ಅಮೆರಿಕಾದ ಚೆಲುವಿಗೆ ಭುವನ ಸುಂದರಿ ಪಟ್ಟ

miss universe Miss USA is Bonnie Gabriel

ಲೂಸಿಯಾನದ ನ್ಯೂ ಆರ್ಲೀನ್ಸ್‌ನಲ್ಲಿ ಭುವನ ಸುಂದರಿ ಸ್ಪರ್ಧೆಯ 71ನೇ ಆವೃತ್ತಿಯಲ್ಲಿ ಅಮೆರಿಕದ ಟೆಕ್ಸಾಸ್‌ ರಾಜ್ಯದ ರೂಪದರ್ಶಿ, ಮಿಸ್‌ ಯುಎಸ್‌ಎ ಆರ್‌’ಬೋನ್ನಿ ಗೇಬ್ರಿಯಲ್‌ ಅವರು ಶನಿವಾರ ‘ಭುವನ ಸುಂದರಿ’ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಆರ್‌’ಬೋನ್ನಿ ಅವರು ಮಿಸ್‌ ಯುಎಸ್‌ಎ ಮತ್ತು ಭುವನ ಸುಂದರಿ ಸ್ಪರ್ಧೆಯಲ್ಲಿ ಜಯಗಳಿಸಿದ ಪ್ರಥಮ ಫಿಲಿಪಿನೊ ಅಮೆರಿಕನ್‌ ಆಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಸ್ತ್ರ ವಿನ್ಯಾಸಕಿ, ಹೊಲಿಗೆ ತರಬೇತುಗಾರ್ತಿಯಾಗಿರುವ ಇವರು ನಾರ್ಥ್‌ ಟೆಕ್ಸಾಸ್‌ ವಿ.ವಿಯಿಂದ ಪದವಿ ಪಡೆದಿದ್ದಾರೆ. ಮಿಸ್‌ ವೆನೆಜುವೆಲಾ ಅಮಂಡಾ ಡುಡಾಮೆಲ್‌ ಮೊದಲ ರನ್ನರ್‌ಅಪ್‌ ಆಗಿ ಹೊರಹೊಮ್ಮಿದರೆ, ಮಿಸ್‌ ಡಾಮಿನಿಕ್‌ ರಿಪಬ್ಲಿಕ್‌ ಆಂಡ್ರೀನಾ ಮಾರ್ಟಿನೆಝ್‌ ಎರಡನೇ ರನ್ನರ್‌ಅಪ್‌ ಆಗಿ ಆಯ್ಕೆ ಆಗಿದ್ದಾರೆ.  ಕೆಳದ ವರ್ಷ ಭಾರತದ ಹರ್ನಾಜ್‌ ಸಂಧು ಅವರು ಭುವನ ಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!