ಜನವರಿ 24 ರಂದು ನೇರ ಸಂದರ್ಶನ
ದಾವಣಗೆರೆ: ದಾವಣಗೆರೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಜ.24 ರಂದು ಬೆ.10 ಗಂಟೆಗೆ ಜಿಲ್ಲಾಡಳಿತ ಭವನದಲ್ಲಿರುವ ಉದ್ಯೋಗ ವಿನಿಮಯ ಕೇಂದ್ರದಲ್ಲಿ ನೇರ ಸಂದರ್ಶನ ಏರ್ಪಡಿಸಲಾಗಿದೆ.
ಈ ನೇರ ಸಂದರ್ಶನದಲ್ಲಿ ನಗರದ ವಿಶ್ವರಾದ್ಯ ಕ್ಯಾನ್ಸರ್ ಆಸ್ಪತ್ರೆ ಮತ್ತು ರೀಸರ್ಚ್ ಇನ್ಸಿಟ್ಯೂಟ್‍ನವರು ಭಾಗವಹಿಸಲಿದ್ದು, ಬಿ-ಫಾರ್ಮ, ಡಿ-ಫಾರ್ಮ, ಎಮ್-ಫಾರ್ಮ, ಜಿಎನ್‍ಎಮ್, ಬಿಎಸ್ಸಿ(ನರ್ಸಿಂಗ್), ಪದವಿ ಹಾಗೂ ಸ್ನಾತಕೋತ್ತರ ಪದವಿ ಹೊಂದಿದ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಿದ್ದಾರೆ.
ಅರ್ಹ ಅಭ್ಯರ್ಥಿಗಳು ಕನಿಷ್ಠ 2 ಬಯೋಡಾಟಾ, ಆಧಾರ್ ಕಾರ್ಡ್‍ನೊಂದಿಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಕೊಠಡಿ ಸಂಖ್ಯೆ-51, ಜಿಲ್ಲಾಡಳಿತ ಭವನ, ದಾವಣಗೆರೆ ಈ ವಿಳಾಸದಲ್ಲಿ ಭಾಗವಹಿಸಿ ಈ ನೇರ ಸಂದರ್ಶನದÀ ಸದುಪಯೋಗ ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗೆ 08192-259446 6361550016 ಸಂಪರ್ಕಿಸಬಹುದೆಂದು ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.