ಡಿಕೆಶಿ ಹೆಸರಲ್ಲಿ ಶಿವಗಂಗಾ ಬಸವರಾಜು ಪ್ರಮಾಣ ವಚನ
ಬೆಂಗಳೂರು: 16ನೇ ವಿಧಾನಸಭೆಯ ಮೊದಲ ಅಧಿವೇಶನ ಸೋಮವಾರದಿಂದ ಆರಂಭವಾಗಿದ್ದು, ನೂತನ ಶಾಸಕರು ಪ್ರಮಾಣವಚನ ಸ್ವೀಕಾರ ಮಾಡುತ್ತಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಮಾಣವಚನ ಸ್ವೀಕಾರ ಮಾಡಿದ ಬಳಿಕ, ಬಸವರಾಜು ಅವರ ಹೆಸರನ್ನು ವಿಧಾನಸಭೆಯ ಕಾರ್ಯದರ್ಶಿ ಅವರು ಕರೆದರು.
ಹಸಿರು ಶಾಲು ಧರಿಸಿ ಬಂದಿದ್ದ ಅವರು, ‘ಭಗವಂತ ಮತ್ತು ನನ್ನ ಆರಾಧ್ಯ ದೈವ ಡಿ.ಕೆ ಶಿವಕುಮಾರ್ ಸಾಹೇಬರ ಮೇಲೆ ಪ್ರಮಾಣ ಮಾಡುತ್ತೇನೆ‘ ಎಂದು ಪ್ರಮಾಣವಚನ ಸ್ವೀಕಾರ ಮಾಡಿದರು.