ಅಂಬಿಗರ ಚೌಡಯ್ಯ ಹಾಗೂ ವೇಮನರ ಚಿಂತನೆಗಳು ಇಂದಿನ ಸಮಾಜಕ್ಕೆ ಮಾದರಿ -ಜಿಲ್ಲಾಧಿಕಾರಿ ಶಿವಾನಂದ ಕಾಪಶಿ
ದಾವಣಗೆರೆ : ನೇರ ನಿಷ್ಠೂರವಾದಿಗಳಾದ ಸಮ ಸಮಾಜದ ನಿರ್ಮಾಣ ಪ್ರತಿಪಾದಿಸಿದ ನಿಜಶರಣ ಅಂಬಿಗರ ಚೌಡಯ್ಯ ಹಾಗೂ ಮಹಾಯೋಗಿ ವೇಮನರ ಆದರ್ಶಗಳು ಇಂದಿನ ಸಮಾಜಕ್ಕೆ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಶಿವಾನಂದ ಕಾಪಶಿ ಹೇಳಿದರು.
ಶನಿವಾರ ಜಿಲ್ಲಾಡಳಿತ ಭವನ, ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಹಾನಗರ ಪಾಲಿಕೆ ಸಹಯೋಗದಲ್ಲಿ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ನಡೆದ ಶ್ರೀಮಹಾಯೋಗಿ ವೇಮನ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
ನಿಜಶರಣ ಅಂಬಿಗರ ಚೌಡಯ್ಯನವರು 12ನೇ ಶತಮಾನದಲ್ಲಿಯೇ ಜಾತೀಯತೆ ಮೌಡ್ಯತೆಯನ್ನು ಖಂಡಿಸಿ ತಮ್ಮ ಹೆಸರನ್ನೇ ಅಂಕಿತವನ್ನಾಗಿಟ್ಟುಕೊಂಡಿರುವ ವಿಭಿನ್ನ ವ್ಯಕ್ತಿತ್ವದ ಶ್ರೇಷ್ಠವಚನಾಕಾರ ಇವರ ವಚನ ತತ್ವದರ್ಶಗಳು ಇಂದಿನ ಸಮಾಜಕ್ಕೆ ಮಾದರಿಯಾಗಿವೆ ಎಂದರು.
ನಿಜಶರಣ ಅಂಬಿಗರ ಚೌಡಯ್ಯನವರು ಅಲ್ಲಮ ಬಸವಣ್ಣರ ಕಾಲದ ದಿಟ್ಟತನದ ಸಮಾಜದ ಓರೆ ಕೋರೆಗಳನ್ನು ತಿದ್ದುವಲ್ಲಿ ಸಫಲರಾಗಿದ್ದಾರೆ ಇವರ ವಚನ ಸಂಸ್ಕøತಿಯನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.
ಶ್ರೀ ಮಹಾಯೋಗಿ ವೇಮನರು 15ನೇ ಶತಮಾನ ಕಂಡ ಅದ್ಭುತ ಶಾಸ್ತ್ರಜ್ಞರಾಗಿದ್ದವರು, ಡಾಂಬಿಕತನ, ಸಮಾಜದಲ್ಲಿನ ಜಾತೀಯತೆ, ಅಸಮಾನತೆ ಖಂಡಿಸಿದ ಮಹಾಯೋಗಿ ಎಂದು ಹೇಳಿದರು.
ಇವರು ರಚಿಸಿದ 15000 ವಚನಗಳ ಪೈಕಿ ನಶಿಸಿ ಕೆಲ ವಚನಗಳು ಮಾತ್ರ ಉಳಿದಿವೆ. ಅಂಬಿಗರ ಚೌಡಯ್ಯ ಹಾಗೂ ಮಹಾಯೋಗಿ ವೇಮನರ ಸಾಹಿತ್ಯ ಹಾಗೂ ಅವರ ಆದರ್ಶಗಳು ಎಂದಿಗೂ ಈ ಸಮಾಜಕ್ಕೆ ಅಗತ್ಯವಾಗಿದೆ. ಇವುಗಳನ್ನು ಉಳಿಸಿಕೊಳ್ಳುವುದು ಅವರ ಆದರ್ಶಗಳನ್ನು ಪಾಲಿಸಿವುದು ನಮ್ಮ ಕರ್ತವ್ಯವಾಗಿದ ಎಂದು ಹೇಳಿದರು.
ಪಾಲಿಕೆ ಮಹಾಪೌರರಾದ ಜಯಮ್ಮ ಗೋಪಿ ನಾಯ್ಕ್, ಜಿಲ್ಲಾ ಗಂಗಮತ ಮತ್ತು ಬೆಸ್ತ ಸಮಾಜದ ಕಾರ್ಯದರ್ಶಿ ಉಮೇಶ್ ಜೆ, ವೇಮನ ಸಮಾಜದ ಜಿಲ್ಲಾಧ್ಯಕ್ಷರಾದ ವೆಂಕಟರಮಣ ರೆಡ್ಡಿ, ಸುಮತಿ ಜಯಪ್ಪ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರವಿಚಂದ್ರ ಉಪಸ್ಥಿತರಿದ್ದರು.