ಫೈರ್ ಆಫಿಸರ್ ಲೊಕಾ ಬಲೆಗೆ: ಲಂಚದ ರೂಪದಲ್ಲಿ ಲ್ಯಾಪ್‌ಟಾಪ್ ಸ್ವೀಕಾರಿಸುವಾಗ ಟ್ರ್ಯಾಪ್

ಫೈರ್ ಆಫಿಸರ್ ಲೊಕಾ ಬಲೆಗೆ: ಲಂಚದ ರೂಪದಲ್ಲಿ ಲ್ಯಾಪ್‌ಟಾಪ್ ಸ್ವೀಕಾರಿಸುವಾಗ ಟ್ರ್ಯಾಪ್

ದಾವಣಗೆರೆ: ದಾವಣಗೆರೆ ನಗರದ ದಾವಣಗೆರೆ ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ  ಬಸವಪ್ರಭು ಶರ್ಮ ಹಾಗೂ ರಾಜೇಶ್ ಎಸ್.ಕೆ. ಫೈರ್‌ಮ್ಯಾನ್, ಲೋಕಾಯುಕ್ತದ ಖೆಡ್ಡಾಗೆ ಬಿದ್ದಿದ್ದಾರೆ.

ಇವರುಗಳು ದಾವಣಗೆರೆಯ ತಮ್ಮ ಕಾರ್ಯಾಲಯದಲ್ಲಿ ಹರಿಹರ ನಗರ ವಾಸಿ ಡಿ.ಜಿ.ರಘುನಾಥ್, ಛೇರ್‌ಮನ್‌ ಶ್ರೀ ದುರುಗೋಜಿ ಗೋಪಾಲ್‌ರಾವ್, ಶಿಕ್ಷಣ ಮತ್ತು ಚಾರಿಟೇಬಲ್ ಟ್ರಸ್ಟ್, ಹರಿಹರ ಇವರಿಗೆ ತಮ್ಮ ವಿಧ್ಯಾವಾಹಿನಿ ಶಾಲೆಗೆ ಅಗ್ನಿಶಾಮಕ ಎನ್.ಓ.ಸಿ. ನೀಡಲು ಒಂದು ಡೆಲ್ ಕಂಪನಿಯ ಲ್ಯಾಪ್‌ಟಾಪ್‌ ಕೊಡುವಂತೆ ಲಂಚದ ಬೇಡಿಕೆ ಇಟ್ಟದ್ದರಂತೆ.ಈ ಕುರಿತು ಲೋಕಾಯುಕ್ತ ಠಾಣೆಯಲ್ಲಿ ಮೊ.ಸಂಖ್ಯೆ:9/2023 ಕಲಂ 7(ಎ) ಭ್ರಷ್ಟಚಾರ ತಡೆ ಕಾಯ್ದೆ 1988, ತಿದ್ದುಪಡಿ ಕಾಯ್ದೆ 2018 ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.

ದಿನಾಂಕ:19-04-2023 ರಂದು ಲಂಚದ ರೂಪದಲ್ಲಿ ಸುಮಾರು ರೂ.38,500/- ಗಳ ಬೆಲೆಯ ಡೆಲ್ ಕಂಪನಿಯ ಲ್ಯಾಪ್‌ಟಾಪ್‌ ಅನ್ನು ಸ್ವೀಕರಿಸುವಾಗ ದಾವಣಗೆರೆ ಲೋಕಾಯುಕ್ತ ಘಟಕದ ಪೊಲೀಸ್ ಅಧೀಕ್ಷಕರಾದ ಶ್ರೀ ಎಂ.ಎಸ್.ಕೌಲಾಪೂರೆ, ರವರ ನೇತೃತ್ವದಲ್ಲಿ ಪೊಲೀಸ್ ಉಪಾಧೀಕ್ಷಕರಾದ ಶ್ರೀ ರಾಮಕೃಷ್ಣ ಕೆ.ಜಿ., ಪೊಲೀಸ್ ಇನ್ಸ್‌ಪೆಕ್ಟ‌ ಶ್ರೀ ರಾಷ್ಟ್ರಪತಿ ಹೆಚ್‌.ಎಸ್. ಶ್ರೀ ಆಂಜನೇಯ ಎನ್.ಹೆಚ್. ಹಾಗೂ ಸಿಬ್ಬಂದಿ ವರ್ಗದವರಾದ ಶ್ರೀ ಚಂದ್ರಶೇಖರ್ ಎನ್‌.ಆರ್. ಸಿ.ಹೆಚ್.ಸಿ. ಶ್ರೀ ಆಂಜನೇಯ ವಿ.ಹೆಚ್. ಸಿ.ಹೆಚ್.ಸಿ. ಶ್ರೀ ವೀರೇಶಯ್ಯ ಎಸ್.ಎಂ. ಸಿ.ಹೆಚ್.ಸಿ. ಶ್ರೀ ಮುಜೀಬ್‌ಖಾನ್, ಸಿ.ಪಿ.ಸಿ., ಶ್ರೀ ಅಂಗೇಶ್ ಎಸ್.ಎನ್. ಸಿ.ಪಿ.ಸಿ. ಶ್ರೀ ಬಸವರಾಜ ಸಿ.ಎಸ್. ಎ.ಪಿ.ಸಿ. ಶ್ರೀ ಕೃಷ್ಣನಾಯ್ಕ ಜೆ .ಎ.ಪಿ.ಸಿ. ಇನ್ನೂ ಮುಂತಾದರೊಂದಿಗೆ ಕಾರ್ಯಚರಣಿ ನಡೆಸಿ ಟ್ರ್ಯಾಪ್ ಮಾಡಿ ದಸ್ತಗಿರಿ ಮಾಡಲಾಗಿದೆ. ತನಿಖೆ ಮುಂದುವರಿದಿದೆ ಎಂದು ಲೋಕಾಯುಕ್ತರಿಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!