ದಾವಣಗೆರೆ

​Panchamasali: ಪಂಚಮಸಾಲಿ ಟ್ರಸ್ಟ್ ಎಚ್ಚರಿಕೆ ನಡುವೆಯೂ ವಚನಾನಂದ ಶ್ರೀಗಳಿಂದ ಶಕ್ತಿ ಪ್ರದರ್ಶನ

Share
Share

ದಾವಣಗೆರೆ: (Panchamasali) ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಬಳಿಯಿರುವ ಪಂಚಮಸಾಲಿ ಮಠದಲ್ಲಿ ಬಸವ ಜಯಂತಿ ಆಚರಣೆ ಜೋರಾಗಿ ನಡೆಯುತ್ತಿದ್ದು, ಮಠದ ಒಳಗಿನ ಸಂಘರ್ಷ ಈಗ ಬೀದಿಗೆ ಬಂದಿದೆ. ಟ್ರಸ್ಟ್‌ನ ಎಚ್ಚರಿಕೆ ಮತ್ತು ಉಚ್ಚಾಟನೆಯ ನಡುವೆಯೂ ವಚನಾನಂದ ಸ್ವಾಮೀಜಿ ಅವರು ಭವ್ಯವಾಗಿ ಬಸವ ಜಯಂತಿ ಆಚರಿಸಲಾಗಿದೆ.

ಸಂಘರ್ಷಕ್ಕೆ ಕಾರಣವೇನು?

​ಕಳೆದ ಏಪ್ರಿಲ್ 13 ರಿಂದ ಮಠದ ಟ್ರಸ್ಟ್ ಮತ್ತು ವಚನಾನಂದ ಸ್ವಾಮೀಜಿ ಅವರ ನಡುವೆ ತೀವ್ರ ಸಂಘರ್ಷ ಶುರುವಾಗಿದೆ. ಸ್ವಾಮೀಜಿಯವರನ್ನು ಮಠದಿಂದ ಉಚ್ಚಾಟನೆ ಮಾಡಿರುವುದು ಈ ವಿವಾದಕ್ಕೆ ಪ್ರಮುಖ ಕಾರಣವಾಗಿದೆ, ಇದರ ಜೊತೆಗೆ, 2008 ರಿಂದ ನಡೆದ ಮಠದ ವ್ಯವಹಾರಗಳ ಲೆಕ್ಕ ನೀಡುವಂತೆ ಭಕ್ತರ ಒಂದು ಗುಂಪು ಅಭಿಯಾನ ಆರಂಭಿಸಿರುವುದು ಬೆಂಕಿಗೆ ತುಪ್ಪ ಸುರಿದಂತಾಗಿದೆ.

ವಚನಾನಂದ ಶ್ರೀಗಳ ಶಕ್ತಿ ಪ್ರದರ್ಶನ?

​ಇಂದು ಸಂಜೆ ನಡೆಯುತ್ತಿರುವ ಬಸವ ಜಯಂತಿ ಕಾರ್ಯಕ್ರಮವು ಕೇವಲ ಧಾರ್ಮಿಕ ಆಚರಣೆಯಾಗಿ ಉಳಿಯದೆ, ಸ್ವಾಮೀಜಿಯವರ ಪರೋಕ್ಷ ಶಕ್ತಿ ಪ್ರದರ್ಶನದ ವೇದಿಕೆಯಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರನ್ನು ಆಹ್ವಾನಿಸಲಾಗಿದ್ದು, ಸ್ವಾಮೀಜಿ ಪರ ಇರುವ ಗುಂಪು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಹಗಲಿರುಳು ಶ್ರಮಿಸುತ್ತಿದೆ.

ಲೆಕ್ಕ ನೀಡಲು ಮುಂದಾದ ಟ್ರಸ್ಟಿಗಳು

​ಭಕ್ತರ ಸತತ ಆಗ್ರಹಕ್ಕೆ ಮಣಿದಿರುವ ಪಂಚಮಸಾಲಿ ಟ್ರಸ್ಟಿಗಳು, 2008 ರಿಂದ 2026 ರವರೆಗಿನ ಮಠದ ಆದಾಯ ಮತ್ತು ವೆಚ್ಚದ ಲೆಕ್ಕ ನೀಡಲು ಸಿದ್ಧರಾಗಿದ್ದಾರೆ. ಏಪ್ರಿಲ್ 27 ರಂದು ಈ ಲೆಕ್ಕಾಚಾರವನ್ನು ಬಹಿರಂಗಪಡಿಸಲು ಅವರು ನಿರ್ಧರಿಸಿದ್ದಾರೆ,  ಲೆಕ್ಕ ನೀಡಿದ ನಂತರ ಸ್ವಾಮೀಜಿಯವರು ಪೀಠ ಬಿಟ್ಟು ಹೋಗುವಂತೆ ಆಗ್ರಹಿಸಿದ್ದಾರೆ.

