ಜನರಿಗೆ ಹಾಗೂ ೨೨ ಡ್ರೈವರ್ ಅವರಿಗೆ ಅನ್ಯಾಯವಾಗಿರುತ್ತದೆ. ಮಾನವೀಯತೆಯ ಹಾಗೂ ಅಂತಹಕರಣದಲ್ಲಿ ಕಳೆದ ಒಂದುವರೆ ವರ್ಷಗಳಿಂದ ಕೆಲಸ ವಿಲ್ಲದೇ ವೇತನವಿಲ್ಲದೇ ಕುಟುಂಬದ ನಿರ್ವಹಣೆ ಮಾಡಲು ಕಷ್ಟಕರವಾಗಿದೆ. ತಕ್ಷಣವೇ ಸದರಿಯವರನ್ನು ಸೇವೆಗೆ ಸೇರ್ಪಡೆ ಮಾಡಿಕೊಳ್ಳಲು ಗುತ್ತಿಗೆದಾರರಿಗೆ ಹಾಗೂ ಪೌರಾಯುಕ್ತರಿಗೆ ಆದೇಶ ಮಾಡಬೇಕೆಂದು ಆಯೋಗದ ಅಧ್ಯಕ್ಷರಿಗೆ ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ. ಇದೇ ಸಮಯದಲ್ಲಿ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ಎಂ ಶಿವಣ್ಣ ಅವರಿಗೆ ಡಿ ಎಸ್ ಎಸ್ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಆದಿ ಜಾಂಬವ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಡಿ ಎಸ್ ಮಾಳಗಿ. ಡಿಎಸ್ ಎಸ್ ರಾಜ್ಯ ಸಮಿತಿ ಸದಸ್ಯರಾದ ಉಡಚಪ್ಪ ಮಾಳಗಿ.ಜಿಲ್ಲಾ ಸಂಚಾಲಕ ಮಾಲತೇಶ ಯಲ್ಲಾಪುರ.ಮುಖಂಡರಾದ ಮಂಜಪ್ಪ ಮರೋಳ.ಮಲ್ಲೇಶಪ್ಪ ಕಡಕೋಳ.ಶ್ರೀಕಾಂತ ಗಡ್ಡಿ.ಮಂಜುನಾಥ ದೊಡ್ಡಮರೆಮ್ಮನವರ.ಮಾಲತೇಶ ಕನ್ನಮ್ಮನವರ.ಗುಡ್ಡಪ್ಪ ಚಿಕ್ಕಪ್ಪನವರ.ಶ್ರೀಮತಿ ನಾಗರತ್ನಮ್ಮ ಧಾರವಾಡಕರ.ಶ್ರೀಮತಿ ರಾಜೇಶ್ವರಿ ಮುಂದಿನಮನಿ.ಶ್ರೀಮತಿ ರೇಖಾ ಹರಿಜನ. ಸಿದ್ದಪ್ಪ ಯತ್ನಳ್ಳಿ.ನೀಲಪ್ಪ ಡಿ ಸೇರಿದಂತೆ ಡಿಎಸ್ ಎಸ್ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.