ಕಾಳ ಸಂತೆಯಲ್ಲಿ ಸಾಗಾಟ ಮಾಡುತ್ತಿದ್ದ ಅಕ್ರಮ ಪಡಿತರ ಅಕ್ಕಿ ವಶ ಇಬ್ಬರ ಬಂಧನ
ದಾವಣಗೆರೆ– ಕಾಳಸಂತೆಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದ 480 ಕೆ.ಜಿ.ಅಕ್ಕಿ, 70 ಕೆ.ಜಿ. ರಾಗಿ, ಎರಡು ತೂಕದ ಯಂತ್ರಗಳು ಹಾಗೂ ಎರಡು ಆಟೋಗಳ ಸಹಿತ ಇಬ್ಬರನ್ನು ಇಲ್ಲಿನ ಕೆಟಿಜೆ ಜನರ ಪೋಲೀಸರು ವಶಪಡಿಸಿಕೊಂಡಿದ್ದಾರೆ.
ಕಾಳ ಸಂತೆಯಲ್ಲಿ ಪಡಿತರ ಸಾಗಾಟ ನಡೆಸುತ್ತಿದ್ದ ಎರಡು ಆಟೋಗಳನ್ನು ತಡೆದು ನಿಲ್ಲಿಸಿರುವುದಾಗಿ ಹಿಂದೂ ಜನ ಜಾಗೃತಿ ಸಮಿತಿಯ ಚೇತನ್ ದೂರವಾಣಿ ಕರೆ ಮಾಡಿ ತಿಳಿಸಿದ್ದು, ಈ ಬಗ್ಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಅಟೋಗಳಲ್ಲಿ ಅಕ್ರಮವಾಗಿ ಪಡಿತರ ಸಾಗಿಸುತ್ತಿದ್ದುದು ಕಂಡು ಬಂದಿರುವುದಾಗಿ ಆಹಾರ ಇಲಾಖೆಯ ನಿರೀಕ್ಷಕರು ನೀಡಿದ ದೂರಿನನ್ವಯ ಪೋಲೀಸರು ಕ್ರಮ ತೆಗೆದುಕೊಂಡಿದ್ದಾರೆ