ವಿಧಾನ ಸೌಧದ ಗಾಂಧಿ ಪ್ರತಿಮೆ ಬಳಿ: ಬಿಜೆಪಿ ನಾಯಕರಿಂದ ಪ್ರತಿಭಟನೆ
ಬೆಂಗಳೂರು: ವಿಧಾನ ಸಭೆ ಕಲಾಪದಲ್ಲಿ ಬಿಜೆಪಿಗರು ಮಹಾ ಮೈತ್ರಿ ಕೂಟಕ್ಕೆ ಅತಿಥಿ ಉಪಚಾರಕ್ಕೆ ಐಎಎಸ್ ಅಧಿಕಾರಿಗಳನ್ನು ಬಳಸಿರುವ ವಿಚಾರವಾಗಿ ವಿರೋಧ ವ್ಯಕ್ತ ಪಡಿಸಿದರು.
ಕಾಂಗ್ರೆಸ್ ಮಹಾ ಮೈತ್ರಿ ಗೆ ಆಗಮಿಸಿದ ನಾಯಕರಿಗೆ ಐಎಎಸ್ ಅಧಿಕಾರಿಗಳಿಂದ ಉಪಚಾರ ಮಾಡಿಸಲಾಗಿದೆ ಎಂಬ ಆರೋಪದಡಿ ಬಿಜೆಪಿ ನಾಯಕರು ಸದನದಲ್ಲಿ ಮಾತಿನ ಚಕಮಕಿ ನಡೆಸಿದರು.ಜೊತೆಗೆ ಕೇವಲ ಮಾತಿನ ಚಕಮಕಿ ಅಷ್ಟೇ ಆಗಿಲ್ಲ ಸದನದ ಬಾವಿಗಿಳಿದು ಬಿಜೆಪಿ ನಾಯಕರು ವಿಧೇಯಕ ಪತ್ರದ ಜೊತೆಗೆ ಬಿಲ್ ಗಳನ್ನು ಹರಿದು ಸ್ಪೀಕರ್ ರುದ್ರಪ್ಪ ಲಂಬಾಣಿ ಅವರ ಮೇಲೆ ಎಸೆದು ಅಸಭ್ಯ ವರ್ತನೆ ಎಸಗಿದರು.
ಈ ಕಾರಣದಿಂದ 10 ಮಂದಿ ಬಿಜೆಪಿ ನಾಯಕರನ್ನು ಸದನದಿಂದ ಅಮಾನತು ಮಾಡಲಾಗಿತ್ತು. ಈ ವಿಚಾರವಾಗಿ ಜುಲೈ 20 ಗುರುವಾರ ವಿಧಾನ ಸೌಧದ ಗಾಂಧಿ ಪ್ರತಿಮೆ ಬಳಿ ಬಿಜೆಪಿ ನಾಯಕರು ಪ್ರತಿಭಟನೆಯಲ್ಲಿ ನಿರತರಾದರು. ರಾಜ್ಯ ಸರ್ಕಾರದ ವಿರುದ್ಧ ಘೊಷಣೆ ಕೂಗಿ ಪ್ರೊಟೆಸ್ಟ್ ಮಾಡಿದರು. ಅಮಾನತು ಆದ ಶಾಸಕರಿಂದ ಈ ಪ್ರತಿಮಭಟನೆ ಕೈಗೊಳ್ಳಲಾಗಿತ್ತು.