ಪ್ರಗತಿ ರಥಕ್ಕೆ ರಾಜ್ಯ ಬಿಜೆಪಿ ಕಾರ್ಯದರ್ಶಿ ಶ್ರೀಮತಿ ಸುಧಾ ಜಯರುದ್ರೇಶ್ ಚಾಲನೆ
ದಾವಣಗೆರೆ: ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ 24ನೇ ವಾರ್ಡಿನ ರಾಮ್ ಅಂಡ್ ಕೋ ವೃತ್ತದಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನು ಪ್ರಸ್ತುತಪಡಿಸುವ ಪ್ರಗತಿ ರಥಕ್ಕೆ ರಾಜ್ಯ ಬಿಜೆಪಿ ಕಾರ್ಯದರ್ಶಿ ಶ್ರೀಮತಿ ಸುಧಾ ಜಯರುದ್ರೇಶ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ 24ನೇ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯರಾದ ಪ್ರಸನ್ನ ಕುಮಾರ್ ಮಹಾಶಕ್ತಿಕೆಂದ್ರ ಪ್ರಮುಖರಾದ ಪದ್ಮನಾಭ ಶೆಟ್ಟಿ, ಉಷಾ ಶೆಟ್ಟಿ, ಅಭಾವಿಪ ನಗರಧ್ಯಕ್ಷರಾದ ಪವನ್ ರೇವಣಕರ್, ಉತ್ತರ ಯುವ ಮೋರ್ಚಾ ಅಧ್ಯಕ್ಷರಾದ ಸಚಿನ್ ವೆರ್ಣೇಕರ್ ವಾರ್ಡಿನ ಪ್ರಮುಖರಾದ ಶಂಕರ್ ಪಿಸಾಳೆ, ಕಿರಣ್, ಸೋಹನ್ ರೆವಣ್ಕರ್, ಕಾಂತೇಶ್, ಕಿರಣ್ ಟಿ ಎನ್, ರಘು ತೊಗಟ, ವಿವೇಕ್ ಪವಾರ್, ಹರೀಶ್, ಸುನಿಲ್, ಮದನ್, ಸುರೇಶ್, ಇನ್ನಿತರರು ಉಪಸ್ಥಿತರಿದ್ದರು.