ವಾಗೀಶಸ್ವಾಮಿ ಅಭಿಮಾನಿ ಬಳಗದಿಂದ : ಮಹಿಳಾ ಸಮಾವೇಶ ಮತ್ತು ನಗೆಹಬ್ಬ, ಬಾಡಾ ಗ್ರಾಮದಲ್ಲಿ ನಕ್ಕು ನಗಿಸಲು ಬರುತ್ತಿದ್ದಾರೆ ಪ್ರಾಣೇಶ್ ತಂಡ

ದಾವಣಗೆರೆ : ಶ್ರೀ ಬಿ.ಎಂ. ವಾಗೀಶಸ್ವಾಮಿ ಅಭಿಮಾನಿ ಬಳಗ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಾ.17ರ ಗುರುವಾರ ಸಂಜೆ 4 ಗಂಟೆಗೆ ದಾವಣಗೆರೆ ನಗರ ವ್ಯಾಪ್ತಿಯ ಬಾಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಹಿಳಾ ಸಮಾವೇಶ ಮತ್ತು ನಗೆಹಬ್ಬ – 2022 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಹೆತ್ತು ಹೊತ್ತು ಸಾಕಿ ಸಲಹುವ ನಮ್ಮೆಲ್ಲರ ಜನ್ಮದಾತೆ ತಾಯಿಯಾಗಿ, ಅಕ್ಕ ತಂಗಿ ಪುತ್ರಿ ಪತ್ನಿಯಾಗಿ ನಮ್ಮ ಬದುಕಿನ ಅಪೂರ್ವ ಸ್ಥಾನಗಳನ್ನು ತುಂಬುವ ನಮ್ಮೆಲ್ಲರ ಬದುಕಿನ ಆಧಾರ ಸ್ಥಂಬವಾಗಿರುವ ಮಹಿಳೆಯನ್ನು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಈ ಸಂದರ್ಭದಲ್ಲಿ ಸ್ಮರಣೆ ಮಾಡಿ ಕೃತಜ್ಞತೆ ಸಲ್ಲಿಸುವ ಪ್ರಯುಕ್ತ ಬಿ.ಎಂ. ವಾಗೀಶಸ್ವಾಮಿ ಅಭಿಮಾನಿ ಬಳಗದ ವತಿಯಿಂದ ಮಹಿಳಾ ಸಮಾವೇಶ ಹಾಗೂ ಹಾಸ್ಯ ಸಂಜೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಹಾಸ್ಯ ಕಲಾವಿದರಾದ ಗಂಗಾವತಿ ಪ್ರಾಣೇಶ್, ಕೃಷ್ಣೆಗೌಡ, ನರಸಿಂಹ ಜೋಷಿ, ಬಸವರಾಜ್ ಮಾಮನಿ, ಇಂದುಮತಿ ಸಾಲಿಮಠ ಆಗಮಿಸಿ ಹಾಸ್ಯ ಸಂಜೆ ಕಾರ್ಯಕ್ರಮ ನಡೆಸಿ ಕೊಡುವರು. ಈ ಕಾರ್ಯಕ್ರಮಕ್ಕೆ ಬಾಡ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನಾಗರಿಕ ಬಂಧುಗಳು, ಮಹಿಳೆಯರು, ಸ್ವಸಹಾಯ ಸಂಘಗಳ ಪ್ರತಿನಿಧಿಗಳು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು, ಯುವಕ ಯುವತಿಯರು ಆಗಮಿಸಿ ಯಶಸ್ವಿಗೊಳಿಸುವಂತೆ ಕೋರಿದ್ದಾರೆ.