ಮಠದ ಆವರಣದಲ್ಲಿ ಬಿಗುವಿನ ವಾತಾವರಣ

​ಪ್ರಸ್ತುತ ಮಠದ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸ್ವಾಮೀಜಿ ಪರ ಮತ್ತು ವಿರೋಧ ಎಂಬ ಎರಡು ಗುಂಪುಗಳ ನಡುವೆ ಸಂಘರ್ಷ ಉಂಟಾಗುವ ಆತಂಕ ಎದುರಾಗಿದೆ. ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಎನ್ನುವಂತಹ ಪರಿಸ್ಥಿತಿ ಮಠದಲ್ಲಿ ಕಂಡುಬರುತ್ತಿದೆ.

​ಒಟ್ಟಾರೆಯಾಗಿ, ಬಸವಣ್ಣನವರ ತತ್ವ ಸಾರಬೇಕಾದ ಮಠದಲ್ಲಿ ಈಗ ಲೆಕ್ಕಾಚಾರ ಮತ್ತು ಉಚ್ಚಾಟನೆಯ ವಿವಾದ ಮುನ್ನೆಲೆಗೆ ಬಂದಿರುವುದು ಭಕ್ತರಲ್ಲಿ ಆತಂಕ ಮೂಡಿಸಿದೆ.

Share

Leave a comment

Leave a Reply

Your email address will not be published. Required fields are marked *

Don't Miss

ದೇಶ

Women:ಮಹಿಳಾ ಮೀಸಲಾತಿಗೆ ವಿರೋಧವಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

*ಕ್ಷೇತ್ರ ಮರುವಿಂಗಡನೆ ಮತ್ತು ಮಹಿಳಾ ಮೀಸಲಾತಿಯನ್ನು ಒಟ್ಟಿಗೆ ತಂದಿದ್ದರಿಂದ ಮಹಿಳಾ ಮೀಸಲಾತಿ ಮಸೂದೆ ವಿಫಲವಾಗಿದೆ* ಬೆಂಗಳೂರು :(Women) ಮಹಿಳಾ ಮೀಸಲಾತಿಗೆ ನಮ್ಮ ವಿರೋಧವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು...

ದಾವಣಗೆರೆ

Water: ಕುಡಿಯುವ ನೀರಿನ ಸಮಸ್ಯೆ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಸಲ್ಲದು: ಜಿಲ್ಲೆಯ 103 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ – ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳಿಗೆ ಸಿಇಒ ಕಟ್ಟುನಿಟ್ಟಿನ ಸೂಚನೆ

ದಾವಣಗೆರೆ: (Water Crisis) ಜಿಲ್ಲೆಯಲ್ಲಿ ಬೇಸಿಗೆಯ ಹಿನ್ನೆಲೆಯಲ್ಲಿ ಉದ್ಭವಿಸಬಹುದಾದ ಕುಡಿಯುವ ನೀರಿನ ಸಮಸ್ಯೆಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು ಹಾಗೂ ಈ ನಿಟ್ಟಿನಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ...

Related Articles
ದಾವಣಗೆರೆರಾಜ್ಯ / ಕರ್ನಾಟಕ

Transfer: ಕಂದಾಯ ಇಲಾಖೆ ಅಧಿಕಾರಿಗಳ ವರ್ಗಾವಣೆ: ದಾವಣಗೆರೆ ಜಿಲ್ಲೆಯ ವಿವರಗಳು

ದಾವಣಗೆರೆ: (Transfer) ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯು ರಾಜ್ಯದ ಹಲವು ತಹಶೀಲ್ದಾರ್‌ಗಳನ್ನು ವರ್ಗಾವಣೆ ಮಾಡಿ ಇಂದು...

ದಾವಣಗೆರೆಅಪರಾಧರಾಜ್ಯ / ಕರ್ನಾಟಕ

Road: ರಸ್ತೆ ಸುರಕ್ಷತೆ ಮತ್ತು ಕಾನೂನುಬದ್ಧ ವಾಹನ ನಿರ್ವಹಣೆ. ದ್ವಿಚಕ್ರ ವಾಹನಗಳಿಗೆ ಸೀಮಿತವಾದ ತಪಾಸಣೆ.!

ದಾವಣಗೆರೆ: ( Road) ಭಾರತೀಯ ರಸ್ತೆಗಳಲ್ಲಿ ಸಂಚರಿಸುವ ಪ್ರತಿ ವಾಹನವು ನಿರ್ದಿಷ್ಟ ಸುರಕ್ಷತಾ ಮಾನದಂಡಗಳಿಗೆ ಒಳಪಟ್ಟಿರುತ್ತದೆ....

