ಭದ್ರಾದಿಂದ ತುಂಗಾಕ್ಕೆ ನೀರು ಬಿಟ್ಟರೆ ಆಗುವ ಅನಾಹುತಗಳಿಗೆ ಸರ್ಕಾರವೇ ಹೊಣೆ

The government is responsible for the calamities caused by releasing water from Bhadra to Tunga

ಭದ್ರಾದಿಂದ ತುಂಗಾಕ್ಕೆ ನೀರು

ದಾವಣಗೆರೆ : ಭದ್ರಾ ಜಲಾಶಯದಿಂದ ತುಂಗಾಭದ್ರಾ ಜಲಾಶಯಕ್ಕೆ 7 ಟಿಎಂಸಿ ನೀರು ಹರಿಸಿದ್ದೇ ಆದರೆ ಮುಂದಾಗುವ ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಭಾರತೀಯ ರೈತ ಒಕ್ಕೂಟದ ಅಧ್ಯಕ್ಷ ಹೆಚ್.ಆರ್. ಲಿಂಗರಾಜ್ ಎಚ್ಚರಿಸಿದ್ದಾರೆ.
ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಭದ್ರಾ ಜಲಾಶಯದಲ್ಲಿ 173 ಅಡಿ ನೀರು ಲಭ್ಯವಿದೆ. ಅಚ್ಷುಕಟ್ಟಿನಲ್ಲಿ ಭತ್ತ, ತೆಂಗು, ಅಡಿಕೆ, ಕಬ್ಬು ಬೆಳೆಯಲಾಗುತ್ತಿದೆ. ಇತ್ತ ಅಪ್ಪರದ ಭದ್ರಾದವರೂ ನೀರು ಕೇಳುತ್ತಿದ್ದಾರೆ. ನಮಗೆ ಸಂಬಂಧವಿಲ್ಲದ ತುಂಗಭದ್ರದವರೂ ಸಹ ಈಗ ನೀರು‌ ಕೇಳತ್ತಿದ್ದಾರೆ ಎಂದು‌ ಆರೋಪಿಸಿದರು.
ನಮ್ಮ ಜಿಲ್ಲೆಯ ಸಂಸದರು, ಶಾಸಕರು ಪಕ್ಷಬೇಧ ಮರೆತು ರೈತರ ಹಿತದೃಷ್ಟಿಯಿಂದ ಸರ್ಕಾರಕ್ಕೆ ಒತ್ತಾಯಿಸಿ ಭದ್ರಾ ಡ್ಯಾಂನಿಂದ ಒಂದು ಹನಿ ನೀರನ್ನೂ ಬಿಡದಂತೆ ನೋಡಿಕೊಳ್ಳಬೇಕು ಎಂದವರು ಮನವಿ ಮಾಡಿದ್ದಾರೆ‌.
ತುಂಗಭದ್ರಾಗೆ ನೀರು ಹರಿಸದಂತೆ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ  ಎ.ಎಂ. ಮಂಜುನಾಥ, ಬಿ.ಜಿ.‌ಸಂಗನಗೌಡ್ರು, ಮಹೇಶ್ವರಪ್ಪ ಕುಂದುವಾಡ, ಎ.ಬಿ. ಕರಿಬಸಪ್ಪ, ಪುನಿತ್ ಕುಮಾರ್, ಎಸ್.‌ನಾಗರಾಜ ರಾವ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!