ಸನ್ಯಾಸ ದೀಕ್ಷೆ ಸ್ವೀಕರಿಸಲಿರುವ 20ರ ಯುವತಿ ವಿಧಿ ಕುಮಾರಿ

ಹೊಸಪೇಟೆ: ಎಸ್ಸೆಸ್ಸೆಲ್ಸಿಯಲ್ಲಿ ಶೇ 94.8, ಪಿಯುಸಿಯಲ್ಲಿ ಶೇ 99ರಷ್ಟು ಅಂಕ ಗಳಿಸಿರುವ 20 ವರ್ಷದ ಯುವತಿ ವಿಧಿ ಕುಮಾರಿ ಅವರು ಆಚಾರ್ಯ ಭಗವಂತ ನರರತ್ನ ಸೂರಿಶ್ವರಜೀ ಮಹಾರಾಜ ಅವರ ಸಾನ್ನಿಧ್ಯದಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಲಿದ್ದಾರೆ.ಶ್ರೀ ಆದಿನಾಥ ಜೈನ ಶ್ವೇತಾಂಬರ ಸಂಘದಿಂದ ನಗರದಲ್ಲಿ ಜ. 17 ಹಾಗೂ 18ರಂದು ಪ್ರಥಮ ಜೈನ ದೀಕ್ಷಾ ಸಮಾರಂಭ ಆಯೋಜಿಸಲಾಗಿದ್ದು, ಜ. 17ರಂದು ವಿಧಿ ಕುಮಾರಿ ಶೋಭಾಯಾತ್ರೆ ನಡೆಯಲಿದೆ. ಮರುದಿನ ನರರತ್ನ ಮಹಾರಾಜರು ದೀಕ್ಷೆ ನೀಡುವರು.
ಕಾಂತಿಲಾಲ್‌ಜೀ ಹಾಗೂ ರೇಖಾದೇವಿ ಜಿರಾವಾಲ ದಂಪತಿಯ ಮೂರನೇ ಮಗಳಾದ ವಿಧಿ ಕುಮಾರಿ ಅವರು ಸ್ವಯಂಪ್ರೇರಣೆಯಿಂದ ಧರ್ಮ ಪ್ರಸಾರ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಮುಂದೆ ಬಂದಿದ್ದಾರೆ ಎಂದು ನರರತ್ನ ಮಹಾರಾಜರು ತಿಳಿಸಿದ್ದಾರೆ.ನನಗೀಗ 52 ವರ್ಷ. 10ನೇ ವಯಸ್ಸಿನಲ್ಲೇ ನಾನು ಕೂಡ ಸನ್ಯಾಸ ಸ್ವೀಕರಿಸಿದ್ದೆ. ಇದುವರೆಗೆ ನೂರಕ್ಕೂ ಹೆಚ್ಚು ಜನರಿಗೆ ದೀಕ್ಷೆ ಕೊಟ್ಟಿರುವೆ. 8 ವರ್ಷ ಮೇಲಿನ ಅನೇಕರು ಸನ್ಯಾಸ ದೀಕ್ಷೆ ಪಡೆದುಕೊಂಡಿದ್ದಾರೆ’ ಎಂದವರು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!