ದಾವಣಗೆರೆ

Trust: ಹರಿಹರ ಪಂಚಮಸಾಲಿ ಪೀಠದಲ್ಲಿ ಕಿಚ್ಚು: ಲೆಕ್ಕ ಕೊಟ್ಟು ಮಠಕ್ಕೆ ಕಾಲಿಡಿ ಎಂದು ಟ್ರಸ್ಟಿಗಳಿಗೆ ಹೆಚ್ ಎಸ್ ಶಿವಶಂಕರ್ ಎಚ್ಚರಿಕೆ!

Share
Share

ದಾವಣಗೆರೆ:(Trust)” ಮಠದ ಆಸ್ತಿ ಮತ್ತು ಹಣಕ್ಕೆ ಲೆಕ್ಕ ಕೇಳುವ ಹಕ್ಕು ಸಮಾಜದ ಪ್ರತಿಯೊಬ್ಬರಿಗೂ ಇದೆ. ಲೆಕ್ಕ ಕೊಡದ ಟ್ರಸ್ಟಿಗಳಿಗೆ ಮಠದೊಳಗೆ ಪ್ರವೇಶವಿಲ್ಲ” ಎಂದು ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಗುಡುಗಿದ್ದಾರೆ.

ಹರಿಹರದ ಪಂಚಮಸಾಲಿ ಗುರುಪೀಠದಲ್ಲಿ ಆಯೋಜಿಸಲಾಗಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಠದ ಟ್ರಸ್ಟಿಗಳ ಸರ್ವಾಧಿಕಾರಿ ಧೋರಣೆ ಹಾಗೂ ವಚನಾನಂದ ಶ್ರೀಗಳ ಉಚ್ಚಾಟನೆ ವಿಚಾರವಾಗಿ ಸುದೀರ್ಘವಾಗಿ ಕಿಡಿಕಾರಿದರು.

ವರದಿಯ ಪ್ರಮುಖ ಅಂಶಗಳು:

1. ಚಪ್ಪಲಿ ಏಟು ತಿನ್ನುವ ಸ್ಥಿತಿ ಬರದಿರಲಿ.!

“ಮೊನ್ನೆ ಮಠಕ್ಕೆ ಟ್ರಸ್ಟಿಗಳು ಕಳ್ಳರ ರೀತಿ ಪೊಲೀಸ್ ಭದ್ರತೆಯಲ್ಲಿ ಬಂದು ಹೋಗಿದ್ದೀರಿ. ಸಮಾಜದ ಜನರು ಚಪ್ಪಲಿ ತೋರಿಸಿದಾಗಲೇ ನಿಮಗೆ ಬುದ್ಧಿ ಬರಬೇಕಿತ್ತು. ಜನರ ಆಕ್ರೋಶಕ್ಕೆ ಗುರಿಯಾಗಿ ಇಂತಹ ಜೀವನ ನಡೆಸುವ ಬದಲು ಗೌರವಯುತವಾಗಿ ಲೆಕ್ಕ ಒಪ್ಪಿಸಿ” ಎಂದು ಟ್ರಸ್ಟಿಗಳ ವಿರುದ್ಧ ಹರಿಹಾಯ್ದರು.

2. ಸ್ವಾಮೀಜಿ ಕುರಿಯಾಗಿದ್ದಾರೆ, ಟ್ರಸ್ಟಿಗಳು ತೋಳಗಳು!

“ವಚನಾನಂದ ಶ್ರೀಗಳು ಮಠಕ್ಕೆ ಬರುವ ಮೊದಲೇ ನಾನು ಎಚ್ಚರಿಸಿದ್ದೆ. ತೋಳಗಳ ಗುಂಪಿಗೆ ಕುರಿ ಬಂದಂತಾಗುತ್ತದೆ ಎಂದು ಹೇಳಿದ್ದೆ. ಇಂದು ಟ್ರಸ್ಟಿಗಳು ಶ್ರೀಗಳನ್ನು ಕೈಗೊಂಬೆ ಮಾಡಿಕೊಂಡಿದ್ದಾರೆ. ಸ್ವಾಮೀಜಿಗಳು ತಮ್ಮ ಮಾತು ಕೇಳಲಿಲ್ಲ ಎಂಬ ಒಂದೇ ಕಾರಣಕ್ಕೆ ಅವರನ್ನು ಉಚ್ಚಾಟನೆ ಮಾಡಿರುವುದು ಖಂಡನೀಯ. ಸಮಾಜಕ್ಕೆ ಈ ಟ್ರಸ್ಟಿಗಳ ಕೊಡುಗೆ ಶೂನ್ಯ” ಎಂದು ಆಕ್ರೋಶ ವ್ಯಕ್ತಪಡಿಸಿದರು.

