ಲಂಬಾಣಿ ಮಹಿಳೆಯರ ಜೊತೆ ಎಸ್.ಎಸ್. ಮಲ್ಲಿಕಾರ್ಜುನ್ ನೃತ್ಯ

ದಾವಣಗೆರೆ: ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಮತ ಪ್ರಚಾರ ನಡೆಸುವಾಗ ಲಂಬಾಣಿ ಮಹಿಳೆಯರೊಂದಿಗೆ ಸ್ಟೆಪ್ಸ್ ಹಾಕಿದರು.
ಓಬಜ್ಜಿಹಳ್ಳಿ ಗ್ರಾಮದಲ್ಲಿ ಮತ ಪ್ರಚಾರಕ್ಕಾಗಿ ಮಲ್ಲಿಕಾರ್ಜುನ್ ಅವರು ಆಗಮಿಸಿದಾಗ ಲಂಬಾಣಿ ಮಹಿಳೆಯರು ನೃತ್ಯ ಮಾಡುತ್ತಾ, ಮಲ್ಲಿಕಾರ್ಜುನ್ ಅವರಿಗೆ ನೃತ್ಯ ಮಾಡುವಂತೆ ಕೈ ಹಿಡಿದು ಪ್ರೇರೇಪಿಸಿದರು.
ಈ ವೇಳೆ ಮಹಿಳೆಯರ ಜೊತೆ ಮಲ್ಲಿಕಾರ್ಜುನ್ ಸ್ಟೆಪ್ಸ್ ಹಾಕಿದಾಗ, ಅಭಿಮಾನಿಗಳು, ಕಾರ್ಯಕರ್ತರು ಜೋರಾಗಿ ಕೇಕೆ, ಶಿಳ್ಳೆ ಹಾಕಿ ಸಂಭ್ರಮಿಸಿದರು.