ಮಠ ವಿದ್ಯಾರ್ಥಿ ನಿಲಯವಾಗಬೇಕು, ಜ್ಞಾನಾರ್ಜನೆ ಅನ್ನದಾಸೋಹವಾಗಬೇಕು : ಸಿಎಂ ಬೊಮ್ಮಾಯಿ

ಹಾವೇರಿ: ಶೀಘ್ರಲ್ಲಿಯೇ ಗಂಗಾಮತಸ್ತ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಲು ಕ್ರಮಕೈಗೊಳ್ಳಲಾಗಿದೆ ಎಂದು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಭಾನುವಾರ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠ (ರಿ) ವತಿಯಿಂದ ಸುಕ್ಷೇತ್ರ ನರಸೀಪುರದ ಗುರುಪೀಠದಲ್ಲಿ ಆಯೋಜಿಸಿರುವ ಶ್ರೀ ನಿಜಶರಣ ಅಂಬಿಗರಚೌಡಯ್ಯನವರ 5ನೇ ಶರಣ ಸಂಸ್ಕೃತಿ ಉತ್ಸವ, ಹಾಗೂ ಶ್ರೀ ನಿಜಶರಣ ಅಂಬಿಗರಚೌಡಯ್ಯನವರ 903ನೇ ಜಯಂತೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

28 ಉಪಕುಲಗಳನ್ನು ಒಟ್ಟು ಮಾಡುವ ಕೇಂದ್ರ. ಒಗ್ಗಟ್ಟಿನಲ್ಲಿ ಬಲವಿದೆ. ಈ ಮಠದ ಬೆಳವಣಿಗೆ ಈ ಕುಲದ ಬೆಳವಣಿಗೆಯೊಂದಿಗೆ ಸೇರಿದೆ. ಈ ಮಠದಿಂದ ಸ್ಫೂರ್ತಿ ಪಡೆಯಬೇಕಿದ್ದು, ಇದಕ್ಕೆ ಶಕ್ತಿ ತುಂಬುವ ಕೆಲಸವನ್ನು ಮಾಡುತ್ತೇವೆ. ಗುರುಕುಲ ನಿರ್ಮಾಣವಾಗುತ್ತಿದ್ದು, ಮಠಕ್ಕೆ 5 ಕೋಟಿ ರೂ.ಗಳನ್ನು ಈಗಾಗಲೇ ಬಿಡುಗಡೆ ಮಾಡಿದೆ. 15 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿದರು. ಹಿಂದುಳಿದ ಮಠಗಳಿಗೆ ಅನುದಾನ ಬಿಡುಗಡೆ ಮಾಡಿದಾಗಲೂ 2 ಕೋಟಿ ರೂ.ಗಳ ಮಂಜೂರಾತಿ ಆಗಿದೆ. ಅದನ್ನೂ ಕೂಡ ಬೇಗ ಬಿಡುಗಡೆ ಮಾಡಲಾಗುವುದು.ಇಲ್ಲಿನ ಮಠ ವಿದ್ಯಾರ್ಥಿ ನಿಲಯವಾಗಬೇಕು, ಜ್ಞಾನಾರ್ಜನೆ ಅನ್ನದಾಸೋಹವಾಗಬೇಕು ಎಂದು ತಿಳಿಸಿದರು.

ಇದು ನಮ್ಮ ಶರಣರ ಪರಂಪರೆ ನಿತ್ಯ ನಿರಂತರವಾಗಿ ಮಠದಿಂದ ಆಗಬೇಕು. ಈ ಸಮಾಜ ಬೇರೆ ವೃತ್ತಿ ಗಳನ್ನು ಮಾಡುತ್ತಿದೆ. ಒಳನಾಡು ಮೀನುಗಾರಿಕೆಯನ್ನು ದೊಡ್ಡ ಪ್ರಮಾಣದಲ್ಲಿ ಮಾಡುತ್ತಿದೆ. ಕಾಲ ಬದಲಾಗಿದ್ದು, ನಾವೆಲ್ಲರೂ ಜ್ಞಾನಾರ್ಜನೆ ಮಾಡಿದಾಗ ಸಮಕಾಲೀನ ಸವಾಲುಗಳನ್ನು ಎದುರಿಸಬಹುದು. ಮಕ್ಕಳು. ಮುಂದುವರೆದು, ಇತರೆ ವೃತ್ತಿಗಳನ್ನು ಮಾಡಿದಾಗ ಈ ಗಂಗಾಮತಸ್ತ ಕುಲ ಮುಂದುವರೆಯುತ್ತದೆ. ಮಕ್ಕಳಿಗೆ ವಿದ್ಯಾಭ್ಯಾಸ ಎಷ್ಟೇ ಕಷ್ಟವಿದ್ದರೂ ಓದಿಸಬೇಕು ಎಂದರು. ನಾವು ಗಂಗಾಮತಸ್ತ ಗುರುಗಳ ಭಕ್ತನಾಗಿ ಇಲ್ಲಿಗೆ ಬಂದಿದ್ದೇನೆ ಎಂದರು. ಸಮುದಾಯ ಭವನಕ್ಕೆ ಬರುವ ಬಜೆಟ್ ನಲ್ಲಿ ಮೀಸಲಿಡಲಾಗುವುದು ಎಂದು ಬೊಮ್ಮಾಯಿ ಭರವಸೆ ನೀಡಿದರು.

Leave a Reply

Your email address will not be published. Required fields are marked *

error: Content is protected !!