ಹಳೇ ಕುಂದವಾಡ ಶ್ರೀ ಕರಿಬಸವೇಶ್ವರ ಸ್ವಾಮಿ ಪುಣ್ಯಕ್ಷೇತ್ರದಲ್ಲಿ ಮಹಾಶಿವರಾತ್ರಿ ಮಾರ್ಚ್ 1ರಿಂದ 9 ದಿನಗಳು ವಿಶೇಷ ಪೂಜೆ

ದಾವಣಗೆರೆ: ಇಲ್ಲಿಗೆ ಸಮೀಪದ ಹಳೇ ಕುಂದವಾಡ ಗ್ರಾಮದಲ್ಲಿರುವ ಶ್ರೀ ಕರಿಬಸವೇಶ್ವರ ಸ್ವಾಮಿ ಪುಣ್ಯಕ್ಷೇತ್ರದಲ್ಲಿ ಮಹಾಶಿವರಾತ್ರಿ ಅಂಗವಾಗಿ ಇದೇ ಮಾರ್ಚ್ 1ರಿಂದ 9 ರವರೆಗೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಲಿವೆ.
ಮಾರ್ಚ್ 1ರಂದು ಮುಂಜಾನೆ ಅಜ್ಜಯ್ಯನವರ ಅಮೃತ ಶೀಲಾ ಮೂರ್ತಿಗೆ ರುದ್ರಾಭಿಷೇಕ, ಹೋಮ-ಹವನ. ಬೆಳಗ್ಗೆ 10.30ಕ್ಕೆ ಹಳೇ ಕುಂದವಾಡದ ಶ್ರೀ ಕರಿಬಸವೇಶ್ವರ ಸ್ವಾಮಿ ಪುಣ್ಯಕ್ಷೇತ್ರದ ಧರ್ಮಾಧಿಕಾರಿ ಶ್ರೀ ಜೆ. ರಾಜಣ್ಣ ಅವರ ನೇತೃತ್ವದಲ್ಲಿ ಧ್ವಜಾರೋಹಣ ನೆರವೇರಲಿದ್ದು ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಎಸ್ಪಿ ಸಿ.ಬಿ. ರಿಷ್ಯಂತ್, ನಗರ ಪಾಲಿಕೆ ಮಹಾಪೌರರಾದ ಜಯಮ್ಮ ಗೋಪಿನಾಯಕ್, ಉಪಮೇಯರ್ ಗಾಯತ್ರಿಬಾಯಿ ಖಂಡೋಜಿರಾವ್, ಪಾಲಿಕೆ ಸದಸ್ಯರಾದ ಶಿಲ್ಪಾ ಜಯಪ್ರಕಾಶ್, ಬಿಐಇಟಿ ಕಾಲೇಜಿನ ಪ್ರಾಂಶುಪಾಲರಾದ ಹೆಚ್.ಬಿ. ಅರವಿಂದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಪಾಲಾಕ್ಷ ಸೇರಿದಂತೆ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ.
ಮಧ್ಯಾಹ್ನ 1.30ಕ್ಕೆ ಹೋಮ, ಹವನದ ಪೂರ್ಣಾಹುತಿ,ನೆರವೇರಲಿದ್ದು. ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ.ಶಾಮನೂರ ಶಿವಶಂಕರಪ್ಪ ಕುಟುಂಬ ವರ್ಗ ಹಾಗೂ ಹರಿಹರ ಶಾಸಕ ಎಸ್.ರಾಮಪ್ಪ ಹಾಗೂ ಅಥಣಿ ವೀರಣ್ಣ,ಅಣಬೇರು ರಾಜಣ್ಣ ಭಾಗವಹಿಸಲಿದ್ದಾರೆ
ಸಂಜೆ ವಿಶೇಷ ಪೂಜೆ ಮತ್ತು ಭಜನೆ ನಡೆಯಲಿದೆ.
ಮಾರ್ಚ್ 2ರಂದು ಮುಂಜಾನೆ ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ರುದ್ರಾಭಿಷೇಕ, ಅಮಾವಾಸೆ ವಿಶೇಷ ಪೂಜೆ, ಗುಗ್ಗಳ ನಡೆಯಲಿದೆ. ಸಂಜೆ 7ಕ್ಕೆ ಕರಿಬಸವೇಶ್ವರ ಸ್ವಾಮಿಯ ಬೆಳ್ಳಿ ಮೂರ್ತಿ ಪಲ್ಲಕ್ಕಿ ಉತ್ಸವ ರಾಜಬೀದಿಗಳಲ್ಲಿ ವಾದ್ಯ, ಮೇಳಗಳೊಂದಿಗೆ ನಡೆಯಲಿದೆ.
ಉದ್ಯಮಿ ಎಸ್.ಎಸ್.ಗಣೇಶ್,ದಾವಣಗೆರೆ ಅರ್ಬನ್ ಬ್ಯಾಂಕ್ ನ ಅಧ್ಯಕ್ಷ ಕೋಗುಂಡಿ ಬಕ್ಕೇಶಪ್ಪ ಭಾಗವಹಿಸಲಿದ್ದಾರೆ.
ಮಾರ್ಚ್ 3ರಿಂದ 8ರವರೆಗೆ ಕರಿಬಸವೇಶ್ವರ ಸ್ವಾಮಿಗೆ ಪೂಜೆ ನೆರವೇರಲಿದೆ.
ಮಾರ್ಚ್ 9ರಂದು ಸ್ವಾಮಿಯ ಪಳ್ಹಾರ ಪ್ರಸಾದ ವಿನಿಯೋಗ ಹಾಗೂ ಮಧ್ಯಾಹ್ನ 12ಕ್ಕೆ ಮಾತೃಶ್ರೀ ರಾಜಮಾತೆ ಅವರ ಮೂವತ್ತನೇ ವರ್ಷದ ಪುಣ್ಯಾರಾಧನೆ ಕಾರ್ಯಕ್ರಮವು ರಟ್ಟಿಹಳ್ಳಿಯ ಕಬ್ಬಿಣ ಕಂತಿಮಠ ಶ್ರೀ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಮತ್ತು ಸಿಗಂದೂರು ಪುಣ್ಯ ಕ್ಷೇತ್ರದ ಧರ್ಮದರ್ಶಿಗಳಾದ ರಾಮಣ್ಣ ಅವರ ಸಾನಿಧ್ಯದಲ್ಲಿ ನಡೆಯಲಿದೆ. ನಂತರ ಅನ್ನಸಂತರ್ಪಣೆ ನಡೆಯಲಿದೆ ಎಂದು ಹಳೇಕುಂದವಾಡದ ಶ್ರೀ ಕರಿಬಸವೇಶ್ವರ ಸ್ವಾಮಿಯ ಟ್ರಸ್ಟ್ ಮತ್ತು ಗ್ರಾಮಸ್ಥರು ತಿಳಿಸಿದ್ದಾರೆ.

 
                         
                       
                       
                       
                       
                       
                       
                      