ಹೊನ್ನಾಳಿ ಶಾಸಕ ರೇಣುಕಾಚಾರ್ಯ ಜತೆ ಪೋಟೋ ತೆಗೆಸಲು ಮುಗಿಬಿದ್ದ ಮಹಿಳೆಯರು.

ಹೊನ್ನಾಳಿ ಶಾಸಕ ರೇಣುಕಾಚಾರ್ಯ ಜತೆ ಪೋಟೋ ತೆಗೆಸಲು ಮುಗಿಬಿದ್ದ ಮಹಿಳೆಯರು.

ಹೊನ್ನಾಳಿ :  ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅಂದ್ರೆ ಸಾಕು ಒಂಚೂರು ಡಿಫೆರೆಂಟ್ ಇದ್ದೇ ಇರುತ್ತದೆ…ಏನೇ ಕಾರ್ಯಕ್ರಮ ಮಾಡಿದರೂ ಅದರಲ್ಲೊಂದು ವಿಭಿನ್ನತೆ ಕಾಣುವುದು ಮಾಮೂಲು….
ಹಾಗಾದ್ರೆ ಅಂತ ವ್ಯತ್ಯಾಸವೇನು ಎಂಬುದು ಎಲ್ಲರಿಗೂ ಕುತುಹೂಲ ಇದ್ದೇ ಇರುತ್ತದೆ…ಹೊನ್ನಾಳಿಯ ಹಿರೇಕಲ್ಮಠದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಹೊನ್ನಾಳಿ ತಾಲೂಕು ಪಂಚಾಯಿತಿ , ಜಿಲ್ಲಾಪಂಚಾಯಿತಿ ಇವರ ಸಂಯುಕ್ತ ಆಶ್ರಯದಲ್ಲಿ ಅದ್ದೂರಿಯಾಗಿ ನಡೆಯಿತು. ಈ ಸಂದರ್ಭದಲ್ಲಿ ಮಹಿಳೆಯರು ನಾ ಮುಂದು, ತಾಮುಂದು ಎಂದು ಶಾಸಕ ರೇಣುಕಾಚಾರ್ಯ ಜತೆ ಸೆಲ್ಪಿಗೆ ಮುಗಿಬಿದ್ದಿದ್ದರು.


ಸಾಮಾನ್ಯವಾಗಿ ಚಲನ ಚಿತ್ರ ನಟರು, ನಟಿಯರ ಜತೆ  ಡ್ಯಾನ್ಸಗಳ ಸೆಲ್ಪೀ ತೆಗೆದುಕೊಳ್ಳುವುದು ಕಾಮನ್ ಆಗಿದ್ದು, ರಾಜಕಾರಣಿಗಳ ಜತೆ ಅಷ್ಟೋಂದು ಸೆಲ್ಪಿ ತೆಗೆದುಕೊಳ್ಳೋದಿಲ್ಲ..ಆದರೆ ಶಾಸಕ ರೇಣುಕಾಚಾರ್ಯರ ಜತೆ ಮಹಿಳೆಯರು ಸೆಲ್ಪಿತೆಗೆದುಕೊಂಡರು…ಶಾಸಕ ರೇಣುಕಾಚಾರ್ಯ ಸಹ ಯಾವುದೇ ಮುಜುಗರ ಇಲ್ಲದೇ ಮೊಬೈಲ್ ಕ್ಲಿಕಿಸಿಕೊಂಡರು. ಮಹಿಳೆಯರು ಈ ಸೆಲ್ಪಿ ತೆಗೆದುಕೊಂಡು ಅವರ ಫೇಸ್ಬುಕ್, ಇನ್ಸ್ಟ್ರಾಗ್ರಾಮ್ ಸೇರಿದಂತೆ ವಾಟ್ಸ್ಪ್ ಸ್ಟೇಟಸ್ ಗಳನ್ನು ಹಾಕಿಕೊಂಡರು…


ಹೊನ್ನಾಳಿ ತಾಲೂಕಿನಲ್ಲಿ ಶಾಸಕ ರೇಣುಕಾಚಾರ್ಯ ಅಂದ್ರೆ ಸಾಕು ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರ ತನಕ ಸೆಲ್ಪಿಗೆ ಮುಗಿಬೀಳುವುದು ಕಾಮನ್ ಆಗಿದ್ದು, ಅಂತೆಯೇ ಮಹಿಳಾ ದಿನಾಚರಣೆಯಲ್ಲಿ ಮಹಿಳೆಯರು ಸೆಲ್ಪಿ ತೆಗೆಸಿಕೊಂಡರು. ಈ ಸಂದರ್ಭದಲ್ಲಿ ಶಾಸಕ ರೇಣುಕಾಚಾರ್ಯರ ಆಗಮನದ ಹಿನ್ನೆಲೆಯಲ್ಲಿ ಬಂದ ನೋಡಮ್ಮಾ..ಬಂದ ನೋಡಮ್ಮಾ ಎಂಬ ಹಾಡು ಕೇಳುಗರನ್ನು ರಂಜಿಸಿತು..ಸಾಮಾನ್ಯವಾಗಿ ಶಾಸಕ ರೇಣುಕಾಚಾರ್ಯ ಬರುವಾಗ ಸಿಂಹಾದ್ರಿಯ ಸಿಂಹ, ಸಿಂಹ ಎಂಬ ಹಾಡಿನ ಜತೆ ಹೊನ್ನಾಳಿ ಹೋರಿ ಎಂದು ಕೂಗುತ್ತಿದ್ದರು.. ಆದರೆ ಈ ಮಹಿಳಾ ದಿನಾಚರಣೆ ಇಂತಹ ಜೈಕಾರಗಳು ಕಂಡು ಬರಲಿಲ್ಲ. ಒಟ್ಟಾರೆ ಹೊನ್ನಾಳಿಯಲ್ಲಿ ಶಾಸಕರು ಸೆಲಿಬ್ರಿಟಿಯಾಗಿದ್ದು, ರೇಣುಕಾಚಾರ್ಯ ಹೋದ ಕಡೆಯಲ್ಲಾ ಯುವತಿಯರು, ಮಹಿಳೆಯರು ಸೆಲ್ಪಿಗೆ ಮುಗಿ ಬೀಳುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!