ದಾವಣಗೆರೆ : ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ಚೆಕ್ ಪೋಸ್ಟ್ ವ್ಯವಸ್ಥೆ ಮಾಡಲಾಗಿದೆ. ಏಪ್ರಿಲ್ 27 ರಂದು ರೂ.39464 ಮೌಲ್ಯದ 135.635 ಲೀ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.
ಜಿಲ್ಲೆಯಾದ್ಯಂತ ವಿವಿಧ ಚೆಕ್ ಪೋಸ್ಟ್ ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಕೈಗೊಳ್ಳಲಾಗುತ್ತಿದ್ದು, ಇದುವರೆಗೆ ರೂ.9474057 ನಗದು, ರೂ.24272193.99 ಮೌಲ್ಯದ 23170.97 ಲೀ ಮದ್ಯ, 3.853 ಕೆ.ಜಿ ಮಾದಕ ವಸ್ತು ಅಂದಾಜು ಮೌಲ್ಯ ರೂ.71610, ರೂ.8498048 ಮೌಲ್ಯದ ಕುಕ್ಕರ್ ಸೇರಿದಂತೆ ಇತರೆ ವಸ್ತುಗಳು ಒಟ್ಟು ರೂ.4.23 ಕೋಟಿಯಷ್ಟು ನಗದು ಮತ್ತು ಇತರೆ ವಸ್ತುಗಳನ್ನು ನೀತಿ ಸಂಹಿತೆ ಆರಂಭವಾದಾಗಿನಿಂದ ಇಲ್ಲಿಯವರೆಗೆ ವಶಪಡಿಸಿಕೊಳ್ಳಲಾಗಿದೆ.
ಏ.27 ರಂದು ಪೊಲೀಸ್ ಇಲಾಖೆಯಿಂದ 48.55 ಲೀ ಮತ್ತು ಅಬಕಾರಿ ಇಲಾಖೆಯಿಂದ 87.085 ಲೀ ಮದ್ಯವನ್ನು ಕಾರ್ಯಾಚರಣೆ ಮಾಡಿ ವಶಪಡಿಸಿಕೊಳ್ಳಲಾಗಿದೆ.
