ಗ್ರಾಮ ವಾಸ್ತವ್ಯ ಕರ‍್ಯಕ್ರಮ ಕೇವಲ ಒಂದು ಗ್ರಾಮಕ್ಕೆ ಸೀಮಿತವಲ್ಲ: ತಹಶೀಲ್ದಾರ ಅಶ್ವಥ್ ಎಂ.ವಿ

ದಾವಣಗೆರೆ :  ಗ್ರಾಮಸ್ಥರು ಮತ್ತು ರ‍್ಕಾರದ ಮಧ್ಯ ಇರುವ ಅಂತರವನ್ನು ಕಡಿಮೆ ಮಾಡುವುದೇ ಗ್ರಾಮ ವಾಸ್ತವ್ಯದ ಉದ್ದೇಶವಾಗಿದೆ. ಸಣ್ಣ ಪುಟ್ಟ ಕೆಲಸಗಳಿಗಾಗಿ ಕಚೇರಿ ಕಚೇರಿ ಅಲೆಯುವುದನ್ನು ತಪ್ಪಿಸಿ ಜನರ ಮನೆಯ ಬಾಗಿಲಿಗೆ ತೆರಳಿ ಸಮಸ್ಯೆಗಳಿಗೆ ಸ್ಪಂದಿಸಲು ಗ್ರಾಮ ವಾಸ್ತವ್ಯ ಕರ‍್ಯಕ್ರಮದ ಉದ್ದೇಶವಾಗಿದ ಎಂದು ತಹಶೀಲ್ದಾರ್ ಅಶ್ವಥ್ ಎಂ.ವಿ ಹೇಳಿದರು.
ದಾವಣಗೆರೆ ತಾಲೂಕಿನ ಆನಗೋಡು ಹೋಬಳಿ ಗಂಗನಕಟ್ಟೆ ಗ್ರಾಮದಲ್ಲಿ ಜ.21 ರ ಶನಿವಾರ ಆಯೋಜಿಸಿದ ಗ್ರಾಮ ವಾಸ್ತವ್ಯ ಕರ‍್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಕ್ರಾಂತಿಕಾರಕ ಬದಲಾವಣೆ ಆಗಿದೆ, ಮೊದಲು ಖಾತೆ ಬದಲಾವಣೆಗೆ ಒಂದು ತಿಂಗಳ ಸಮಯ ಆಗುತ್ತಿತ್ತು ಆದರೆ ಈಗ ಕೇವಲ ಏಳು ದಿನಗಳಲ್ಲಿ ಖಾತೆ ಬದಲಾವಣೆ ಮಾಡಿಕೊಳ್ಳಲಾಗುತ್ತಿದೆ ಎಂದು  ಮಾಹಿತಿ ನೀಡಿದರು.
15 ದಿನಗಳಲ್ಲಿ ಅಂಗವಿಕಲರು, ಹಿರಿಯ ನಾಗರಿಕರು, ವಿಧವೆಯರ ಪಿಂಚಣಿ ಸಕಾಲದಲ್ಲಿ ಒದಗಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು. ಪೌತಿ ಖಾತೆ ಆಂದೋಲನವನ್ನು ಗ್ರಾಮದಲ್ಲಿ ಮಾಡುತ್ತೇವೆ, ಗ್ರಾಮಸ್ಥರಿಗೆ  ಪೌತಿ ಖಾತೆಮಾಡಿಕೊಳ್ಳಲು ಪ್ರಯತ್ನಿಸುತಿದ್ದೇವೆ ಹಾಗೂ ಕರ‍್ಯಕ್ರಮದಲ್ಲಿ ಕೆಲವು ಸೌಲಭ್ಯಗಳನ್ನು ಗ್ರಾಮಸ್ಥರಿಗೆ ನೀಡುತ್ತಿದ್ದೇವೆ ಎಂದು ಹೇಳಿದರು.
ತಾಲೂಕು ಕರ‍್ಯನರ‍್ವಾಹಣಾಧಿಕಾರಿ ಎನ್.ಜಿ. ಆನಂದ್ ಮಾತನಾಡಿ ಈ ಕರ‍್ಯಕ್ರಮವು ಮನೆ ಬಾಗಿಲಿಗೆ ಅಧಿಕಾರಿಗಳ ನಡೆಯಾಗಿದೆ.   ಗ್ರಾಮಸ್ಥರು ಗ್ರಾಮ ಪಂಚಾಯಿತಿಯಲ್ಲಿನ ಯೋಜನೆಗಳ ಅವಕಾಶವನ್ನು ಹೆಚ್ಚಾಗಿ ಬಳಸಿಕೊಳ್ಳುವ ಮೂಲಕ ವೈಯಕ್ತಿಕವಾಗಿ ಅಭಿವೃದ್ಧಿಯನ್ನು ಕಾಣಬೇಕು ಎಂದು ಮನವಿ ಮಾಡಿಕೊಂಡರು.