3. ನಾನು ‘ಕೆಟ್ಟ ಹಣ್ಣಲ್ಲ’, ನೆರಳು ಕೊಡುವ ‘ಬೀಜದ ಹಣ್ಣು’!

ನನ್ನನ್ನು ಕೆಟ್ಟ ಹಣ್ಣು ಎಂದು ನಿಂದಿಸಿ ಬುಟ್ಟಿಯಿಂದ ಹೊರಹಾಕುತ್ತೇವೆ ಎಂದಿದ್ದರು. ಆದರೆ ನಾನು ಕೆಟ್ಟ ಹಣ್ಣಲ್ಲ, ಸಮಾಜಕ್ಕೆ ನೆರಳು ನೀಡುವ ಬೀಜದ ಹಣ್ಣು. ಈಗ ನಾನು ಮಠ ಮತ್ತು ಸ್ವಾಮೀಜಿಗಳ ಪರವಾಗಿ ನಿಂತಿದ್ದೇನೆ. ಬಾಡಿಗಾರ್ಡ್‌ಗಳನ್ನು ಇಟ್ಟುಕೊಂಡು ಬೆದರಿಸಲು ಬಂದರೆ ಇಲ್ಲಿ ಏನೂ ನಡೆಯಲ್ಲ ಎಂದು ಟ್ರಸ್ಟಿಗಳಿಗೆ ನೇರ ಸವಾಲು ಹಾಕಿದರು.

4. ರಾಜಕೀಯ ಹೇಳಿಕೆಗಳಿಂದ ದೂರವಿರಿ

ಶ್ರೀಗಳಿಗೆ ಕಿವಿಮಾತು ಹೇಳಿದ ಶಿವಶಂಕರ್, “ಸ್ವಾಮೀಜಿಗಳೇ, ರಾಜಕಾರಣಿಗಳ ಜೊತೆ ಸ್ನೇಹ ಇರಲಿ, ಆದರೆ ರಾಜಕೀಯದಿಂದ ನೀವು ದೂರವಿರಿ. ವೇದಿಕೆಗಳ ಮೇಲೆ ರಾಜಕೀಯ ಹೇಳಿಕೆ ನೀಡುವುದನ್ನು ನಿಲ್ಲಿಸಿ” ಎಂದು ಸಲಹೆ ನೀಡಿದರು.

5. ಕಾನೂನು ಹೋರಾಟಕ್ಕೆ ಸಿದ್ಧ

“ದುಡ್ಡು ಕೊಟ್ಟು ಮಕ್ಕಳನ್ನು ಕರೆತಂದು ಸ್ವಾಮೀಜಿ ವಿರುದ್ಧ ಸುಳ್ಳು ಹೇಳಿಕೆ ಕೊಡಿಸುತ್ತಿದ್ದಾರೆ. ಶ್ರೀಗಳ ಮೇಲೆ ಹೊರಿಸಿರುವ 12 ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ಪ್ರಕರಣ ದಾಖಲಿಸಲು ಸಂಚು ರೂಪಿಸಿದರೆ ನಾವು ಕಾನೂನುಬದ್ಧವಾಗಿ ಎದುರಿಸಲು ಸಿದ್ಧರಿದ್ದೇವೆ. ನಾನು ಶ್ರೀಗಳ ಬೆನ್ನಿಗೆ ದೃಢವಾಗಿ ನಿಲ್ಲುತ್ತೇನೆ” ಎಂದು ಭರವಸೆ ನೀಡಿದರು.

“ಹರಿಹರದಿಂದ ಪ್ರಾರಂಭವಾಗಿರುವ ಈ ಪ್ರತಿರೋಧದ ಕಿಚ್ಚು ಇಡೀ ರಾಜ್ಯಾದ್ಯಂತ ಹರಡಲಿದೆ. ಸಮಾಜದ ಆಸ್ತಿಯನ್ನು ಲೂಟಿ ಹೊಡೆಯಲು ಬಿಡುವುದಿಲ್ಲ.”
— ಹೆಚ್.ಎಸ್. ಶಿವಶಂಕರ್, ಮಾಜಿ ಶಾಸಕರು.

Share

Leave a comment

Leave a Reply

Your email address will not be published. Required fields are marked *

Don't Miss

ದಾವಣಗೆರೆರಾಜಕೀಯರಾಜ್ಯ / ಕರ್ನಾಟಕ

BSY: ಚಿತ್ರದುರ್ಗದಲ್ಲಿ ನಾಳೆ ‘ಬಿಎಸ್ ವೈ ಅಭಿಮಾನೋತ್ಸವ’ದ ಅಬ್ಬರ: ಅಮಿತ್ ಶಾ ಭಾಗಿ, ದಾವಣಗೆರೆಯಿಂದ ಹೊರಟ ಯಡಿಯೂರಪ್ಪ ಕುಟುಂಬ!