ದಾವಣಗೆರೆ

Corporation: ಶಿಥಿಲಾವಸ್ಥೆಯಲ್ಲಿರುವ ಅಪಾಯಕಾರಿ ಕಟ್ಟಡಗಳನ್ನು 7 ದಿನಗಳೊಳಗೆ ತೆರವುಗೊಳಿಸಸಲು ಪಾಲಿಕೆ ಆಯುಕ್ತರ ಆದೇಶ

ದಾವಣಗೆರೆ: (Corporation):  ಹಳೆಯ ಮತ್ತು ಶಿಥಿಲಗೊಂಡ ಕಟ್ಟಡಗಳಿಂದ ಸಂಭವಿಸಬಹುದಾದ ಮುಂಜಾಗ್ರತಾ ಹಾನಿಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ, ದಾವಣಗೆರೆ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಶಿಥಿಲಾವಸ್ಥೆ ಅಥವಾ ಅಪಾಯಕಾರಿ ಸ್ಥಿತಿಯಲ್ಲಿರುವ ಸಂಪೂರ್ಣ ಕಟ್ಟಡ ಅಥವಾ ಕಟ್ಟಡದ ಭಾಗವನ್ನು ಈ ಪ್ರಕಟಣೆ ಹೊರಡಿಸಿದ 7 ದಿನಗಳೊಳಗಾಗಿತೆರವುಗೊಳಿಸಬೇಕು ಅಥವಾ ರಿಪೇರಿ ಮಾಡಿಕೊಳ್ಳಬೇಕು ಎಂದು ಮಹಾನಗರಪಾಲಿಕೆ ಆಯುಕ್ತರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಸೂಚನೆಯನ್ವಯ ಪಾಲಿಕೆ ವ್ಯಾಪ್ತಿಯ ಕೆಲವು ವಾರ್ಡ್‌ಗಳಲ್ಲಿ ಸ್ಥಳ ಪರಿಶೀಲನೆ ನಡೆಸಿದಾಗ ಕೆಲವು ಕಟ್ಟಡಗಳು ಸಾರ್ವಜನಿಕರಿಗೆ ಹಾಗೂ ನೆರೆ-ಹೊರೆಯ ಆಸ್ತಿಪಾಸ್ತಿಗಳಿಗೆ ಅಪಾಯವನ್ನುಂಟು ಮಾಡುವ ಸ್ಥಿತಿಯಲ್ಲಿರುವುದು ಕಂಡುಬಂದಿದೆ. ಸದರಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡ ಅಥವಾ ಅದರ ಭಾಗದಿಂದ ಯಾವುದೇ ರೀತಿಯ ಪ್ರಾಣಹಾನಿ ಅಥವಾ ಆಸ್ತಿ ಹಾನಿ ಸಂಭವಿಸಿದಲ್ಲಿ ಅದಕ್ಕೆ ಸಂಬಂಧಪಟ್ಟ ಮಾಲೀಕರು ಅಥವಾ ಅನುಭೋಗದಾರರೇ ಸಂಪೂರ್ಣ ಜವಾಬ್ದಾರರಾಗಿರುತ್ತಾರೆ, ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಆ್ಯಕ್ಟ್ 1976ರ ಸೆಕ್ಷನ್ 322ರ ಅನ್ವಯ, ಮಾಲೀಕರು ತಕ್ಷಣವೇ ಕಟ್ಟಡದ ರಿಪೇರಿ/ತೆರವು ಕಾರ್ಯಾಚರಣೆ ನಡೆಸಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುಂಜಾಗ್ರತೆಯಾಗಿ ಕಟ್ಟಡದ ಸುತ್ತಲೂ ಸುರಕ್ಷತಾ ಬೇಲಿಯನ್ನು ಕಡ್ಡಾಯವಾಗಿ ಅಳವಡಿಸಬೇಕು. ನಿಗದಿತ 07 ದಿನಗಳ ಅವಧಿಯೊಳಗೆ ಮಾಲೀಕರು ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ, ಯಾವುದೇ ಪೂರ್ವಭಾವಿ ನೋಟೀಸ್ ನೀಡದೆ ಪಾಲಿಕೆ ವತಿಯಿಂದಲೇ ಸಂಪೂರ್ಣ ಕಟ್ಟಡ ಅಥವಾ ಅದರ ಭಾಗವನ್ನು ತೆರವುಗೊಳಿಸಲಾಗುವುದು. ಇದಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ಸಂಬಂಧಪಟ್ಟ ಮಾಲೀಕರು/ಅನುಭೋಗದಾರರಿಂದಲೇ ವಸೂಲಿ ಮಾಡಲಾಗುವುದು. ಇಂತಹ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಒಳಗೆ ಸಾರ್ವಜನಿಕರು ಪ್ರವೇಶಿಸಬಾರದು ಹಾಗೂ ಇಂತಹ ಅಪಾಯಕಾರಿ ಕಟ್ಟಡಗಳ ಸುತ್ತಮುತ್ತ ಸಂಚರಿಸುವಾಗ ಸಾರ್ವಜನಿಕರು ಅತ್ಯಂತ ಎಚ್ಚರಿಕೆಯಿಂದ ಇರಬೇಕಾಗಿ ಮಹಾನಗರ ಪಾಲಿಕೆ ಆಯುಕ್ತರಾದ ಮಹಾಂತೇಶ್‌  ತಿಳಿಸಿದ್ದಾರೆ.