ಕೃಷಿ ಇಲಾಖೆಯ ಸಹಾಯಕ ಕೃಷಿ ನರ‍್ದೇಶಕರಾದ ಶ್ರೀಧರ್‍ಮರ‍್ತಿ ಮಾತಾನಾಡಿ, ಗ್ರಾಮಕ್ಕೆ ಸಂಬಂಧಿಸಿದಂತೆ ಒಳಗಿಸಲಾದ ಸೌಲಭ್ಯಗಳ ಮಾಹಿತಿ ನೀಡುತ್ತಾ 2021 22 ನೇ ಸಾಲಿನಲ್ಲಿ ಗ್ರಾಮದ 47 ಜನರಿಗೆ ರಿಯಾಯಿತಿ ದರದಲ್ಲಿ ಕೃಷಿ ಯಂತ್ರೋಪಕರಣವನ್ನು ವಿತರಿಸಲಾಗಿದ್ದು, ಪ್ರಸ್ತುತ ಸಾಲಿನಲ್ಲಿಯೂ ಸಹ ಸೌಲಭ್ಯವನ್ನು ಪಡೆದುಕೊಳ್ಳಲು ಅವಕಾಶವಿರುತ್ತದೆ. ಈಗಾಗಲೇ ರ‍್ಜಿಗಳು ಪ್ರಾರಂಭವಾಗಿದ್ದು ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈಕೆವೈಸಿ ಗೆ ನೋಂದಣಿ ಮಾಡಿಕೊಳ್ಳದೆ ಹೋದರೆ ಪಂಚಾಯಿತಿಯ ಬೇರೆ ಬೇರೆ ಯೋಜನೆಗಳು ಪಡೆಯಲು ಅವಕಾಶವಿರುವುದಿಲ್ಲ ಆದ್ದರಿಂದ ಗ್ರಾಮದಲ್ಲಿ ಇಏಙಅ ನೋಂದಣಿ ಮಾಡಿಕೊಳ್ಳದೆ ಇರುವ ಗ್ರಾಮದ 50 ಜನ ರೈತರು  ಕರ‍್ಯಕ್ರಮದಲ್ಲಿ ನೋಂದಣಿ ಮಾಡಿಸಿಕೊಳ್ಳಲು ಅವಕಾಶವಿದೆ.
ಹೋಬಳಿ ಮಟ್ಟದ ರೈತ ಕೇಂದ್ರವನ್ನು ಸಂರ‍್ಕಿಸಿ ಕೀಟನಾಶಕಗಳನ್ನು ರಿಯಾಯಿತಿ ದರದಲ್ಲಿ ಪಡೆದುಕೊಳ್ಳಬೇಕು. ಆನಗೋಡು ಸುತ್ತಮುತ್ತಲಿನ ಪ್ರದೇಶಗಳು ಇತ್ತೀಚಿಗೆ ಹೆಚ್ಚಾಗಿ ರೈತರು ಸೋಯಾಬೀನ್ ಬೆಳೆಯುತ್ತಿದ್ದಾರೆ. ಆದರೆ ಈ ವೇಳೆ ಬೆಳೆಯಲು ಮುಂಗಾರುವಿನ ವಾತಾವರಣ ಸೂಕ್ತವಾಗಿರುವುದರಿಂದ ರೈತರು ದಲ್ಲಿ ಸೋಯಾಬೀನ್ ಬೆಳೆಯಲು ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ತೋಟಗಾರಿಕೆ ಇಲಾಖೆಯ ಸಹಾಯಕ ನರ‍್ದೇಶಕರಾದ ರೇಷಾ್ಮ ರ‍್ವಿನ್ ಮಾತನಾಡಿ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಅಡಿ ಪ್ರದೇಶ ವಿಸ್ತರಣೆಗೆ  ಹಾಗೂ ಉದ್ಯೋಗ ಖಾತ್ರಿ ಯೋಜನೆ ಅಡಿ ವಿವಿಧ ಬೆಳೆ ಬೆಳೆಯಲು ದರದಲ್ಲಿ ಸಹಾಯಧನ ನೀಡಲಾಗುತ್ತಿದೆ.
ಇತ್ತೀಚಿಗೆ ಹೆಚ್ಚಾಗಿ ಅಡಿಕೆ ಬೆಳೆಯುವ ಮಧ್ಯೆ ರೈತರು ಅಂತರವಾಗಿ ಕೋಕೋ ಬೆಳೆಯುವ ಮೂಲಕ ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು. ಹಾಗೂ ಮಳೆಗಾಲದಲ್ಲಿ ತೋಟದಲ್ಲಿ ನೀರು ನಿಂತಾಗ ಅದನ್ನು ಬಸಿಗಾಲುವೆ ಮಾಡುವ ಮೂಲಕ  ಬೇರಿನ ಬೆಳೆ ಕುಂಠಿತವಾಗ ಬಹುದು ಎಂದರು.
143 ರ‍್ಜಿಗಳ ಸ್ವೀಕರಾದ ಸಾಮಾಜಿಕ ಭದ್ರಾತೆ ಯೋಜನೆಯಡಿ ಸ್ಥಳದಲಿ ಮಾಸಾಶಾಸನ ಮಂಜೂರಾತಿ: ಗ್ರಾಮದ ವಿವಿಧ ಸಮಸ್ಯೆಗಳ ಮನವಿಗಳ ಕುರಿತಂತೆ 143 ರ‍್ಜಿಗಳನ್ನು ಸ್ವೀಕರಿಸಲಾಯಿತು. ಮಾಸಾಶಾನ ಹಾಗೂ ಸ್ಥಳದಲ್ಲಿಯೇ ಪರಿಹಾರಿಸಬಹುದಾದದ ಸಮಸ್ಯೆಗಳ ರ‍್ಜಿಗಳನ್ನು ವಿಲೇವಾರಿಗೊಳಿಸಲಾಯಿತು.
ಕರ‍್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಬಿಇಓ, ಸಮಾಜ ಕಲ್ಯಾಣ ಇಲಾಖೆಯ ಡಿಎಸ್‍ಡಬ್ಲ್ಯೂ ಸುನೀತಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನರ‍್ದೇಶಕಿ ವಾಸಂತಿ ಉಪ್ಪಾರ್, ಬೆಸ್ಕಾಂನ ಎಸ್.ಓ ಜಯಣ್ಣ ಇತರರು ಉಪಸ್ಥಿತಿರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!