ಬಿಐಇಟಿಯಲ್ಲಿ ಕಾಂಗ್ರೆಸ್ ಸಮಾನ ಮನಸ್ಕರ ಸಭೆ ಶಿವಶಂಕರಪ್ಪ-ಮಲ್ಲಿಕಾರ್ಜುನ್ ಗೆಲ್ಲಿಸಲು ಪಣ

ಬಿಐಇಟಿಯಲ್ಲಿ ಕಾಂಗ್ರೆಸ್ ಸಮಾನ ಮನಸ್ಕರ ಸಭೆ ಶಿವಶಂಕರಪ್ಪ-ಮಲ್ಲಿಕಾರ್ಜುನ್ ಗೆಲ್ಲಿಸಲು ಪಣ

ದಾವಣಗೆರೆ: ನಗರದ ಬಾಪೂಜಿ ಅತಿಥಿ ಗೃಹದಲ್ಲಿ ದಾವಣಗೆರೆ ದಕ್ಷಿಣ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪನವರು ಮತ್ತು ದಾವಣಗೆರೆ ಉತ್ತರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಸ್.ಎಸ್. ಮಲ್ಲಿಕಾರ್ಜುನ್ ರವರ ಪರವಾಗಿ ಮತಯಾಚಿಸುವ ಹಿನ್ನೆಲೆಯಲ್ಲಿ ಬಾಪೂಜಿ ಅತಿಥಿ ಗೃಹದಲ್ಲಿ ಸಮಾನ ಮನಸ್ಕರ ಸಭೆಯನ್ನು ಆಯೋಜಿಸಲಾಗಿತ್ತು.

ಎರಡು ಕ್ಷೇತ್ರಗಳ ವ್ಯಾಪ್ತಿಯಲ್ಲಿನ ಸರ್ಕಾರಿ, ಖಾಸಗಿ ಶಾಲಾ ಕಾಲೇಜುಗಳ ನಿವೃತ್ತ ಪ್ರಾಂಶುಪಾಲರುಗಳು , ಪ್ರೋಪಸರ್‌ಗಳು, ನೌಕರರು ಮತ್ತು ಬಾಪೂಜಿ ವಿದ್ಯಾ ಸಂಸ್ಥೆಯ ನೌಕರ ವರ್ಗದವರು ಭಾಗವಹಿಸಿದ್ದರು.

ಈ ಸಭೆಯಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಹೆಚ್.ಕೆ. ಲಿಂಗರಾಜು, ನಗರದ ಅಭಿವೃದ್ಧಿಗೆ ಶಾಮನೂರು ಶಿವಶಂಕರಪ್ಪ ಹಾಗೂ ಎಸ್‌.ಎಸ್‌ ಮಲ್ಲಿಕಾರ್ಜುನ್‌ರವರ ಕೊಡುಗೆ ಅಪಾರವಾದದ್ದು, ನಗರದಲ್ಲಿ ನಿರ್ಮಿಸಿರುವ ಗಾಜಿನ ಮನೆ ವಿಶ್ವದಲ್ಲಿಯೇ 3ನೇ ಅತೀ ದೊಡ್ಡ ಗಾಜಿನ ಮನೆಯಾಗಿದ್ದು ಇದನ್ನು ನಿರ್ಮಿಸುವಲ್ಲಿ ಇರ್ವರು ಕಾರಣೀಭೂತರಾಗಿದ್ದು, ಮುಂದೆ ನಡೆಯುವ ಚುನಾವಣೆಯಲ್ಲಿ ಇರ್ವರನ್ನು ಗೆಲ್ಲಿಸಬೇಕೆಂದು ಕರೆ ನೀಡಿದರು.