ದಾವಣಗೆರೆ/ಚಿತ್ರದುರ್ಗ: (BSY) ಕರ್ನಾಟಕ ರಾಜಕಾರಣದ ಧ್ರುವತಾರೆ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಾರ್ವಜನಿಕ ಜೀವನದ 50 ವರ್ಷಗಳ ಸುವರ್ಣ ಸಂಭ್ರಮದ "ಅಭಿಮಾನೋತ್ಸವ"ಕ್ಕೆ ಕೋಟೆ ನಾಡು ಚಿತ್ರದುರ್ಗ ಸಜ್ಜಾಗಿದೆ. ಮೇ 9ರ...

ಅಪರಾಧದಾವಣಗೆರೆ

Lokayukta: ದಾವಣಗೆರೆ ಪಾಲಿಕೆ ವಲಯ-1ರ ಮೇಲೆ ಲೋಕಾಯುಕ್ತ ದಾಳಿ: ಫೋನ್-ಪೇ ಮೂಲಕ ಲಂಚದ ಆರೋಪ, ದಾಖಲೆಗಳ ಪರಿಶೀಲನೆ

ದಾವಣಗೆರೆ: (Lokayukta) ಮಹಾನಗರ ಪಾಲಿಕೆ ವಲಯ-1ರ ಕಚೇರಿಯಲ್ಲಿ ನಡೆಯುತ್ತಿದ್ದ ಎನ್ನಲಾದ ಸಾಲು ಸಾಲು ಅಕ್ರಮಗಳ ಕುರಿತು ಬಂದ ದೂರುಗಳ ಹಿನ್ನೆಲೆಯಲ್ಲಿ, ಇಂದು ಮುಂಜಾನೆಯಿಂದಲೇ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ತಪಾಸಣೆ...

Related Articles
ದಾವಣಗೆರೆರಾಜ್ಯ / ಕರ್ನಾಟಕ

Lokayukta SP: ದಾವಣಗೆರೆ ನೂತನ ಲೋಕಾಯುಕ್ತ ಎಸ್‌ಪಿಯಾಗಿ ಆ್ಯಂಟನಿ ಜಾನ್ ಅಧಿಕಾರ ಸ್ವೀಕಾರ: ದೂರು ಸಲ್ಲಿಕೆಗೆ ಕರೆ

ದಾವಣಗೆರೆ: (Lokayukta SP) ದಾವಣಗೆರೆ ಜಿಲ್ಲೆಯ ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾಗಿ (ಎಸ್‌ಪಿ) ಆ್ಯಂಟನಿ ಜಾನ್ ಜೆ.ಕೆ...

ದಾವಣಗೆರೆಅಪರಾಧರಾಜ್ಯ / ಕರ್ನಾಟಕ

Sand: ಹರಿಹರ ತುಂಗಭದ್ರಾ ನದಿ ಪಾತ್ರದಲ್ಲಿ ಭಾರಿ ಅಕ್ರಮ ಮರಳು ದಂಧೆ ಶಂಕೆ! ನಿಷೇಧಿತ ಯಂತ್ರಗಳು, ತೆಪ್ಪ ಬಳಸಿ ಮರಳು ಲೂಟಿ!

ಹರಿಹರ (Sand):ದಾವಣಗೆರೆ ಜಿಲ್ಲೆಯ ಹರಿಹರ ನಗರ ವ್ಯಾಪ್ತಿಯ ತುಂಗಭದ್ರಾ ನದಿಯಲ್ಲಿ ಕಾನೂನು ಬಾಹಿರವಾಗಿ ಮರಳು ಗಣಿಗಾರಿಕೆ...

ದಾವಣಗೆರೆ

DJ: ಗಣೇಶೋತ್ಸವ ಮೆರವಣಿಗೆಯಲ್ಲಿ ಡಿ.ಜೆ ಸಿಸ್ಟಂ ಬಳಕೆಗೆ ಕಟ್ಟುನಿಟ್ಟಿನ ನಿಯಮ: ಜಿಲ್ಲಾಧಿಕಾರಿ ಆದೇಶ

ದಾವಣಗೆರೆ: (DJ) ದಾವಣಗೆರೆ ಜಿಲ್ಲೆಯಾದ್ಯಂತ ದಿನಾಂಕ 14-09-2026 ರಿಂದ ಆರಂಭವಾಗುವ ಗಣೇಶ ಹಬ್ಬದ ಆಚರಣೆ ಹಾಗೂ...