ರಾಜ್ಯ ವಿವಿ ಕಾಲೇಜು ಅಧ್ಯಾಪಕರ ಸಂಘದ ಅಧ್ಯಕ್ಷ ಸಿ.ಹೆಚ್. ಮುರುಗೇಂದ್ರಪ್ಪ ಮಾತನಾಡುತ್ತಾ, ಇಬ್ಬರು ಅಭ್ಯರ್ಥಿಗಳು ಜನ ಸೇವೆಯೇ ಜನಾರ್ಧನ ಸೇವೆಯೆಂದು ನಂಬಿ, ದೀನದಲಿತರ ಮತ್ತು ಬಡವರ ಸೇವೆಯನ್ನು ಮಾಡುತ್ತಾ ನಗರದಲ್ಲಿ ಸಾಕಷ್ಟು ಅಭಿವೃದ್ಧಿಯನ್ನು ಮಾಡುತ್ತಾ ಬಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಗರವನ್ನು ಮಾದರಿ ನಗರವನ್ನಾಗಿ ನಿರ್ಮಿಸುವ ಪಣತೊಟ್ಟಿರುವ ನಮ್ಮ ಅಭ್ಯರ್ಥಿಗಳಿಗೆ ಮತಚಲಾಯಿಸಿ ವಿಜಯಶಾಲಿಗಳಾಗಿ ಮಾಡಬೇಕೆಂದು ಮನವಿ ಮಾಡಿಕೊಂಡರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಬಾಪೂಜಿ ವಿದ್ಯಾ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಎಂ.ಜಿ. ಈಶ್ವರಪ್ಪ, ಕಾಂಗ್ರೆಸ್ ನ ಇಬ್ಬರೂ ಅಭ್ಯರ್ಥಿಗಳು ಉತ್ಸಾಹದ ಚಿಲುಮೆಯಾಗಿದ್ದು ಇಬ್ಬರು ಅಭ್ಯರ್ಥಿಗಳಿಗೆ ಇಬ್ಬರು ಅಭ್ಯರ್ಥಿಗಳಿಗೆ ತಮ್ಮ ಹಾಗೂ ಕುಟುಂಬದವರ ಮತ್ತು ಅಕ್ಕಪಕ್ಕದವರ ಮತಗಳನ್ನು ನೀಡಿ ನಗರದ ಅಭಿವೃದ್ಧಿಯ ಜೊತೆಗೆ ಶಾಂತಿ ಸಹಬಾಳ್ವೆ ಮತ್ತು ನಮದಿಯಿಂದ ನಗರದ ಜನತೆ ಬಾಳಲು ಸಹಕರಿಸಬೇಕೆಂದು ತಿಳಿಸಿಕೊಟ್ಟರು.

ಸಭೆಯಲ್ಲಿ ನಿವೃತ್ತ ಪ್ರಾಚಾರ್ಯ ಡಾ|| ಹದಡಿ ಯಲ್ಲಪ್ಪ, ಕಲಮನಹಳ್ಳಿ, ವೃಷಭೇಂದ್ರಪ್ಪ, ದ್ಯಾಮಣ್ಣ, ಶಕುಂತಲಮ್ಮ, .ಜಿ. ಶಿವಲಿಂಗಪ್ಪ, ತಿಮ್ಮಣ್ಣ ಕಾಡಜ್ಜಿ, ಕೆ.ಎಸ್‌. ಈಶ್ವರಪ್ಪ, ಭರತ್‌ರಾಜ್, ಜಿ.ಎಸ್‌. ರವಿ ಸೇರಿದಂತೆ ಇತರರು ಭಾಗವಹಿಸಿದ್ದರು. ಪ್ರೋಫೆಸರ್ ಜೆ.ಪಿ. ದೇಸಾಯಿ ಪ್ರಾರ್ಥಿಸಿದರು. ಶಿವಪ್ರಕಾಶ್ ಸ್ವಾಗತಿಸಿದರು. ಎಂ ರುದ್ರೇಶ್ ನಿರೂಪಿಸಿ, ವಂದಿಸಿದರು.

 

Leave a Reply

Your email address will not be published. Required fields are marked *

error: Content is protected !!